– ರಾಜಕಾರಣಕ್ಕೆ ಮೈಸೂರು ಒಡೆಯರ್ ಎಂಟ್ರಿ
– ಪಂಜಾಬ್, ಅಸ್ಸಾಂಗೆ ನಡೆಯಲಿಲ್ಲ ಚುನಾವಣೆ!
80 ರ ದಶಕ ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ಸ್ಥಿತ್ಯಂತರ ಕಂಡ ಕಾಲ. ಈ ಅವಧಿಯಲ್ಲಿ ರಾಜಕೀಯ ಸಾಮಾಜಿಕ, ಆರ್ಥಿಕ ಪರಿಸ್ಥಿತಿಗಳಲ್ಲಿ ಸಾಕಷ್ಟು ಬದಲಾವಣೆಗಳಾದವು. ಆರನೇ ಪಂಚವಾರ್ಷಿಕ ಯೋಜನೆಯಿಂದಾದ ಆರ್ಥಿಕ ಸುಧಾರಣೆಗಳು, ಪ್ರಧಾನಿ ಇಂದಿರಾ ಗಾಂಧಿ (Indira Gandhi) ಅವರ ಭೀಕರ ಹತ್ಯೆಯ ಅನುಕಂಪದ ಅಲೆಯಲ್ಲಿ ಜರುಗಿದ 1984 ಚುನಾವಣೆಯು ಕಾಂಗ್ರೆಸ್ (Congress) ಚಾರಿತ್ರಿಕ ಗೆಲುವಿಗೆ ಸಾಕ್ಷಿಯಾಯಿತು.
Advertisement
ಆರ್ಥಿಕ ಉದಾರೀಕರಣ ಪ್ರಾರಂಭ
1980 ರಲ್ಲಿ ಮತ್ತೆ ಐತಿಹಾಸಿಕ ಗೆಲುವು ಸಾಧಿಸಿದ್ದ ಇಂದಿರಾ ಗಾಂಧಿ ಅವರು ದೇಶದ ಅಭಿವೃದ್ಧಿಗೆ ಏನಾದರು ಕೊಡುಗೆ ನೀಡಬೇಕೆಂಬ ಉದ್ದೇಶದಿಂದ 6ನೇ ಪಂಚವಾರ್ಷಿಕ ಯೋಜನೆ ಜಾರಿಗೊಳಿಸಿದರು. ಆರ್ಥಿಕ ಸ್ವಾವಲಂಬನೆ ಗುರಿಯೊಂದಿಗೆ ಯೋಜನೆ ಪ್ರಾರಂಭಿಸಿದರು. ಪರಿಣಾಮವಾಗಿ 1982 ರಲ್ಲಿ ನಬಾರ್ಡ್ (NABARD) ಸ್ಥಾಪನೆಯಾಯಿತು. ಈ ಯೋಜನೆಯಿಂದ ಆರ್ಥಿಕ ಉದಾರೀಕರಣ ಪ್ರಾರಂಭವಾಯಿತು. ಅಲ್ಲಿವರೆಗೆ ಇದ್ದ ಜವಾಹರಲಾಲ್ ನೆಹರೂ ಅವರ ಸಮಾಜವಾದ ಪರಿಕಲ್ಪನೆ ಅಂತ್ಯಗೊಂಡಿತು. ಬದಲಾಗಿ ಉದಾರವಾದದ ನೀತಿಗಳು ಜಾರಿಯಾದವು. ಇದನ್ನೂ ಓದಿ: 1980 ರ ಲೋಕಸಭಾ ಚುನಾವಣೆಗೆ ಮತದಾನ ನಡೆದಿದ್ದು ಕೇವಲ 4 ದಿನ
Advertisement
Advertisement
ಖಲಿಸ್ತಾನ ಚಳವಳಿ
ದೇಶದ ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ಹರಿಸಿದ್ದ ಇಂದಿರಾ ಗಾಂಧಿಗೆ ಪಂಜಾಬ್‌ನಲ್ಲಿ ನಡೆಯುತ್ತಿದ್ದ ಪ್ರತ್ಯೇಕ ರಾಷ್ಟ್ರ ಹೋರಾಟದ ಖಲಿಸ್ತಾನ ಚಳವಳಿ ನಿದ್ದೆಗೆಡಿಸಿತ್ತು. ಬಿಂದ್ರನ್‌ವಾಲೆ ನೇತೃತ್ವದಲ್ಲಿ ಸಿಖ್ ಹೋರಾಟಗಾರರ ಪಡೆ ರಚಿಸಲಾಗಿತ್ತು. ಈ ಪಡೆ ಸ್ವರ್ಣ ಮಂದಿರವನ್ನು ತಮ್ಮ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡು, ಶಸ್ತ್ರಾಸ್ತ್ರ-ಮದ್ದುಗುಂಡುಗಳನ್ನು ಸಂಗ್ರಹಿಸುತ್ತಿತ್ತು. 1984 ರಲ್ಲಿ ಬಿಂದ್ರನ್‌ವಾಲೆ ನೇತೃತ್ವದ ಹೋರಾಟಗಾರರ ಗುಂಪು ದಾಳಿಗೆ ಮುಂದಾಯಿತು. ಸ್ವರ್ಣ ಮಂದಿರದ ಆವರಣದಲ್ಲಿ ನೂರಾರು ಭಕ್ತರನ್ನು ಒತ್ತೆಯಾಳಾಗಿ ಇರಿಸಿಕೊಂಡರು. ಪ್ರತ್ಯೇಕತಾವಾದಿಗಳ ಜೊತೆ ಪ್ರಧಾನಿ ಇಂದಿರಾ ನಡೆಸಿದ ಮಾತುಕತೆ ವಿಫಲವಾಯಿತು. ಆಗ 1984 ರ ಜೂನ್ 6 ರಂದು ಸೇನಾ ಕಾರ್ಯಾಚರಣೆಗೆ ಪ್ರಧಾನಿ ಆದೇಶಿಸಿದರು. ಅದನ್ನೇ ‘ಆಪರೇಷನ್ ಬ್ಲೂಸ್ಟಾರ್’ (Operation Blue Star) ಎಂದು ಕರೆಯಲಾಯಿತು.
Advertisement
ಆಪರೇಷನ್ ಬ್ಲೂಸ್ಟಾರ್
ಭಾರತೀಯ ಸೇನೆ ಫಿರಂಗಿಗಳನ್ನು ಬಳಸಿಕೊಂಡು ಸ್ವರ್ಣಮಂದಿರದ ಆವರಣದ ಗೋಡೆಯನ್ನು ಕೆಡವಿ ಒಳನುಗ್ಗಿತು. ಬಿಂದ್ರನ್‌ವಾಲೆ ಮತ್ತು ಸಂಗಡಿಗರನ್ನು ಹತ್ಯೆ ಮಾಡುವವರೆಗೂ ಕಾರ್ಯಾಚರಣೆ ಮುಂದುವರಿಯಿತು. ಜೂನ್ 9 ರ ವರೆಗೆ ನಡೆದ ಕಾರ್ಯಾಚರಣೆಯಲ್ಲಿ ನಾಗರಿಕರು ಮತ್ತು ಸೈನಿಕರು ಸೇರಿ ನೂರಾರು ಮಂದಿ ಹತರಾದರು.
ಇಂದಿರಾ ಗಾಂಧಿ ಹತ್ಯೆ
ಆಪರೇಷನ್ ಬ್ಲೂಸ್ಟಾರ್‌ಗೆ ಪ್ರತೀಕಾರವಾಗಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಿಖ್ಖರು ಹತ್ಯೆ ಮಾಡಿದರು. 1984 ರ ಅಕ್ಟೋಬರ್ 31 ರಂದು ಇಂದಿರಾ ಗಾಂಧಿ ಅವರ ಅಂಗರಕ್ಷಕ ಪಡೆಯಲ್ಲಿದ್ದ ಇಬ್ಬರು ಸಿಖ್ ಕಮಾಂಡೊಗಳೇ, ಇಂದಿರಾ ಅವರನ್ನು ಗುಂಡಿಟ್ಟು ಕೊಂದರು. ಇದನ್ನೂ ಓದಿ: ಇಂದಿರಾ ವಿರುದ್ಧವೂ ಆಗಿತ್ತು ‘ಮಹಾಮೈತ್ರಿ’ – 1971 ರ ಚುನಾವಣೆ ಫಲಿತಾಂಶ ಏನಾಯ್ತು?
ಮರುಗಿದ ಭಾರತ
ದೇಶದ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ಅವರ ಹತ್ಯೆಗೆ ದೇಶದಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಯಿತು. ಇಂದಿರಾ ಹತ್ಯೆ ಪ್ರತೀಕಾರವಾಗಿ ದೆಹಲಿ ಮತ್ತು ಸುತ್ತಮುತ್ತಲಿನ ಭಾಗಗಳಲ್ಲಿ ಸಿಖ್ಖರನ್ನು ಹತ್ಯೆ ಮಾಡಲಾಯಿತು. ಅಂದಾಜು 3,000 ಜನರು ಬಲಿಯಾಗಿದ್ದಾರೆ ಎನ್ನಲಾಗಿದೆ. ಇತ್ತ ಇಂದಿರಾ ಉತ್ತರಾಧಿಕಾರಿಯಾದ ರಾಜೀವ್ ಗಾಂಧಿ (Rajiv Gandhi) ಲೋಕಸಭೆ ವಿಸರ್ಜಿಸಿ 1984 ರಲ್ಲಿ ಚುನಾವಣೆಗೆ ಹೋದರು.
ಪಂಜಾಬ್, ಅಸ್ಸಾಂ ಬಿಟ್ಟು ಉಳಿದ ರಾಜ್ಯಗಳಿಗೆ ಚುನಾವಣೆ
80 ರ ದಶಕದಲ್ಲಿ ಪಂಜಾಬ್‌ನಲ್ಲಿ ಖಲಿಸ್ತಾನ ಮತ್ತು ಅಸ್ಸಾಂನಲ್ಲಿ ವಿದೇಶಿಗರ ವಿರುದ್ಧ ಚಳವಳಿ ತೀವ್ರವಾಗಿತ್ತು. ಈ ಹಿನ್ನೆಲೆಯಲ್ಲಿ ಈ ಎರಡು ರಾಜ್ಯಗಳನ್ನು ಹೊರತುಪಡಿಸಿ ಲೋಕಸಭಾ ಚುನಾವಣೆ ನಡೆಸಲಾಯಿತು. ಇಂದಿರಾ ಹತ್ಯೆಯಿಂದ ಮರುಗಿದ್ದ ಜನತೆ ರಾಜೀವ್ ಗಾಂಧಿ ಅವರನ್ನು ಬೆಂಬಲಿಸಿದರು. ಪರಿಣಾಮವಾಗಿ ಕಾಂಗ್ರೆಸ್ ಈ ಚುನಾವಣೆಯಲ್ಲಿ ಚಾರಿತ್ರಿಕ ಜಯ ದಾಖಲಿಸಿತ್ತು.
5 ದಿನ ಚುನಾವಣೆ
1984 ರ ಲೋಕಸಭಾ ಚುನಾವಣೆಯು ಡಿಸೆಂಬರ್ 24 ರಿಂದ 28 ರ ವರೆಗೆ ಐದು ದಿನಗಳ ಕಾಲ ನಡೆಯಿತು. 28 ರಾಜ್ಯಗಳ 514 ಸ್ಥಾನಗಳಿಗೆ ಚುನಾವಣೆ ನಡೆಯಿತು.
ಎಷ್ಟು ಪಕ್ಷಗಳ ಸ್ಪರ್ಧೆ?
7 ರಾಷ್ಟ್ರೀಯ, 17 ಪ್ರಾದೇಶಿಕ ಪಕ್ಷಗಳು ಸೇರಿದಂತೆ ಒಟ್ಟು 33 ಪಕ್ಷಗಳು ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. ಇದನ್ನೂ ಓದಿ: ತುರ್ತು ಪರಿಸ್ಥಿತಿಗೆ ಕಾಂಗ್ರೆಸ್ ಪತನ; ಮೊದಲ ಕಾಂಗ್ರೆಸ್ಸೇತರ ಸರ್ಕಾರ ತಂದ ಚುನಾವಣೆಯಲ್ಲಿ ಏನಾಯ್ತು?
ಮತದಾರರ ಸಂಖ್ಯೆ
ಒಟ್ಟು ಮತದಾರರು: 37,95,40,608
ಪುರುಷರು: 19,67,30,499
ಮಹಿಳೆಯರು: 18,28,10,109
ಮತ ಚಲಾವಣೆ ಆಗಿದ್ದೆಷ್ಟು?
ಮತ ಚಲಾಯಿಸಿದವರು: 24,12,46,887
ಮತ ಪ್ರಮಾಣ: 63.56%
ಕಣದಲ್ಲಿದ್ದ ಅಭ್ಯರ್ಥಿಗಳು
ಒಟ್ಟು ಅಭ್ಯರ್ಥಿಗಳು: 5,312
ಮಹಿಳಾ ಅಭ್ಯರ್ಥಿಗಳು: 162 (ವಿಜೇತರು 42 ಮಂದಿ)
ಕಾಂಗ್ರೆಸ್‌ಗೆ 404 ಸ್ಥಾನ
ಇಂದಿರಾ ಗಾಂಧಿಯವರ ಹತ್ಯೆಯ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 400 ಕ್ಕೂ ಹೆಚ್ಚು ಸ್ಥಾನ ಮತ್ತು 50% ಕ್ಕಿಂತ ಹೆಚ್ಚು ಮತಗಳನ್ನು ಪಡೆದು ಐತಿಹಾಸಿಕ ಗೆಲುವು ಸಾಧಿಸಿತು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಇಲ್ಲಿಯವರೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷವೂ ಮಾಡಿರದ ಸಾಧನೆ ಇದಾಗಿದೆ.
ಅತಿ ದೊಡ್ಡ ವಿಪಕ್ಷ ಯಾವುದು?
ಟಿಡಿಪಿಯು ಅತಿ ದೊಡ್ಡ ವಿರೋಧ ಪಕ್ಷವಾಗಿ ಹೊರಹೊಮ್ಮಿತು. ಈ ಪಕ್ಷ 30 ಸ್ಥಾನಗಳನ್ನು ಗೆದ್ದುಕೊಂಡಿತು. ಹೊಸದಾಗಿ ಸ್ಥಾಪಿಸಲಾದ ಬಿಜೆಪಿ (ಜನಸಂಘದ ಉತ್ತರಾಧಿಕಾರಿ ಪಕ್ಷ) ಕೇವಲ ಎರಡು ಸ್ಥಾನಗಳನ್ನು ಗೆದ್ದಿತು. ಇದನ್ನೂ ಓದಿ: ಕೇವಲ 5 ದಿನದ ಚುನಾವಣೆ; ಕಾಂಗ್ರೆಸ್ ಕುಸಿದರೂ ಗೆದ್ದ ಇಂದಿರಾ
ಬಿಜೆಪಿಗೆ ಕೇವಲ 2 ಸ್ಥಾನ!
ಆಗ ತಾನೆ ಉದಯವಾಗಿದ್ದ ಬಿಜೆಪಿ ಪಕ್ಷ ಇಡೀ ದೇಶದಲ್ಲಿ ಕೇವಲ ಎರಡು ಸ್ಥಾನಗಳನ್ನು ಗೆದ್ದಿತ್ತು. ಎ.ಕೆ.ಪಟೇಲ್ ಮತ್ತು ಚೆಂದುಪಾಟ್ಲ ಜಂಗಾ ರೆಡ್ಡಿ ಹೆಸರಿನ ಈ ಇಬ್ಬರು ಗೆಲುವು ಸಾಧಿಸಿದ್ದರು.
ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಕಾಂಗ್ರೆಸ್ – 404
ಜನತಾ ಪಕ್ಷ – 10
ಬಿಜೆಪಿ – 2
ಸಿಪಿಐ(ಎಂ) – 22
ಟಿಡಿಪಿ – 30
ಎಐಎಡಿಎಂಕೆ – 12
ಸಿಪಿಐ – 6
ಇತರೆ – 23
ಪಕ್ಷೇತರ – 5
ಕರ್ನಾಟಕದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ?
ಕಾಂಗ್ರೆಸ್ – 24
ಜನತಾ ಪಕ್ಷ – 4
ರಾಜಕೀಯಕ್ಕೆ ಮೈಸೂರು ಒಡೆಯರ್ ಎಂಟ್ರಿ
ಕರ್ನಾಟಕದಲ್ಲಿ ರಾಜವಂಶಸ್ಥರ ರಾಜಕೀಯ ಪ್ರವೇಶಕ್ಕೆ ಆಗಿನ ಮೈಸೂರು-ಕೊಡಗು ಕ್ಷೇತ್ರ ಮುನ್ನುಡಿ ಬರೆಯಿತು. 1984 ರಲ್ಲಿ ಪ್ರಥಮ ಬಾರಿಗೆ ಆಗಿನ ಮೈಸೂರು ಒಡೆಯರ್ ಸಂಸ್ಥಾನದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಅವರು ಲೋಕಸಭೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ ಪಾರ್ಲಿಮೆಂಟ್ ಪ್ರವೇಶಿಸಿದ್ದರು.