ನವದೆಹಲಿ: 19 ವರ್ಷದ ಯುವತಿಯೊಬ್ಬಳು ಯುವತಿಯನ್ನು ಅತ್ಯಾಚಾರ ಮಾಡಿದ್ದ ಆರೋಪದ ಮೇರೆಗೆ ದೆಹಲಿ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.
ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಸುಪ್ರೀಂ ಕೋರ್ಟ್ ಸಲಿಂಗಕಾಮಕ್ಕೆ ಮಾನ್ಯತೆ ನೀಡಿ ಆದೇಶ ನೀಡಿತ್ತು. ಆದರೆ ಕೋರ್ಟ್ ನ ಈ ತೀರ್ಪನ್ನು ದುರ್ಬಳಕೆ ಮಾಡಿಕೊಂಡಿದ್ದ ಮಹಿಳೆಯನ್ನು ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಶಿವಾನಿ ಎಂದು ಗುರುತಿಸಲಾಗಿದ್ದು, ಬಂಧಿತ ಮಹಿಳೆ ತನ್ನ ಸೊಂಟಕ್ಕೆ ಬೆಲ್ಟ್ ನಿಂದ ಪುರುಷರ ಆಟಿಕೆಯನ್ನು ಕಟ್ಟಿಕೊಂಡು ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಳು ಎಂದು ಸಂತ್ರಸ್ತ ಯುವತಿ ಆರೋಪಿಸಿದ್ದಾರೆ.
Advertisement
ಸದ್ಯಕ್ಕೆ ಆರೋಪಿ ಶಿವಾನಿಯನ್ನು ಕರ್ಕರ್ಡೋಮಾ ಕೋರ್ಟಿ ಗೆ ಹಾಜರು ಪಡಿಸಲಾಗಿತ್ತು. ಆದರೆ ಕೋರ್ಟ್ ವಿಚಾರಣೆಗೆಂದು ಒಂದು ದಿನ ಪೊಲೀಸ್ ಕಸ್ಟಡಿಗೆ ಆರೋಪಿಯನ್ನು ಒಪ್ಪಿಸಿದ್ದು, ಬಳಿಕ ತಿಹಾರ್ ಜೈಲಿಗೆ ಕಳುಹಿಸಲಾಗಿದೆ.
Advertisement
Advertisement
ಅಪರಾಧಿ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 164ರ ಅಡಿಯಲ್ಲಿ 19 ವರ್ಷದ ಯುವತಿ ಮ್ಯಾಜಿಸ್ಟ್ರೇಟ್ ಮುಂದೆ ಅಂದರೆ ವಿಚಾರಣೆ ಬಳಿಕ ತಾನೇ ತಪ್ಪನ್ನು ಒಪ್ಪಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 377ರ ಅಡಿಯಲ್ಲಿ ಶಿವಾನಿಯನ್ನು ಬಂಧಿಸಲಾಗಿದೆ.
Advertisement
ಸೆಕ್ಷನ್ 377ರ ಪ್ರಕಾರ ಸಲಿಂಗಕಾಮಕ್ಕೆ ಕಾನೂನಿನ ಒಪ್ಪಿಗೆ ಸೂಚಿಸಿತ್ತು. ಆದರೆ ಅನುಮತಿ ಇಲ್ಲದೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುವುದು ಅಪರಾಧವಾಗುತ್ತದೆ. ಅಕ್ಟೋಬರ್ ನಲ್ಲಿ ಪೊಲೀಸರು ಸಂತ್ರಸ್ತೆ ದೂರು ನೀಡಲು ಬಂದಾಗ ನಿರಾಕರಿಸಿದ್ದರು. ಒಬ್ಬ ಮಹಿಳೆ ಮತ್ತೊಬ್ಬ ಮಹಿಳೆಯ ಮೇಲೆ ಈ ರೀತಿಯ ಅತ್ಯಾಚಾರ ನಡೆಸಲು ಸಾಧ್ಯವೇ ಎಂದು ಹೇಳಿ ಪೊಲೀಸರು ದೂರ ದಾಖಲಿಸಿಕೊಂಡಿರಲಿಲ್ಲ.
ಸಂತ್ರಸ್ತೆ ಯುವತಿ:
ಪೂರ್ವ ಭಾರತದಿಂದ ಕೆಲಸಕ್ಕೆಂದು ದೆಹಲಿಗೆ ಬಂದಿದ್ದಳು. ಸಂತ್ರಸ್ತೆಯನ್ನು ಕೂಡಿ ಹಾಕಿಕೊಂಡು ನಿರಂತರವಾಗಿ ಆರೋಪಿ ಶಿವಾನಿ ಬಲವಂತವಾಗಿ ದೌರ್ಜನ್ಯ ನಡೆಸಿದ್ದಳು. ಅಷ್ಟೇ ಅಲ್ಲದೇ ದೈಹಿಕವಾಗಿಯೂ ಹಲ್ಲೆ ಮಾಡಿದ್ದಳು. ಕೊನೆಗೆ ಯುವತಿ ತಪ್ಪಿಸಿಕೊಂಡು ಬಂದು ಸೀಮಾಪುರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಅಲ್ಲಿನ ಅಧಿಕಾರಿಗಳು ಸ್ವೀಕರಿಸಿಲ್ಲ.
2018 ಮಾರ್ಚ್ ನಲ್ಲಿ ಗುರುಗ್ರಾಮದಲ್ಲಿ ತಾನಿದ್ದ ಕೆಲಸ ಬಿಟ್ಟು ಬಿಸಿನೆಸ್ ಮಾಡಲು ನಿರ್ಧರಿಸಿದ್ದಳು. ಆಗ ಆನ್‍ಲೈನಲ್ಲಿ ಉಡುಪು ಮಾರಾಟ ಮಾಡುವ ವ್ಯಾಪಾರಕ್ಕೆ ಹಣ ಹೂಡಿಕೆ ಮಾಡಲು ಪಾಟ್ನರ್ ಗಳನ್ನು ಹುಡುಕುತ್ತಿದ್ದಳು. ಜೊತೆಗೆ 1.5 ಲಕ್ಷ ಹಣವನ್ನು ಸಾಲವಾಗಿ ಕೊಡುವಂತೆ ಅನೇಕರ ಬಳಿ ಕೇಳುತ್ತಿದ್ದಳು. ಕೊನೆಗೆ ಬಸ್, ರೈಲ್ವೇ ಮತ್ತು ವಿಮಾನ ನಿಲ್ದಾಣಗಳಲ್ಲಿ ತನ್ನ ಬಿಸಿನೆಸ್ ಬಗ್ಗೆ ವಿವರಿಸುತ್ತಾ, ವ್ಯಾಪಾರಕ್ಕಾಗಿ ಪಾಲುದಾರನನ್ನು ಹುಡುಕಾಟ ಮಾಡುತ್ತಿದ್ದಳು. ಕೊನೆಗೆ ಎಚ್‍ಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದ ರೋಹಿತ್ ಸಿಕ್ಕಿದ್ದು, ವ್ಯಾಪಾರಕ್ಕೆ ಬಂಡವಾಳ ಹೂಡಿಕೆ ಮಾಡುವುದಾಗಿ ಹೇಳಿದ್ದಾನೆ.
ರೋಹಿತ್ ನನ್ನನ್ನು ದಿಲ್ಶಾಸ್ ಕಾಲೋನಿಯಲ್ಲಿರುವ ಅಪಾರ್ಟ್ ಮೆಂಟಿಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಮೊತ್ತೊಬ್ಬ ಆರೋಪಿ ರಾಹುಲ್ ಇಬ್ಬರು ಸೇರಿಕೊಂಡು ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ಅಶ್ಲೀಲ ವಿಡಿಯೋವನ್ನು ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮೇಲೆ ಮಾಡುತ್ತಿದ್ದರು. ಅದೇ ಅಪಾರ್ಟ್ ಮೆಂಟ್ ನಲ್ಲಿ ಆರೋಪಿ ಶಿವಾನಿ ಇದ್ದಳು. ಮೊದಲು ಅವರಿಬ್ಬರು ಲೈಂಗಿಕವಾಗಿ ಬಳಸಿಕೊಂಡಿದ್ದರು. ಬಳಿಕ ಮೂವರೂ ಸೇರಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾರೆ. ಅಷ್ಟೇ ಅಲ್ಲದೇ ನನ್ನ ಕೈಕಾಲುಗಳನ್ನು ಮಂಚಕ್ಕೆ ಕಟ್ಟಿ, ಮಹಿಳೆಯ ಮೂಲಕ ಲೈಂಗಿಕ ದೌರ್ಜನ್ಯ ಎಸಗಲಾಗುತ್ತಿತ್ತು. ಇದನ್ನು ಮಾಡಲು ಆರೋಪಿ ಮಹಿಳೆಗೆ ಸಂತೋಷವಾಗುತ್ತಿತ್ತು ಈ ದೌರ್ಜನ್ಯ ಎಸಗಿದ್ದಕ್ಕಾಗಿ ಅವರ ಜೊತೆಗೆ ಅವಳನ್ನು ಶಿಕ್ಷಿಸಲು ನಾನು ಬಯಸುತ್ತೇನೆ ಎಂದು ಸಂತ್ರಸ್ತೆ ಕೇಳಿಕೊಂಡಿದ್ದಾಳೆ.
ಕೊನೆಗೆ ಸಾಮಾಜಿಕ ಕಾರ್ಯಕರ್ತ ಹೇಮಂತ್ ಶರ್ಮಾ ಎಂಬವರ ಮೂಲಕ ಸಂತ್ರಸ್ತೆ ಪಾರಾಗಿದ್ದಾಳೆ. ಆರೋಪಿ ಮಹಿಳೆಯನ್ನು ಐಪಿಸಿಯ 376 ನೇ ವಿಭಾಗದ ಅಡಿಯಲ್ಲಿ ಶಿಕ್ಷಿಸುವುವುದಕ್ಕೆ ಅಸಾಧ್ಯ ಎಂದು ಹೇಳಿದ್ದಾರೆ. ಸದ್ಯಕ್ಕೆ ರಾಹುಲ್, ರೋಹಿತ್ ಮತ್ತು ಮತ್ತೊಬ್ಬ ಆರೋಪಿ ಸಾಗರ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಮೂವರು ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv