Connect with us

2300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭ: ಸಾರ್ವಕಾಲಿಕ ದಾಖಲೆ ಬರೆದ ಕೆಪಿಸಿಎಲ್

2300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭ: ಸಾರ್ವಕಾಲಿಕ ದಾಖಲೆ ಬರೆದ ಕೆಪಿಸಿಎಲ್

– 1 ವರ್ಷದಲ್ಲೇ 2300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ

– ಬಿಟಿಪಿಎಸ್‍ನ ಮೂರನೇ ಘಟಕ ಮತ್ತು ವೈಟಿಪಿಎಸ್ ನ 1 ಮತ್ತು 2ನೇ ಘಟಕ ಕಾರ್ಯಾರಂಭ

ರಾಯಚೂರು: ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ವೈಟಿಪಿಎಸ್‍ನ ಎರಡನೇ ಘಟಕ ಈಗ ವಾಣಿಜ್ಯಿಕ ವಿದ್ಯುತ್ ಉತ್ಪಾದನೆಗೆ ಸಿದ್ಧವಾಗಿದೆ. ವೈಟಿಪಿಎಸ್ ಕಚೇರಿಯಲ್ಲಿ – ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಕೆಪಿಸಿಎಲ್) ವ್ಯವಸ್ಥಾಪಕ ನಿರ್ದೆಶಕ ಜಿ.ಕುಮಾರ್ ನಾಯಕ್ ಅಧಿಕೃತವಾಗಿ ಪ್ರಕಟಿಸಿದ್ದಾರೆ.

ಒಂದೇ ವರ್ಷದಲ್ಲಿ ಬಿಟಿಪಿಎಸ್‍ನ ಮೂರನೇ ಘಟಕ ಮತ್ತು ವೈಟಿಪಿಎಸ್‍ನ 1 ಮತ್ತು 2ನೇ ಘಟಕ ಕಾರ್ಯಾರಂಭಗೊಂಡಿದ್ದು 2300 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಆರಂಭವಾಗಿರುವುದು ಸಾರ್ವಕಾಲಿಕ ದಾಖಲೆ ಅಂತ ಕುಮಾರ್ ನಾಯಕ್ ಹೇಳಿದ್ದಾರೆ.

ವೈಟಿಪಿಎಸ್‍ನ ಎರಡನೇ ಘಟಕ ಸಂಪೂರ್ಣ ದೇಶಿಯ ಘಟಕವಾಗಿದ್ದು,ಎಲ್ಲಾ ಉಪಕರಣಗಳು ಬಿಎಚ್‍ಇಎಲ್‍ನಲ್ಲೇ ತಯಾರುಗೊಂಡಿವೆ. ಮಾರ್ಚ್ 6ರಂದು ಮೊದಲ ಘಟಕದ ವಾಣಿಜ್ಯಿಕ ಉತ್ಪಾದನೆ ಸಾಮರ್ಥ್ಯ ಘೋಷಣೆಯಾಗಿತ್ತು ಏಪ್ರಿಲ್ 6 ರಂದು ಎರಡನೇ ಘಟಕ ಘೋಷಣೆಯಾಗಿದೆ.

ವೈಟಿಪಿಎಸ್‍ನ 1 ಮತ್ತು 2ನೇ ಘಟಕಗಳಿಂದ 1600 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ. ಇದರಿಂದ ಕೆಪಿಸಿಎಲ್ ರಾಜ್ಯದ ವಿದ್ಯುತ್ ಜಾಲಕ್ಕೆ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳಿಂದ ಶೇಕಡಾ 40 ಕ್ಕಿಂತ ಅಧಿಕ ಅಂದ್ರೆ 4300 ಮೆಗಾವ್ಯಾಟ್ ವಿದ್ಯುತ್ ನೀಡಲು ಸಮರ್ಥವಾಗಿದೆ. ಎರಡನೇ ಘಟಕದ ಘೋಷಣೆ ಹಿನ್ನೆಲೆಯಲ್ಲಿ ವೈಟಿಪಿಎಸ್ ಸಿಬ್ಬಂದಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.

Advertisement
Advertisement