ಮಡಿಕೇರಿ: ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ವಿರಾಜಪೇಟೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
Advertisement
ವಿರಾಜಪೇಟೆ ತಾಲೂಕಿನ ಹೆಮ್ಮಾಡು ಬೇತ್ರಿ ಗ್ರಾಮದ ನಿವಾಸಿ ನಂಜಪ್ಪ(47) ಬಂಧಿತ ವ್ಯಕ್ತಿ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹೆಮ್ಮಾಡು ಬೇತ್ರಿ ಗ್ರಾಮದಲ್ಲಿ 1996 ರ ಆಗಸ್ಟ್ ನಲ್ಲಿ ಗೌರಿ-ಗಣೇಶ ಉತ್ಸವದ ಸಂದರ್ಭ ಸಹೋದರರಾದ ಪೂಣಚ್ಚ, ನಂಜಪ್ಪ, ಬಿದ್ದಪ್ಪ, ಕಾಳಪ್ಪ ಮತ್ತು ಕುಶಾಲಪ್ಪ ಸೇರಿ ಕ್ಷುಲ್ಲಕ ಕಾರಣಕ್ಕೆ ಹೆಮ್ಮಾಡುವಿನ ದಿನಸಿ ಅಂಗಡಿ ಮಾಲೀಕ ನಂಜಪ್ಪ ಅವರನ್ನು ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿದ್ದರು.
Advertisement
Advertisement
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸಹೋದರರ ಮೇಲೆ ದೂರು ದಾಖಲಿಸಿಕೊಂಡು ತನಿಖೆ ನಡೆಸಿ, ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಪೂಣಚ್ಚನಿಗೆ ಜೀವಾವಧಿ ಶಿಕ್ಷೆಯಾಗಿತ್ತು, ಕಾಳಪ್ಪ ಮತ್ತು ಕುಶಾಲಪ್ಪ ಆರೋಪದಿಂದ ಮುಕ್ತರಾಗಿದ್ದರು. ಬಿದ್ದಪ್ಪ ಸಾವನ್ನಪ್ಪಿದ್ದು, ನಂಜಪ್ಪ ಮಾತ್ರ ಈ ಪ್ರಕರಣದಿಂದ ತಲೆ ಮರೆಸಿಕೊಂಡಿದ್ದ. ಇದೀಗ ಪೊಲೀಸರು ಆರೋಪಿ ನಂಜಪ್ಪನನ್ನು ಬೆಂಗಳೂರಿನ ಅಶೋಕ ನಗರದಲ್ಲಿ ಬಂಧಿಸಿ, ಸ್ಥಳೀಯ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.