ಕಟಕ್: ಲಂಕಾ ವಿರುದ್ಧ ಮೊದಲ ಟಿ 20 ಪಂದ್ಯವನ್ನು ಭಾರತ 93 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಗೆಲ್ಲಲು 181 ರನ್ ಗಳ ಗುರಿಯನ್ನು ಪಡೆದ ಲಂಕಾ 87 ಆಲೌಟ್ ಆಯಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 16 ಓವರ್ ಗಳಲ್ಲಿ ಸರ್ವಪತನ ಕಂಡಿತು. ಚಹಲ್ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದರು.
Advertisement
ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ 38 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ಔಟಾದರು. 17 ರನ್(13 ಎಸೆತ, 2 ಬೌಂಡರಿ) ಗಳಿಸಿದ್ದಾಗ ಕ್ಯಾಚ್ ನೀಡಿ ಹೊರ ನಡೆದರು. ನಂತರ ಎರಡನೇ ವಿಕೆಟ್ ಗೆ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ 63 ರನ್ ಪೇರಿಸಿದರು.
Advertisement
ಕೆಎಲ್ ರಾಹುಲ್ 61 ರನ್(48 ಎಸೆತ, 7 ಬೌಂಡರಿ, 1 ಸಿಕ್ಸರ್), ಶ್ರೇಯಸ್ ಅಯ್ಯರ್ 24 ರನ್(20 ಎಸೆತ, 3 ಬೌಂಡರಿ) ಹೊಡೆದು ಔಟಾದರು.
Advertisement
ಶ್ರೇಯಸ್ ಅಯ್ಯರ್ ಔಟಾಗುವ ವೇಳೆ ಟೀಂ ಇಂಡಿಯಾದ ಮೊತ್ತ 14.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿತ್ತು. ನಂತರ ಧೋನಿ ಮತ್ತು ಮನೀಷ್ ಪಾಂಡೆ ಕೊನೆಯ 34 ಎಸೆತದಲ್ಲಿ 68 ರನ್ ಪೇರಿಸಿದ ಪರಿಣಾಮ ಭಾರತ 180 ರನ್ ಗಳಿಸಿತು.
Advertisement
ಧೋನಿ ಔಟಾಗದೇ 39 ರನ್(22 ಎಸೆತ, 4 ಬೌಂಡರಿ, 1 ಸಿಕ್ಸರ್), ಮನೀಷ್ ಪಾಂಡೆ 32 ರನ್(18 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. 17ನೇ ಓವರ್ ನಲ್ಲಿ 19ರನ್ ಬಂದಿದ್ದರೆ, 18 ನೇ ಓವರ್ ನಲ್ಲಿ 9 ರನ್, 19ನೇ ಓವರ್ ನಲ್ಲಿ 21 ರನ್, 20ನೇ ಓವರ್ ನಲ್ಲಿ 12 ರನ್ ಬಂದಿತ್ತು.
4 ಓವರ್ ಎಸೆದು 23 ರನ್ ನೀಡಿ 4 ವಿಕೆಟ್ ಪಡೆದ ಚಹಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಎರಡನೇ ಟಿ20 ಪಂದ್ಯ ಇಂದೋರ್ ನಲ್ಲಿ ಶುಕ್ರವಾರ ನಡೆಯಲಿದೆ.