ನಾಗ್ಪುರ: ಹರ್ಷಿತ್ ರಾಣಾ, ರವೀಂದ್ರ ಜಡೇಜಾ ಬೌಲಿಂಗ್, ಶುಭಮನ್ ಗಿಲ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್ ಅವರ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ (England) ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಭಾರತ (Team India) 4 ವಿಕೆಟ್‌ಗಳಿಂದ ಜಯಗಳಿಸಿ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 47.4 ಓವರ್‌ಗಳಲ್ಲಿ 248 ರನ್‌ಗಳಿಸಿ ಆಲೌಟ್ ಆಯ್ತು. ನಂತರ ಬ್ಯಾಟಿಂಗ್ ಮಾಡಿದ ಭಾರತ 38.4 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 251 ರನ್ ಹೊಡೆದು ಜಯಗಳಿಸಿತು.
Advertisement
ಆರಂಭದಲ್ಲೇ 19 ರನ್ ಒಳಗಡೆ ರೋಹಿತ್ ಶರ್ಮಾ (2 ರನ್), ಯಶಸ್ವಿ ಜೈಸ್ವಾಲ್(15 ರನ್) ಗಳಿಸಿ ಔಟಾದಾಗ ಆತಂಕ ಎದುರಾಗಿತ್ತು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಫೆ.8 ರಂದು ಭಾರತ- ಶ್ರೀಲಂಕಾ ಕ್ರಿಕೆಟ್ ಮ್ಯಾಚ್
Advertisement
ಒತ್ತಡದ ಸಮಯದಲ್ಲೇ ಜೊತೆಯಾದ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ಶುಭಮನ್ ಗಿಲ್ (Shubman Gill ) 64 ಎಸೆತಗಳಲ್ಲಿ 94 ರನ್ ಜೊತೆಯಾಟವಾಡಿ ಚೇತರಿಕೆ ನೀಡಿದರು. ಶ್ರೇಯಸ್ ಅಯ್ಯರ್ 59 ರನ್ (36 ಎಸೆತ, 9 ಬೌಂಡರಿ, 2 ಸಿಕ್ಸ್ ) ಸಿಡಿಸಿ ಔಟಾದರು.
Advertisement
Advertisement
ನಂತರ ಬಂದ ಅಕ್ಷರ್ ಪಟೇಲ್ (Axar Patel) ಇಂಗ್ಲೆಂಡ್ ಬೌಲರ್‌ಗಳನ್ನು ದಂಡಿಸಲು ಆರಂಭಿಸಿದರು. ನಾಲ್ಕನೇ ವಿಕೆಟಿಗೆ ಶುಭಮನ್ ಗಿಲ್ ಮತ್ತು ಅಕ್ಷರ್ 107 ಎಸೆತಗಳಲ್ಲಿ 108 ರನ್ ಜೊತೆಯಾಟವಾಡಿದರು. ತಂಡದ ಮೊತ್ತ 221 ರನ್ ಆಗಿದ್ದಾಗ ಅಕ್ಷರ್ ಪಟೇಲ್ 52 ರನ್ (47 ಎಸೆತ, 6 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು. ಉತ್ತಮವಾಗಿ ಆಡಿದ್ದ ಶುಭಮನ್ ಗಿಲ್ ಶುಭಮನ್ ಗಿಲ್ 87 ರನ್(96 ಎಸೆತ, 14 ಬೌಂಡರಿ) ಹೊಡೆದು 6ನೇಯವರಾಗಿ ಔಟಾದರು.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಆರಂಭ ಉತ್ತಮವಾಗಿಯೇ ಇತ್ತು. ಆದರೆ ಮಧ್ಯಮ ಕ್ರಮಾಂಕ ಮತ್ತು ಕೊನೆಯಲ್ಲಿ ವಿಕೆಟ್ ಪತನಗೊಂಡ ಪರಿಣಾಮ ಕೇವಲ 248 ರನ್‌ಗಳಿಸಿತು.
ಫಿಲ್ ಸಾಲ್ಟ್ 43 ರನ್, ಬೆನ್ ಡಕಟ್ 32 ರನ್, ಜೋಸ್ಟ್ ಬಟ್ಲರ್ 52 ರನ್, ಜಾಕೋಬ್ ಬೆತ್‌ಹೆಲ್ 51 ರನ್ ಗಳಿಸಿ ಔಟಾದರು.
ಹರ್ಷಿತ್ ರಾಣಾ ಮತ್ತು ಜಡೇಜಾ ತಲಾ 3 ವಿಕೆಟ್ ಪಡೆದರು. ಮೊಹಮದ್ ಶಮಿ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಪಡೆದರು.
ಎರಡನೇ ಏಕದಿನ ಪಂದ್ಯ ಓಡಿಶಾದ ಕಟಕ್‌ನಲ್ಲಿ ಫೆ.9 ರಂದು ನಡೆದರೆ ಮೂರನೇ ಏಕದಿನ ಪಂದ್ಯ ಅಹಮಾದಾಬಾದ್‌ನಲ್ಲಿ ಫೆ. 12 ರಂದು ನಡೆಯಲಿದೆ.