ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಆರಂಭಿಕ ಹಿನ್ನಡೆಯನ್ನು ಅನುಭವಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಜೋಶ್ ಹೇಜಲ್‍ವುಡ್ 2 ವಿಕೆಟ್ ಕೀಳುವ ಮೂಲಕ ಆರಂಭದಲ್ಲೇ ಆಘಾತ ನೀಡಿದರು. ಉತ್ತಮ ಬ್ಯಾಟಿಂಗ್ ಲಯದಲ್ಲಿರುವ ವಿರಾಟ್ ಕೊಹ್ಲಿ 3 ರನ್ ಗಳಿಸಿ ಔಟಾದರು. ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಉಸ್ಮಾನ್ ಖವಾಜ ಗಲ್ಲಿಯಲ್ಲಿ ಹಾರಿ ಹಿಡಿದ ಅತ್ಯುತ್ತಮ ಕ್ಯಾಚ್ ಗೆ ಕೊಹ್ಲಿ ಪೆವಿಲಿಯನ್ ಸೇರಿದರು.
Advertisement
Advertisement
ತಂಡದ ಮೊತ್ತ 3 ಆಗಿದ್ದಾಗ 2 ರನ್ ಗಳಿಸಿದ್ದ ರಾಹುಲ್ ಔಟಾದರೆ 11 ರನ್ ಗಳಿಸಿ ಮುರಳಿ ವಿಜಯ್ ಔಟಾದರು. ಅಜಿಂಕ್ಯಾ ರೆಹಾನೆ 13 ರನ್ ಗಳಿಸಿ ಪ್ಯಾಟ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದರು. ಬಿರುಸಿನ ಆಟವಾಡಿದ ರೋಹಿತ್ ಶರ್ಮಾ 37 ರನ್(61 ಎಸೆತ, 2 ಬೌಂಡರಿ, 3 ಸಿಕ್ಸರ್) ಸಿಡಿಸಿ ಲಿಯಾನ್ ಗೆ ವಿಕೆಟ್ ಒಪ್ಪಿಸಿದರು.
Advertisement
ಇತ್ತೀಚಿನ ವರದಿ ಬಂದಾಗ 39 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು ಭಾರತ 88 ರನ್ ಗಳಿಸಿದೆ. ಚೇತೇಶ್ವರ ಪೂಜಾ 19 ರನ್ ಗಳಿಸಿದ್ದರೆ, ರಿಷಬ್ ಪಂತ್ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
Advertisement
Incredible from @Uz_Khawaja! #AUSvIND | @bet365_aus pic.twitter.com/eLgBLnQssM
— cricket.com.au (@cricketcomau) December 6, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv