ಜೈಪುರ: ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಅರ್ಧಶತಕದಿಂದ ಭಾರತ ನ್ಯೂಜಿಲೆಂಡ್ ವಿರುದ್ಧ ಇನ್ನೂ ಎರಡು ಎಸೆತ ಇರುವಂತೆಯೇ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ.
ಗೆಲ್ಲಲು 165 ರನ್‌ಗಳ ಸವಾಲು ಪಡೆದ ಭಾರತ 19.4 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 166 ರನ್ ಗಳಿಸಿತು ಜಯಗಳಿಸಿತು.
Advertisement
17ನೇ ಓವರಿನ 4 ಎಸೆತದಲ್ಲಿ ಸೂರ್ಯಕುಮಾರ್ ಯಾದವ್ ಔಟ್ ಆದರು. ಬೆನ್ನಲ್ಲೇ ಶ್ರೇಯಸ್ ಅಯ್ಯರ್, ಕೊನೆಯ ಓವರಿನಲ್ಲಿ ವೆಂಕಟೇಶ್ ಅಯ್ಯರ್ ಔಟಾದಾಗ ಪಂದ್ಯ ರೋಚಕ ತಿರುವು ಪಡೆದುಕೊಂಡಿತ್ತು.
Advertisement
Advertisement
ಕೊನೆಯ 6 ಎಸೆತಗಳಲ್ಲಿ 10 ರನ್ ಬೇಕಿತ್ತು. ಮಿಚೆಲ್ ಎಸೆದ ಮೊದಲ ಎಸೆತ ವೈಡ್ ಆದರೆ ನಂತರದ ಎಸೆತವನ್ನು ವೆಂಕಟೇಶ್ ಅಯ್ಯರ್ ಬೌಂಡರಿಗೆ ಅಟ್ಟಿದರು. ಎರಡನೇ ಎಸೆತವನ್ನು ರಿವರ್ಸ್ ಸ್ವೀಪ್ ಮಾಡಿ ಬೌಂಡರಿಗೆ ಯತ್ನಿಸಿದ್ದ ಅಯ್ಯರ್ ಕ್ಯಾಚ್ ನೀಡಿ ಔಟಾದರು. ಮೂರನೇ ಎಸೆತ ವೈಡ್ ಆದರೆ ನಂತರದ ಎಸೆತದಲ್ಲಿ ಅಕ್ಷರ್ ಪಟೇಲ್ 1 ರನ್ ಓಡಿದರು. 4ನೇ ಎಸೆತವನ್ನು ಪಂತ್ ಬೌಂಡರಿಗೆ ಅಟ್ಟಿ ಭಾರತಕ್ಕೆ ಜಯವನ್ನು ತಂದುಕೊಟ್ಟರು.
Advertisement
ರೋಹಿತ್ ಶರ್ಮಾ ಮತ್ತು ರಾಹುಲ್ ಮೊದಲ ವಿಕೆಟಿಗೆ 31 ಎಸೆತಗಳಲ್ಲಿ 50 ರನ್ ಜೊತೆಯಾಟವಾಡಿದರು. ರಾಹುಲ್ 15 ರನ್(14 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.
ಎರಡನೇ ವಿಕೆಟಿಗೆ ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ 49 ಎಸೆತಗಳಿಗೆ 59 ರನ್ ಜೊತೆಯಾಟವಾಡಿದರು. ರೋಹಿತ್ ಶರ್ಮಾ 48 ರನ್ ಗಳಿಸಿ(36 ಎಸೆತ, 5 ಬೌಂಡರಿ, 2 ಸಿಕ್ಸರ್) ಹೊಡೆದರು. ಸೂರ್ಯಕುಮಾರ್ ಯಾದವ್ 62 ರನ್(40 ಎಸೆತ, 6 ಬೌಂಡರಿ, 3 ಸಿಕ್ಸರ್) ರಿಷಭ್ ಪಂತ್ ಔಟಾಗದೇ 17 ರನ್(17 ಎಸೆತ, 2 ಬೌಂಡರಿ) ಹೊಡೆದರು. ಬೌಲ್ಟ್ 2 ವಿಕೆಟ್ ಪಡೆದರೆ ಸೌಥಿ, ಸ್ಯಾಂಟ್ನರ್ ಮಿಶೆಲ್ ತಲಾ ಒಂದೊಂದು ವಿಕೆಟ್ ಪಡೆದರು.
ನ್ಯೂಜಿಲೆಂಡ್ ಆರಭದಲ್ಲೇ ವಿಕೆಟ್ ಕಳೆದುಕೊಂಡಿತು. ಭುವನೇಶ್ವರ್ ಕುಮಾರ್ ಎಸೆದ ಮೊದಲ ಓವರಿನಲ್ಲೇ ಮಿಶೆಲ್ ಅವರನ್ನು ಬೌಲ್ಡ್ ಮಾಡಿದರು. ಆದರೆ ಎರಡನೇ ವಿಕೆಟಿಗೆ ಗುಪ್ಟಿಲ್ ಮತ್ತು ಮಾರ್ಕ್ ಚಾಪ್ಮನ್ 77 ಎಸೆತಗಳಲ್ಲಿ 109 ರನ್ ಚಚ್ಚಿ ಭದ್ರ ಅಡಿಪಾಯ ಹಾಕಿದರು. ಮಾರ್ಟಿನ್ ಗುಪ್ಟಿಲ್ 70 ರನ್(42 ಎಸೆತ, 3 ಬೌಂಡರಿ, 4 ಸಿಕ್ಸರ್) ಮಾರ್ಕ್ ಮಾರ್ಕ್ ಚಾಪ್ಮನ್ 63(50 ಎಸೆತ, 6 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಅಂತಿಮವಾಗಿ ನ್ಯೂಜಿಲೆಂಡ್ 6 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.
ಭುವನೇಶ್ವರ್ ಕುಮಾರ್ ಮತ್ತು ಅಶ್ವಿನ್ ತಲಾ 2 ವಿಕೆಟ್ ಪಡೆದರೆ, ದೀಪಕ್ ಚಹರ್, ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು.