– ದೇಶದ ಗಮನ ಸೆಳೆದಿದ್ದ ಕರ್ನಾಟಕದ ಪಕ್ಷೇತರ ಅಭ್ಯರ್ಥಿ
– ಸ್ವತಂತ್ರ ಅಭ್ಯರ್ಥಿಗೆ ಬಿದ್ದಿರಲಿಲ್ಲ ಒಂದೇ ಒಂದು ವೋಟ್!
– ಪಬ್ಲಿಕ್ ಟಿವಿ ವಿಶೇಷ
Advertisement
ಭಾರತಕ್ಕೆ ಬ್ರಿಟಿಷರಿಂದ ಸ್ವಾತಂತ್ರ್ಯ ಸಿಕ್ಕ ನಂತರದ ಆರಂಭಿಕ ವರ್ಷಗಳಲ್ಲಿ ರಾಜಕೀಯವಾಗಿ ಕಾಂಗ್ರೆಸ್ ಪ್ರಬಲವಾಗಿತ್ತು. ಆಗ ಚುನಾವಣೆಗಳಲ್ಲೂ ದೇಶದೆಲ್ಲೆಡೆ ಕಾಂಗ್ರೆಸ್‌ನದ್ದೇ ಪಾರುಪತ್ಯ. ಹಲವು ದಶಕಗಳ ಕಾಲ ಲೋಕಸಭಾ ಚುನಾವಣೆಯಲ್ಲಿ ಬಹುಮತದೊಂದಿಗೆ ಗೆದ್ದು ದೇಶದ ಚುಕ್ಕಾಣಿ ಹಿಡಿದು ಆಡಳಿತ ನಡೆಸಿತು. ಲೋಕಸಭಾ ಚುನಾವಣೆಯ ಇತಿಹಾಸ ಗಮನಿಸಿದರೆ ಕಾಂಗ್ರೆಸ್‌ನ ಪ್ರಾಬಲ್ಯ ಎಷ್ಟರ ಮಟ್ಟಿಗೆ ಇತ್ತು ಎಂಬುದು ತಿಳಿಯುತ್ತದೆ.
Advertisement
ಸ್ವಾತಂತ್ರ್ಯ ನಂತರ ನಡೆದ ಮೊದಲ ಸಾರ್ವತ್ರಿಕ ಚುನಾವಣೆ ಬಗ್ಗೆ ನೀವು ಈಗಾಗಲೇ ಓದಿದ್ದೀರಿ. ನಂತರ 1957 ರಲ್ಲಿ ಎರಡನೇ ಸಾರ್ವತ್ರಿಕ ಚುನಾವಣೆ (1957 Lok Sabha Election) ನಡೆಯಿತು. ಆ ಚುನಾವಣೆಯಲ್ಲಾದ ರಾಜಕೀಯ ಬೆಳವಣಿಗೆ ಏನು? ಫಲಿತಾಂಶ ಏನಾಗಿತ್ತು ಎಂಬುದನ್ನು ‘ಪಬ್ಲಿಕ್ ಟಿವಿ’ ನಿಮಗೆ ತಿಳಿಸಿಕೊಡುತ್ತದೆ. ಇದನ್ನೂ ಓದಿ: ಭಾರತದ ಮೊದಲ ಚುನಾವಣೆ 4 ತಿಂಗಳ ಕಾಲ ನಡೆದಿದ್ದು ನಿಮಗೆ ಗೊತ್ತಾ..?
Advertisement
15 ಪಕ್ಷಗಳು ಸ್ಪರ್ಧೆ
ದೇಶದ ಎರಡನೇ ಲೋಕಸಭಾ ಚುನಾವಣೆಯು 1957 ರ ಫೆ.24 ರಿಂದ ಮಾ.14 ರ ವರೆಗೆ ನಡೆದಿತ್ತು. ಸುಮಾರು 15 ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದವು. 494 ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ಬಹುಮತಕ್ಕೆ 248 ಸೀಟ್‌ಗಳು ಬೇಕಾಗಿದ್ದವು. ಮುಖ್ಯ ಚುನಾವಣಾ ಆಯುಕ್ತ ಸುಕುಮಾರ್ ಸೇನ್ ಅವರು ಚುನಾವಣೆ ಮೇಲ್ವಿಚಾರಣೆ ಮಾಡಿದರು.
Advertisement
ಹಕ್ಕು ಚಲಾಯಿಸಿದವರೆಷ್ಟು?
1957 ರ ಲೋಕಸಭಾ ಚುನಾವಣೆಯಲ್ಲಿ ಮತದಾನಕ್ಕೆ 26,52,41,358 ಮಂದಿ ಅರ್ಹತೆ ಪಡೆದಿದ್ದರು. 18,20,75,041 ಜನರು ಮತದಾನ ಮಾಡಿದರು. ಆ ಸಂದರ್ಭದಲ್ಲಿ 68.6% ಮತ ಚಲಾವಣೆಯಾಗಿತ್ತು.
371 ಸ್ಥಾನ ಗೆದ್ದ ಕಾಂಗ್ರೆಸ್
1957 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರಿ ಅಂತರದಿಂದ ಗೆದ್ದಿತ್ತು. 371 ಸ್ಥಾನಗಳನ್ನು ಪಡೆದು ಅಧಿಕಾರದ ಗದ್ದುಗೆ ಏರಿತ್ತು. ಉಳಿದಂತೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ 19, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ 27, ಭಾರತೀಯ ಜನ ಸಂಘ 4, ಪರಿಶಿಷ್ಟ ಜಾತಿ ಫೆಡರಲ್ 6, ಆಲ್ ಇಂಡಿಯಾ ಜನತಂತ್ರ ಪರಿಷದ್ 7, ಪೀಪಲ್ಸ್ ಡೆಮಾಕ್ರಟಿಕ್ ಫ್ರಂಟ್ 2, ಹಿಂದೂ ಮಹಾಸಭಾ 1, ಪಿಡಬ್ಲ್ಯೂಪಿಐ 4, ಜಾರ್ಖಂಡ್ ಪಾರ್ಟಿ 6, ಫಾರ್ವರ್ಡ್ ಬ್ಲಾಕ್ (ಮಾರ್ಕ್ಸಿಸ್ಟ್) 2, ಸಿಎನ್‌ಎಸ್‌ಪಿಜೆಪಿ 3 ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸ್ಥಾನಗಳನ್ನು ಗೆದ್ದಿದ್ದರು. ಇದನ್ನೂ ಓದಿ: ರಾಜ್ಯದಲ್ಲಿ 2ನೇ ಹಂತದ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ
ಈ ಚುನಾವಣೆಯಲ್ಲಿ ಕಾಂಗ್ರೆಸ್ ಎರಡನೇ ಸಲ ಭಾರಿ ಅಂತರದಿಂದ ಜಯ ಸಾಧಿಸಿತ್ತು. ಸಮಾಜವಾದಿ ಪಕ್ಷ ಮತ್ತು ಕೆಎಂಪಿಪಿಯೊಂದಿಗೆ ವಿಲೀನಗೊಂಡ ನಂತರ ಹೊಸದಾಗಿ ರೂಪುಗೊಂಡ ಪ್ರಜಾ ಸೋಷಿಯಲಿಸ್ಟ್ ಪಕ್ಷವು (ಪಿಎಸ್‌ಪಿ) 19 ಸ್ಥಾನಗಳನ್ನು ಪಡೆಯಿತು. ಕಮ್ಯುನಿಸ್ಟ್ ಪಕ್ಷ ಆಫ್ ಇಂಡಿಯಾವು (ಸಿಪಿಐ) 27 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತು. ಜನಸಂಘ ಮತದಾನ ಪ್ರಮಾಣವನ್ನು ದ್ವಿಗುಣಗೊಳಿಸಿಕೊಂಡರೂ, ಪಕ್ಷವು ಹೆಚ್ಚು ಸ್ಥಾನಗಳನ್ನು ಗಳಿಸಲಿಲ್ಲ. ಅಂಬೇಡ್ಕರ್ ಅವರ ಅಖಿಲ ಭಾರತದ ಪರಿಶಿಷ್ಟ ಜಾತಿ ಒಕ್ಕೂಟ (ಎಸ್‌ಸಿಎಫ್) ಆರು ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತು.
ಮತದಾನದ ಪ್ರಮಾಣ ಎಷ್ಟಿತ್ತು?
ಕಾಂಗ್ರೆಸ್ ಮತದಾನದ ಪ್ರಮಾಣ 47.8% ಇತ್ತು. ಉಳಿದಂತೆ ಇತರೆ 25.2%, ಪಿಎಸ್‌ಪಿ 10.4%, ಸಿಪಿಐ 8.9%, ಬಿಜೆಎಸ್ 6%, ಎಸ್‌ಸಿಎಫ್ 1.7% ಮತವನ್ನು ಪಡೆದುಕೊಂಡಿದ್ದವು. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ಜೆಡಿಎಸ್‌ಗೆ ಬಿಗ್ ಶಾಕ್- ಕಾಂಗ್ರೆಸ್‌ನಿಂದ ಮಿಡ್‍ನೈಟ್ ಆಪರೇಷನ್
ನೆಹರೂ ನೇತೃತ್ವದಲ್ಲಿ ‘ಕೈ’ಗೆ ಮತ್ತೊಂದು ಗೆಲುವು
ಜವಾಹರಲಾಲ್ ನೆಹರೂ ಅವರ ನಾಯಕತ್ವದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 494 ಸ್ಥಾನಗಳಲ್ಲಿ 371 ಸ್ಥಾನಗಳನ್ನು ಪಡೆದು ಎರಡನೇ ಅವಧಿಗೆ ಅಧಿಕಾರ ಏರಿತು. ಮೊದಲ ಚುನಾವಣೆಗಿಂತ ಏಳು ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದಿತ್ತು. ಮತ ಪ್ರಮಾಣ 45% ರಿಂದ 48% ಕ್ಕೆ ಏರಿತು. ಆ ಸಂದರ್ಭದಲ್ಲಿ 2ನೇ ಅತಿ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದ್ದು ಕಮ್ಯುನಿಸ್ಟ್ ಪಕ್ಷ. ಈ ಪಕ್ಷ ಗೆದ್ದಿದ್ದು 27 ಸ್ಥಾನಗಳನ್ನು.
ಪಕ್ಷೇತರ ಅಭ್ಯರ್ಥಿಗಳ ದಾಖಲೆ
ಪಕ್ಷೇತರರಾಗಿ ಸ್ಪರ್ಧಿಸಿದ್ದವರ ಪೈಕಿ 42 ಅಭ್ಯರ್ಥಿಗಳು ಗೆದ್ದು ಪಾರ್ಲಿಮೆಂಟ್ ಪ್ರವೇಶಿಸಿದರು. 19% ವೋಟ್ ಶೇರ್ ಪಕ್ಷೇತರ ಅಭ್ಯರ್ಥಿಗಳ ಪಾಲಾಗಿತ್ತು. ಇದು ಭಾರತೀಯ ಸಾರ್ವತ್ರಿಕ ಚುನಾವಣೆಗಳಲ್ಲೇ ಅತ್ಯಧಿಕ ಎಂಬ ದಾಖಲೆ ಕೂಡ ಬರೆದಿದೆ. ಮೊದಲ ಸಾರ್ವತ್ರಿಕ ಚುನಾವಣೆಯಲ್ಲಿ 36 ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು. ಅದು ಬಿಟ್ಟರೆ 1991 ರಲ್ಲಿ ಅತೀ ಕಡಿಮೆ ಅಂದರೆ ಒಬ್ಬರು ಸ್ವತಂತ್ರ ಅಭ್ಯರ್ಥಿ ಮಾತ್ರ ಪಾರ್ಲಿಮೆಂಟ್‌ಗೆ ಎಂಟ್ರಿ ಕೊಟ್ಟಿದ್ದರು. ಇನ್ನು 2019 ರ ಚುನಾವಣೆಯಲ್ಲಿ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದರು.
ಮೈನ್‌ಪುರಿ ಅಭ್ಯರ್ಥಿಗೆ ಸೊನ್ನೆ (0) ವೋಟ್?
ದೇಶದ ಎರಡನೇ ಲೋಕಸಭಾ ಚುನಾವಣೆಯಲ್ಲಿ ಹಲವು ಸ್ವಾರಸ್ಯಕರ ಘಟನೆಗಳು ನಡೆದಿದ್ದವು. ಮೈನ್‌ಪುರಿ ಕ್ಷೇತ್ರದ ಅಭ್ಯರ್ಥಿಯೊಬ್ಬರಿಗೆ ಆಗ ಒಬ್ಬರೇ ಒಬ್ಬ ಮತದಾರ ಕೂಡ ವೋಟು ಹಾಕಿರಲಿಲ್ಲ. ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಶಂಕರ್ ಲಾಲ್ ಎಂಬವರಿಗೆ ಶೂನ್ಯ ವೋಟಿನ ಹೊಡೆತ ಬಿದ್ದಿತ್ತು. ತಮ್ಮ ಪರವಾಗಿ ತಾವೇ ಚಲಾಯಿಸಿಕೊಂಡಿದ್ದ ಒಂದೇ ಒಂದು ವೋಟ್ ಕೂಡ ಅಮಾನ್ಯವಾಗಿತ್ತು. ಹೀಗಾಗಿ ಸೊನ್ನೆ ವೋಟ್ ಪಡೆದ ಕೆಟ್ಟ ದಾಖಲೆ ಬರೆದರು. ಇದನ್ನೂ ಓದಿ: ಬಾಲಕಿಯಿಂದ ವಿನೂತನವಾಗಿ ಮತದಾನ ಜಾಗೃತಿ- ಚುನಾವಣಾ ಆಯೋಗ ಪ್ರಶಂಸೆ
ಮೈಸೂರು ರಾಜ್ಯದಲ್ಲಿ ಯಾವ ಪಕ್ಷಕ್ಕೆ ಎಷ್ಟು ಸೀಟ್?
ಕರ್ನಾಟಕ ಏಕೀಕರಣವಾಗಿದ್ದು 1956 ರಲ್ಲಿ. ಆದರೆ ಕರ್ನಾಟಕ ಎಂದು ನಾಮಕರಣವಾಗಿದ್ದು 1974 ರಲ್ಲಿ. ಈ ಹಿನ್ನೆಲೆಯಲ್ಲಿ 1957 ರ ಸಾರ್ವತ್ರಿಕ ಚುನಾವಣೆಯಲ್ಲೂ ಮೈಸೂರು ರಾಜ್ಯ ಎಂದೇ ಪರಿಗಣಿಸಲಾಗಿತ್ತು. ಮೈಸೂರು ರಾಜ್ಯದಲ್ಲಿ ಒಟ್ಟು 26 ಸ್ಥಾನಗಳ ಪೈಕಿ 23 ರಲ್ಲಿ ಕಾಂಗ್ರೆಸ್ ಗೆದ್ದು ಬೀಗಿತ್ತು. ಉಳಿದಂತೆ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ 1, ಪರಿಶಿಷ್ಟ ಜಾತಿ ಫೆಡರಲ್ 1 ಹಾಗೂ ಪಕ್ಷೇತರ 1 ಸ್ಥಾನ ಬಂದಿತ್ತು.
ದೇಶದ ಗಮನ ಸೆಳೆದಿದ್ದ ಕರ್ನಾಟಕದ ಪಕ್ಷೇತರ ಅಭ್ಯರ್ಥಿ
1957 ರಲ್ಲಿ ಅಂದಿನ ಮೈಸೂರು-ಕರ್ನಾಟಕದ ಬಿಜಾಪುರ ಉತ್ತರ ಲೋಕಸಭಾ ಕ್ಷೇತ್ರದಿಂದ (ಈಗಿನ ವಿಜಯಪುರ) ಮರಿಗಪ್ಪ ಸಿದ್ದಪ್ಪ ಸುಗಂಧಿ ಅವರು ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಮೊದಲ ಬಾರಿ ಸಂಸತ್ ಪ್ರವೇಶಿಸಿ ದಾಖಲೆ ಮಾಡಿದ್ದರು.
ಪಕ್ಷೇತರ ಹಾಗೂ ರಾಷ್ಟ್ರೀಯ ಅಭ್ಯರ್ಥಿ ಸ್ಪರ್ಧೆಯಿಂದಾಗಿ ಬಿಜಾಪುರ ಕ್ಷೇತ್ರ ಅಂದು ರಾಷ್ಟ್ರದ ಗಮನ ಸೆಳೆದಿತ್ತು. ಪಕ್ಷೇತರ ಅಭ್ಯರ್ಥಿ ಹಾಗೂ ರಾಷ್ಟ್ರೀಯ ಅಭ್ಯರ್ಥಿ ಸ್ಫರ್ಧೆಯಿಂದಾಗಿ ಬಿಜಾಪುರ ಕ್ಷೇತ್ರ ಅಂದು ರಾಷ್ಟ್ರದ ಗಮನಸೆಳೆದಿತ್ತು. ಒಟ್ಟು 3,53,151 ಮತಗಳ ಪೈಕಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಮುರಿಯಪ್ಪ ಸಿದ್ದಪ್ಪ ಸುಗಂಧಿ 88,209 ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ರಾಜಾರಾಮ ಗಿರಿಧರಲಾಲ ದುಬೆ 77,223 ಮತಗಳನ್ನು ಪಡೆದಿದ್ದರು. ಅಂತಿಮವಾಗಿ ಪಕ್ಷೇತರ ಅಭ್ಯರ್ಥಿಯಾದ ಸುಗಂಧಿಯವರು 10,936 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು. ಇದನ್ನೂ ಓದಿ: ಇಂದಿರಾ ಗಾಂಧಿ ಹಂತಕನ ಪುತ್ರ ಪಂಜಾಬ್‌ನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ
ಮುರಿಯಪ್ಪ ಸಿದ್ದಪ್ಪ ಸುಗಂಧಿ, ದಿನಕರ ದತ್ತಾತ್ರೇಯ ದೇಸಾಯಿ ಹಾಗೂ ಸುಮಲತಾ ಅಂಬರೀಶ್ ಅವರು ಕರ್ನಾಟಕ ರಾಜ್ಯದ ಲೋಕಸಭಾ ಚುನಾವಣಾ ಇತಿಹಾಸದಲ್ಲಿಯೇ ಪಕ್ಷೇತರ ಅಭ್ಯರ್ಥಿಯಾಗಿ ಸಂಸದರಾದ ದಾಖಲೆ ಬರೆದಿದ್ದಾರೆ.