ಅಯೋಧ್ಯೆ ರಾಮಮಂದಿರದಲ್ಲಿ (Ram Mandir) ಜ.22 ರಂದು ಪ್ರತಿಷ್ಠಾಪನೆಯಾಗಲಿರುವ ರಾಮಲಲ್ಲಾ (Ram Lalla Idol) ವಿಗ್ರಹದ ಮೊದಲ ಚಿತ್ರ ವೈರಲ್ ಆಗಿದೆ. ಈ ವಿಗ್ರಹವನ್ನು ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ಕೆತ್ತನೆ ಮಾಡಿದ್ದಾರೆ.
Advertisement
ಜನವರಿ 22 ರಂದು ‘ಪ್ರಾಣ ಪ್ರತಿಷ್ಠೆ’ ಸಮಾರಂಭ ನಡೆಯಲಿದೆ. ಅದಕ್ಕೆ ಕೆಲವು ದಿನಗಳ ಮೊದಲು (ಗುರುವಾರ) ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಭಗವಾನ್ ರಾಮನ ವಿಗ್ರಹವನ್ನು ಇರಿಸಲಾಗಿದೆ. ಇದನ್ನೂ ಓದಿ: ಅಯೋಧ್ಯೆ ಗರ್ಭಗುಡಿ ಪೀಠದಲ್ಲಿ ಬಾಲರಾಮ – ಮೊದಲ ಚಿತ್ರ ವೈರಲ್
Advertisement
Advertisement
ಇಂದು ಬೆಳಗ್ಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ರಾಮಲಲ್ಲಾ ವಿಗ್ರಹದ ಮೊದಲ ಫೋಟೋ ಹಂಚಿಕೊಂಡಿದ್ದಾರೆ. ದೇವರನ್ನು ಐದು ವರ್ಷದ ಮಗುವಿನಂತೆ ನಿಂತಿರುವ ಭಂಗಿಯಲ್ಲಿ ರೂಪಿಸಲಾಗಿದೆ. ಈಗ ವಿಗ್ರಹದ ಕಣ್ಣಿಗೆ ಬಟ್ಟೆ ಕಟ್ಟಲಾಗಿದೆ. ಪ್ರಾಣ ಪ್ರತಿಷ್ಠೆ ದಿನದಂದು ವಿಗ್ರಹದ ಕಣ್ಣಿಗೆ ಕಟ್ಟಿರುವ ಬಟ್ಟೆಯನ್ನು ತೆಗೆಯಲಾಗುವುದು.
Advertisement
The dream of decades has now become a reality.
First glimpse of Prabhu Ram Lalla.
Jai Shree Ram. pic.twitter.com/0wQb9IGUqJ
— Shobha Karandlaje (@ShobhaBJP) January 19, 2024
ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಿಂದ 51 ಇಂಚಿನ ವಿಗ್ರಹವನ್ನು ಕೆತ್ತನೆ ಮಾಡಿದ್ದಾರೆ. ಮಂತ್ರಘೋಷಗಳೊಂದಿಗೆ ರಾಮಲಲ್ಲಾ ಮೂರ್ತಿಯನ್ನು ಗರ್ಭಗುಡಿಯಲ್ಲಿ ಇರಿಸಲಾಗಿದೆ. ಇದನ್ನೂ ಓದಿ: ರಾಮಮಂದಿರ ನಿರ್ಮಾಣದಲ್ಲಿ ರಾಯಚೂರು ಯುವಶಿಲ್ಪಿಯ ಕಲಾ ಸೇವೆ
ಜನವರಿ 12 ರಿಂದ ದೇವಾಲಯದ ಮಹಾಮಸ್ತಕಾಭಿಷೇಕದ ವಿಧಿವಿಧಾನಗಳು ಆರಂಭಗೊಂಡಿವೆ. ಜನವರಿ 22 ರಂದು ಪ್ರಧಾನಿ ಮೋದಿ ಅವರು ‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೆ ಪೂಜೆ ನೆರವೇರಿಸಲಿದ್ದಾರೆ. ಲಕ್ಷ್ಮೀಕಾಂತ್ ದೀಕ್ಷಿತ್ ನೇತೃತ್ವದ ಅರ್ಚಕರ ತಂಡವು ಪ್ರಾಣ ಪ್ರತಿಷ್ಠೆಯ ಮುಖ್ಯ ವಿಧಿಗಳನ್ನು ನಡೆಸಲಿದೆ.