ಹುಬ್ಬಳ್ಳಿ: ಸ್ವಿಜರ್ಲ್ಯಾಂಡ್ ಮೂಲದ ಐಕ್ಯೂ ಏರ್ ಸಂಸ್ಥೆ ವಿಶ್ವದ ವಿವಿಧ ದೇಶಗಳ ಮತ್ತು ಪ್ರಮುಖ ನಗರಗಳ ವಾಯುಗುಣಮಟ್ಟದ ವರದಿ ತಯಾರಿಸಿದ್ದು, ಈ ವರದಿಯಲ್ಲಿ ರಾಜಧಾನಿ ಬೆಂಗಳೂರನ್ನು ಹಿಂದೆಯಿಟ್ಟು ಹುಬ್ಬಳ್ಳಿ ಪ್ರಥಮ ಸ್ಥಾನವೇರಿ ಕುಖ್ಯಾತಿಯನ್ನು ಪಡೆದುಕೊಂಡಿದೆ.
ದೇಶದ ಮಹಾನಗರಗಳಿಗೆ ಪೈಪೋಟಿ ನೀಡುವಷ್ಟು ಅತಿ ವೇಗವಾಗಿ ಬೆಳೆಯುತ್ತಿರುವ ನಗರಗಳ ಪೈಕಿ ಹುಬ್ಬಳ್ಳಿ ಕೂಡ ಒಂದು. ರಾಜ್ಯದಲ್ಲಿ ಅತೀ ಹೆಚ್ಚು ವ್ಯಾಪಾರ ವಹಿವಾಟು ಇಲ್ಲಿಯೇ ನಡೆಯುತ್ತದೆ. ಈ ನಿಟ್ಟಿನಲ್ಲಿ ಹುಬ್ಬಳ್ಳಿಯನ್ನು ವಾಣಿಜ್ಯ ನಗರಿ ಎಂದು ಕರೆಯಲಾಗುತ್ತದೆ. ಈ ನಿಟ್ಟಿನಲ್ಲಿ ನಗರವನ್ನು ವಿಶ್ವದರ್ಜೆಯ ಮಟ್ಟಕ್ಕೆರಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿಯಾಗಿಸಲು ನೂರಾರು ಅಭಿವೃದ್ಧಿ ಕಾಮಗಾರಿಗಳನ್ನು ಆರಂಭ ಮಾಡಲಾಗಿದೆ. ಆದರೆ ಈ ಅಂಶ ಈಗ ಹುಬ್ಬಳ್ಳಿ ಜನರ ಆರೋಗ್ಯಕ್ಕೆ ಕುತ್ತು ತರುವ ಹಂತಕ್ಕೆ ತಲುಪಿದೆ.
Advertisement
Advertisement
ಸ್ವಿಜರ್ಲ್ಯಾಂಡ್ ಮೂಲದ ಐಕ್ಯೂ ಏರ್ ಸಂಸ್ಥೆ ವಿಶ್ವದ ವಿವಿಧ ದೇಶಗಳ ಮತ್ತು ಪ್ರಮುಖ ನಗರಗಳ ವಾಯುಗುಣಮಟ್ಟದ ವರದಿ ತಯಾರಿಸಿದೆ. ಈ ವರದಿಯಲ್ಲಿ ರಾಜ್ಯದ 14 ನಗರಗಳು ವಾಯುಮಾಲಿನ್ಯದಿಂದ ಬಳಲುತ್ತಿರುವ ಅಂಶ ಬಹಿರಂಗಗೊಂಡಿದೆ. ವಿಪರ್ಯಾಸವೆಂದರೆ ರಾಜಧಾನಿ ಬೆಂಗಳೂರನ್ನು ಹಿಂದೆಯಿಟ್ಟು ಹುಬ್ಬಳ್ಳಿ ಪ್ರಥಮ ಸ್ಥಾನವನ್ನು ಪಡೆದಿದೆ. ಇನ್ನೂ ಗಡಿ ಜಿಲ್ಲೆಯ ಯಾದಗಿರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿಗೆ ಅನುದಾನ ಹಂಚಿಕೆ -ಬಜೆಟ್‍ನಲ್ಲಿ ರಾಜ್ಯಕ್ಕೆ 832 ಕೋಟಿ ಮೀಸಲು
Advertisement
Advertisement
ಐಕ್ಯೂ ಏರ್ ಸಂಸ್ಥೆ ವರದಿ ಪ್ರಕಾರ ಕಲುಷಿತ ಗಾಳಿ ಹೊಂದಿರುವ ಪ್ರಮುಖ ಐದು ನಗರಗಳಾದ ಹುಬ್ಬಳ್ಳಿ-29.7%, ಯಾದಗಿರಿ-29.2%, ಬೆಂಗಳೂರು- 29%, ಬೆಳಗಾವಿ-28.1%, ಚಿಕ್ಕಬಳ್ಳಾಪುರ-26.1%ಗಳಾಗಿದೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಪ್ರಾಣವನ್ನೂ ಕೊಡಬಲ್ಲೆ: ಬಿಜೆಪಿಗೆ ಕೇಜ್ರಿವಾಲ್ ಟಾಂಗ್