– 65 ವರ್ಷದ ವೃದ್ಧ 40 ಪ್ರಕರಣಗಳಲ್ಲಿ ಆರೋಪಿ
– ಕೇಸ್‍ಗಳಿದ್ರೂ ಪಂಚಾಯ್ತಿಯ ಮುಖ್ಯಸ್ಥ
ಗಾಂಧಿನಗರ: ಬ್ಯಾಂಕ್ ದರೋಡೆ ಸೇರಿದಂತೆ ಸುಮಾರು 40 ಪ್ರಕರಣಗಳಲ್ಲಿ ಬೇಕಾಗಿರುವ 65 ವರ್ಷದ ಆರೋಪಿಯನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
Advertisement
ಬಂಧಿತ ಆರೋಪಿಯನ್ನು ಶಕ್ತಿದಾನ್ ಸಿಂಗ್ ಎಂದು ಗುರುತಿಸಲಾಗಿದ್ದು, ರಾಜಸ್ಥಾನದ ಬಾರ್ಮರ್‍ನ ಗದ್ರಾ ರಸ್ತೆ ಠಾಣೆಯ ಪೊಲೀಸರು ಬಂಧಿಸಿದ್ದಾರೆ. 38 ವರ್ಷಗಳ ಹಿಂದೆ ಆರೋಪಿ ಬ್ಯಾಂಕ್ ದರೋಡೆ ಮಾಡಲು ಯತ್ನಿಸಿದ್ದ. ಇದೇ ವೇಳೆ ಮೂವರನ್ನು ಕೊಲೆ ಮಾಡಿದ್ದ. ನಂತರ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದರು. ಆದರೆ ಆರೋಪಿ ತಲೆ ಮರೆಸಿಕೊಂಡಿದ್ದ.
Advertisement
ಬ್ಯಾಂಕ್ ದರೋಡೆ ಪ್ರಕರಣ ನಡೆದು 38 ವರ್ಷಗಳ ಬಳಿಕ ಆರೋಪಿಯನ್ನು ಬಂಧಿಸಲಾಗಿದ್ದು. ಆರೋಪಿ ಹತ್ತು ಹಲವು ಅಕ್ರಮ ಪ್ರಕರಣಗಳಲ್ಲಿ ಭಾಗಿಯಾಗಿದ್ದರೂ, ಗ್ರಾಮದ ಪಂಚಾಯ್ತಿಯ ಮುಖ್ಯಸ್ಥನಾಗಿ ಆಯ್ಕೆಯಾಗಿದ್ದ. ಈತನ ವಿರುದ್ಧ ಈಗಾಗಲೇ 40 ಪ್ರಕರಣಗಳಿದ್ದು, 65 ವರ್ಷದ ಮಾಜಿ ದರೋಡೆಕೋರ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
Advertisement
ಆರೋಪಿ ಶಕ್ತಿದಾನ್ ಸಿಂಗ್ 1982ರಲ್ಲಿ ಗುಜರಾತ್‍ನ ಬನಸ್ಕಾಂತ ಪ್ರದೇಶದಲ್ಲಿ ಬ್ಯಾಂಕ್ ಡಕಾಯತಿ ಮಾಡಲು ಯತ್ನಿಸಿದ್ದ. ಈ ವೇಳೆ ಪೊಲೀಸ್ ಅಧಿಕಾರಿ ಸೇರಿದಂತೆ ಹಲವರನ್ನು ಕೊಲೆ ಮಾಡಿದ್ದ. ನಂತರ ಪೊಲೀಸರು ಈತನನ್ನು ಮೋಸ್ಟ್ ವಾಂಟೆಡ್ ಲಿಸ್ಟ್‍ಗೆ ಸೇರಿಸಿದ್ದರು.
ಶುಕ್ರವಾರ ಗುಜರಾತ್‍ನ ಎಸ್‍ಒಜಿ ಬೀಜ್ವಾಲ್‍ಗೆ ತೆರಳಿ ಆರೋಪಿಯನ್ನು ಬಂಧಿಸಿದ್ದರು. ನಿವೃತ್ತ ಎಸ್.ಪಿ.ಆನಂದ್ ಶರ್ಮಾ ಈ ಕುರಿತು ಮಾಹಿತಿ ನೀಡಿ, ಈತ ನಟೋರಿಯಸ್ ಕ್ರಿಮಿನಲ್ ಆಗಿದ್ದ. ಅಲ್ಲದೆ ಹಲವು ಅಪರಾಧ ಪ್ರಕರಣಳಲ್ಲಿ ಬೇಕಾಗಿದ್ದ.
1989 ರಲ್ಲಿ ಸಿಂಗ್ ಶರಣಾಗಿ ಸರ್ಕಾರದ ಪರ ಸಾಕ್ಷಿಯಾಗಿದ್ದನು. ಸಿಂಗ್ ಪೊಲೀಸರ ಎದುರು ಶರಣಾಗಿದ್ದ. ನಂತರ ಸಿಂಗ್ ವಿರುದ್ಧ ದಾಖಲಾಗಿದ್ದ ಎಲ್ಲ ಪ್ರಕರಣಗಳನ್ನು ಸರ್ಕಾರ ಹಿಂಪಡೆದುಕೊಂಡಿತು. ಆದರೂ 1982ರಲ್ಲಿ ಮಾಡಿದ್ದ ಬ್ಯಾಂಕ್ ಡಕಾಯಿತಿ ಹಾಗೂ ಕೊಲೆ ಪ್ರಕರಣದ ಆರೋಪಿಯಾಗಿದ್ದನು.