ನವದೆಹಲಿ: ಕಾಲೇಜಿಗೆ ಹೋಗಿ ತನ್ನ ಕನಸನ್ನು ನನಸು ಮಾಡಿಕೊಳ್ಳಲು 19ರ ಯುವತಿ ಕ್ಯಾಬ್ ಚಲಾಯಿಸುತ್ತಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
19 ವರ್ಷದ ಕೋಮಲ್ ಕಾಲೇಜಿಗೆ ಹೋಗಲು ಪ್ರತಿದಿನ ಕ್ಯಾಬ್ ಚಲಾಯಿಸುತ್ತಿದ್ದಾಳೆ. ಇವರ ಬಗ್ಗೆ ಒಲಿವಿಯಾ ಎಂಬವರು ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಮಾಡಿದ ಒಂದು ದಿನದಲ್ಲಿ 17 ಸಾವಿರಕ್ಕೂ ಹೆಚ್ಚು ಲೈಕ್ಸ್ ಹಾಗೂ 6 ಸಾವಿರಕ್ಕೂ ಹೆಚ್ಚು ಶೇರ್ ಆಗಿದೆ. ಈ ಪೋಸ್ಟ್ ನೋಡಿ 650ಕ್ಕೂ ಹೆಚ್ಚು ಮಂದಿ ಕಮೆಂಟ್ ಮಾಡುವ ಮೂಲಕ ಕೋಮಲ್ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇದನ್ನೂ ಓದಿ: ತರಗತಿ ಹೊರಗೆ ನಿಂತ ಬಾಲಕಿ- ಫೋಟೋ ವೈರಲ್ ಆಗ್ತಿದ್ದಂತೆ ಅದೇ ಶಾಲೆಯಲ್ಲಿ ದಾಖಲಾತಿ
Advertisement
Advertisement
ಪೋಸ್ಟ್ ನಲ್ಲಿ ಏನಿದೆ?
ಕೋಮಲ್ 19 ವರ್ಷದವರಾಗಿದ್ದು, ಕಳೆದ ಒಂದು ವರ್ಷದಿಂದ ಕ್ಯಾಬ್ ಚಲಾಯಿಸುತ್ತಿದ್ದಾಳೆ. ನಾನು ಸಾಕೇತದಿಂದ ಗುರುಗ್ರಾಮ ಹೋಗಲು ಕ್ಯಾಬ್ ಬುಕ್ ಮಾಡಿದೆ. ನನ್ನ ಪ್ರಯಾಣ ಚೆನ್ನಾಗಿತ್ತು. ಏಕೆಂದರೆ ಕ್ಯಾಬ್‍ನ ಡ್ರೈವರ್ ಆಗಿ ಚಿಕ್ಕ ಹುಡುಗಿ ಕೆಲಸ ಮಾಡುತ್ತಿದ್ದಳು. ಆಕೆ ಕನಸ್ಸುಗಳು ತುಂಬಾ ದೊಡ್ಡದು. ಕೋಮಲ್‍ಗೆ ಇಬ್ಬರು ಹಿರಿಯ ಸಹೋದರರು ಹಾಗೂ ಒಬ್ಬ ಕಿರಿಯ ಸಹೋದರನಿದ್ದಾನೆ.
Advertisement
ತನ್ನ ವಿದ್ಯಾಭ್ಯಾಸದ ಖರ್ಚನ್ನು ನೋಡಿಕೊಳ್ಳಲು ಕೋಮಲ್ ಕಳೆದ ಒಂದು ವರ್ಷದಿಂದ ಕ್ಯಾಬ್ ಚಲಾಯಿಸುತ್ತಿದ್ದಾಳೆ. ಈ ವರ್ಷ ಅವರು 12ನೇ ತರಗತಿ ಪರೀಕ್ಷೆಯನ್ನು ಬರೆಯಲಿದ್ದಾರೆ. ಕೋಮಲ್ ತಂದೆಗೆ ಆಕೆ ವಿದ್ಯಾಭ್ಯಾಸ ಮಾಡುವುದು ಇಷ್ಟವಿಲ್ಲ. ಹಾಗಾಗಿ ಆಕೆಯನ್ನು ಶಾಲೆಯಿಂದ ಬಿಡಿಸಿದ್ದರು. ಆದರೆ ತಂದೆಯ ಜೊತೆ ಜಗಳವಾಡಿ ಕೋಮಲ್ ಕೆಲವು ವರ್ಷಗಳ ನಂತರ ಮತ್ತೆ ದಾಖಲಾತಿ ಪಡೆದಿದ್ದಾಳೆ. ಇದನ್ನೂ ಓದಿ: ಭಿಕ್ಷೆ ಬೇಡುವ ಮಕ್ಕಳಿಗಾಗಿ ಶಾಲೆ ತೆರೆದ ಪೊಲೀಸರು – 450 ಮಕ್ಕಳಿಗೆ ವಿದ್ಯಾಭ್ಯಾಸ
Advertisement
ನಾನು ಈ ಬಗ್ಗೆ ಪ್ರಶ್ನಿಸಿದಾಗ ಕೋಮಲ್, ನಾನು ಈಗ ಕಾಲೇಜಿಗೆ ಹೋಗಬೇಕಿದೆ. ಜೀವನದಲ್ಲಿ ಸಾಕಷ್ಟು ಕೆಲಸಗಳು ಮಾಡಬೇಕಿದೆ. ನಾನು ಕ್ಯಾಬ್ ಚಲಾಯಿಸುವುದು ಹಾಗೂ ವಿದ್ಯಾಭ್ಯಾಸ ಮಾಡುವುದು ನನ್ನ ತಂದೆಗೆ ಇಷ್ಟವಿಲ್ಲ. ಆದರೆ ನಾನು ಯಾರ ಮಾತು ಕೇಳುವುದಿಲ್ಲ. ನಾನು ಏನಾದರೂ ಮಾಡಲು ಬಯಸುತ್ತೇನೆ ಹಾಗೂ ಮಾಡುತ್ತಿದ್ದೇನೆ. ಜನರ ಮಾತಿನ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಉತ್ತರಿಸಿದ್ದಾರೆ.
ಒಲಿವಿಯಾ ತನ್ನ ಪೋಸ್ಟ್ ನಲ್ಲಿ, ನಾನು ಕೋಮಲ್ ಅಭಿಮಾನಿಯಾಗಿದ್ದೇನೆ. ಹಾಗಾಗಿ ಪ್ರಯಾಣ ಮುಗಿಸಿದ ನಂತರ ನಾನು ಆಕೆಯ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡೆ. ಈ ಕೋಮಲ್ ಅವರ ಬಗ್ಗೆ ಪೋಸ್ಟ್ ಹಾಕಿದ ನಂತರ ನೆಟ್ಟಿಗರು ಕೂಡ ಅವರ ಅಭಿಮಾನಿ ಆಗಿದ್ದಾರೆ. ಅಲ್ಲದೆ ಕೋಮಲ್ ಅವರಿಗೆ ಶುಭಾಶಯ ತಿಳಿಸುತ್ತಿದ್ದಾರೆ ಎಂದು ಒಲಿವಿಯಾ ಬರೆದುಕೊಂಡಿದ್ದಾರೆ.