ಶ್ರೀನಗರ: 32 ವರ್ಷಗಳ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ (Jammu And Kashmir) ಮಲ್ಟಿಪ್ಲೆಕ್ಸ್ (Multiplex) ಚಿತ್ರಮಂದಿರಗಳು (Cinema Halls) ಉದ್ಘಾಟನೆಗೊಂಡಿದ್ದು, ಇದೇ ಸೆಪ್ಟೆಂಬರ್ 20 ರಿಂದ ಆಮೀರ್ ಖಾನ್ ನಟನೆಯ ಲಾಲ್‌ಸಿಂಗ್ ಚಡ್ಡಾ (Laal Singh Chaddha) ಸಿನಿಮಾದೊಂದಿಗೆ ಪ್ರದರ್ಶನ ಆರಂಭವಾಗಲಿದೆ.
ಜಮ್ಮು ಮತ್ತು ಕಾಶ್ಮೀರದ ಸರ್ಕಾರದ ಯುವ ಸಬಲೀಕರಣ (Youth Empowerment Department) ಇಲಾಖೆ ಹಾಗೂ ಜಿಲ್ಲಾಡಳಿದ ಸಹಯೋಗದೊಂದಿಗೆ ಚಿತ್ರಮಂದಿರಗಳನ್ನು ಸ್ಥಾಪನೆ ಮಾಡುವ ವಿವಿಧೊದ್ದೇಶ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅದರ ಭಾಗವಾಗಿ ಇದೇ ಸೆಪ್ಟೆಂಬರ್ 20ರಿಂದಲೇ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಸಿನಿ ಪ್ರದರ್ಶನ ಆರಂಭಿಸಲಾಗುತ್ತಿದೆ. ಇದನ್ನೂ ಓದಿ: ಬೇಬಿ ಬಂಪ್ ಲುಕ್‌ನಲ್ಲಿ ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ಕೊಟ್ಟ ಬಿಪಾಶಾ ಬಸು
Advertisement
Advertisement
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ (Manoj Sinha) ಅವರಿಂದು ದಕ್ಷಿಣ ಕಾಶ್ಮೀರದ ಅವಳಿ ಜಿಲ್ಲೆಗಳಾದ ಪುಲ್ವಾಮಾ (Pulwama) ಮತ್ತು ಶೋಪಿಯಾನ್‌ನಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳನ್ನು ಉದ್ಘಾಟಿಸಿದರು. ಅಲ್ಲದೇ ಇಲ್ಲಿನ ಅನಂತನಾಗ್, ಶ್ರೀನಗರ, ಬಂಡಿಪೋರಾ, ಗಂದರ್‌ಬಾಲ್, ದೋಡಾ, ರಾಜೌರಿ, ಪೂಂಚ್, ಕಿಶ್ತ್ವಾರ್ ಮತ್ತು ರಿಯಾಸಿ ಜಿಲ್ಲೆಗಳಲ್ಲೂ ಚಿತ್ರಮಂದಿರಗಳು ಉದ್ಘಾಟನೆಗೊಳ್ಳಲಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸೋನು ಶ್ರೀನಿವಾಸ್ ಗೌಡ ಸಂಬಳ ಕೇಳಿದ್ರೆ, ನೀವೂ ಅದೇ ಕೆಲಸ ಮಾಡ್ತೀರಿ
Advertisement
A historic day for J&K UT! Inaugurated Multipurpose Cinema Halls at Pulwama and Shopian. It offers facilities ranging from movie screening, infotainment and skilling of youth. pic.twitter.com/QraMhHXSuN
— Office of LG J&K (@OfficeOfLGJandK) September 18, 2022
Advertisement
ಬಳಿಕ ಮಾತನಾಡಿದ ಮನೋಜ್ ಸಿನ್ಹಾ (Manoj Sinha), ಜಮ್ಮು ಮತ್ತು ಕಾಶ್ಮೀರಕ್ಕೆ ಇಂದು ಐತಿಹಾಸಿಕ ದಿನವಾಗಿದೆ. ಹೊಸ ಚಿತ್ರಮಂದಿರಗಳು ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಜೊತೆಗೆ ಯುವಕರಿಗೆ ಸಿನಿಮಾ ತರಬೇತಿ ಹಾಗೂ ವಿಚಾರ ಸಂಕಿರಣಗಳಿಗೆ ಸ್ಥಳಾವಕಾಶ ಒದಗಿಸಿದಂತೆಯೂ ಆಗುತ್ತದೆ. ಅದಕ್ಕೆ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
1980ರ ದಶಕದಲ್ಲಿ ಸುಮಾರು 12 ಚಿತ್ರಮಂದಿರಗಳು ಸ್ವತಂತ್ರವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ಭಯೋತ್ಪಾದಕರ ಬೆದರಿಕೆಗಳಿಂದ ಅವುಗಳ ಕಾರ್ಯ ಸ್ಥಗಿತಗೊಂಡಿತು. 1990ರ ದಶಕದ ಉತ್ತರಾರ್ಧದಲ್ಲಿ ಅಧಿಕಾರಿಗಳು ಕೆಲವು ಚಿತ್ರಮಂದಿರಗಳನ್ನು ಪುನರಾರಂಭಿಸಲು ಪ್ರಯತ್ನಿಸಿದರು. ಆದರೆ 1999ರಲ್ಲಿ ಉಗ್ರಗಾಮಿಗಳು ನಡೆಸಿದ ಗ್ರೆನೇಡ್ ದಾಳಿ ಆ ಪ್ರಯತ್ನಕ್ಕೂ ಕಲ್ಲು ಹಾಕಿತು. ಇದೀಗ ಮತ್ತೆ ಚಿತ್ರಮಂದಿರಗಳು ತಲೆ ಎತ್ತುತ್ತಿವೆ.