ಧಾರವಾಡ: ಹುಬ್ಬಳ್ಳಿ, ಧಾರವಾಡ ಪೊಲೀಸರಿಗೆ ಕೊರೊನಾ ಕಾಟ ಕೊಡಲಾರಂಭಿಸಿದೆ. ಅವಳಿನಗರದ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ 8 ಇನ್ಸ್‌ಪೆಕ್ಟರ್ ಹಾಗೂ ಓರ್ವ ಎಸಿಪಿ ಸೇರಿ ಒಟ್ಟು 196 ಪೊಲೀಸರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.
ಕಳೆದ ಎರಡು ದಿನಗಳ ಹಿಂದೆ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಒಟ್ಟು 2019 ಪೊಲೀಸ್ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗಿತ್ತು. ಅದರಲ್ಲಿ 196 ಪಾಸಿಟಿವ್ ಬಂದಿದೆ. ಇದನ್ನೂ ಓದಿ: ಪೊಲೀಸರನ್ನು ನೋಡಿ ಮಾಸ್ಕ್ ಹಾಕಬೇಡಿ – ಬೈಕ್ ಸವಾರಗೆ ಮನವಿ ಮಾಡಿದ ಪೇದೆ
ಸದ್ಯ ಇಲಾಖೆ ಎಲ್ಲರನ್ನೂ ಹೋಂ ಐಸೋಲೇಷನ್ ಮಾಡಿದೆ. ರಾಜ್ಯದಲ್ಲಿ ವಿಕೇಂಡ್ ಕರ್ಫ್ಯೂ ನಡೆಯುತ್ತಿದ್ದು, ಮೊದಲೇ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ ಇಂತಹ ಸಂದರ್ಭದಲ್ಲಿ ಪೊಲೀಸರು ಹಾಗೂ ಅಧಿಕಾರಿಗಳಿಗೆ ಕೊರೊನಾ ಪಾಸಿಟಿವ್ ಬಂದಿರುವುದು ಸಂಕಷ್ಟ ತಂದಿದೆ. ಸದ್ಯ ಇಲಾಖೆ ಇದ್ದ ಸಿಬ್ಬಂದಿ ಜೊತೆ ಸೇರಿ ಕೆಲಸ ಮಾಡಬೇಕಾದ ಪರಿಸ್ಥಿತಿ ಬಂದೊದಗಿದೆ. ಇದನ್ನೂ ಓದಿ: ಕೋವಿಡ್ ಗೆದ್ದ ಒಂದು ತಿಂಗಳ ಮಗು – ಆಸ್ಪತ್ರೆಯಿಂದ ಡಿಸ್ಚಾರ್ಜ್