ಪರ್ತ್: ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ ದ್ವಿಶತಕದ ಆಟದಿಂದ ಮೂರನೇ ದಿನದಾಟದಲ್ಲಿ ಟೀಂ ಇಂಡಿಯಾ 6 ವಿಕೆಟ್ ನಷ್ಟಕ್ಕೆ 487 ರನ್ ಗಳಿಸಿ ಡಿಕ್ಲೇರ್ ಘೋಷಿಸಿದೆ.
ಆಸ್ಟ್ರೇಲಿಯಾ ಗೆಲುವಿಗೆ 534 ರನ್‌ಗಳ ಗುರಿ ನೀಡಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್‌ನಲ್ಲಿ 4.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 12 ರನ್ ಗಳಿಸಿದ್ದು, ಸೋಲಿನ ಭೀತಿಯಲ್ಲಿದೆ.
ಜೈಸ್ವಾಲ್, ಕೊಹ್ಲಿ ಕಮಾಲ್
ಮೊದಲ ಇನ್ನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಯಶಸ್ವಿ ಜೈಸ್ವಾಲ್ 2ನೇ ಇನ್ನಿಂಗ್ಸ್‌ನಲ್ಲಿ ಶತಕ ಗಳಿಸಿ ಮಿಂಚಿದ್ದಾರೆ. ಇವರ ಬೆನ್ನಲ್ಲೇ ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಿ ಶತಕ ಸಿಡಿಸಿದರು. ಟೆಸ್ಟ್ ಕ್ರಿಕೆಟ್‌ನಲ್ಲಿ 30ನೇ ಶತಕ ಗಳಿಸಿದ ಕೊಹ್ಲಿ ದಾಖಲೆ ಬರೆದಿದ್ದಾರೆ.
ಕೆ.ಎಲ್.ರಾಹುಲ್ (77), ದೇವದತ್ತ ಪಡಿಕ್ಕಲ್ (25), ವಾಷಿಂಗ್ಟನ್ ಸುಂದರ್ (29), ನಿತೀಶ್ ಕುಮಾರ್ ರೆಡ್ಡಿ (38) ತಂಡಕ್ಕೆ ನೆರವಾದರು.