ನವದೆಹಲಿ: 19 ವರ್ಷದ ಯುವಕನೊಬ್ಬ ಆನ್‍ಲೈನ್ ಗೇಮ್ ಚಟಕ್ಕೆ ಬಿದ್ದು ತನ್ನ ಪೋಷಕರು ಮತ್ತು ಸೋದರಿಯನ್ನು ಕೊಲೆ ಮಾಡಿರುವ ಘಟನೆ ಮೆಹ್ರಾಲಿಯಲ್ಲಿ ನಡೆದಿದೆ.
ಸುರಾಜ್ ಅಲಿಯಾಸ್ ಸರ್ನಮ್ ವರ್ಮಾ ಹೆತ್ತವರನ್ನೇ ಕೊಲೆ ಮಾಡಿದ ಆರೋಪಿ. ತಂದೆ ಮಿಥಿಲೇಶ್, ತಾಯಿ ಸಿಯಾ ಮತ್ತು ಸೋದರಿಯನ್ನು ಬುಧವಾರ ಕೊಲೆ ಮಾಡಿದ್ದಾನೆ. ಆರೋಪಿ ಸುರಾಜ್‍ನನ್ನು ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
Advertisement
ಈ ಘಟನೆ ಕುರಿತು ಪೊಲೀಸರು ತನಿಖೆ ನಡೆಸಿದಾಗ ಕೃತ್ಯ ಎಸಗುವ ಮುನ್ನ ಆರೋಪಿ ಸುರಾಜ್ ಕಾಲೇಜಿಗೆ ಬಂಕ್ ಮಾಡಿ ಹಿರಿಯ ವಿದ್ಯಾರ್ಥಿಗಳ ಜೊತೆ ಹೊರಗಡೆ ಹೋಗುವ ಸಂಬಂಧ ವಾಟ್ಸಪ್ ನಲ್ಲಿ ಚರ್ಚೆ ನಡೆಸಿದ್ದರು.
Advertisement
Advertisement
ಕಾಲೇಜಿಗೆ ಬಂಕ್ ಹಾಕಿದ್ದ ಸೂರಜ್ ಮೆಹ್ರಾಲಿಯಲ್ಲಿ ಸ್ನೇಹಿತನ ರೂಮಿನಲ್ಲಿ ಕಾಲ ಕಳೆಯುತ್ತಿದ್ದನು. ಪಬ್‍ಜೀ ಆನ್‍ಲೈನ್ ಗೇಮ್‍ನಲ್ಲಿ ಮಗ್ನನಾಗಿದ್ದ ಸೂರಜ್ ಸ್ನೇಹಿತನ ಕೋಣೆಯಲ್ಲೇ ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಆಡಿದ್ದಾನೆ. ಬಳಿಕ ಮನೆಗೆ ತೆರಳಿದಾಗ ಸೂರಜ್ ನಡವಳಿಕೆ ಸಹಜವಾಗಿಯೇ ಇತ್ತು. ನಸುಕಿನ ಜಾವ 3ಕ್ಕೆ ಎದ್ದು ತಂದೆಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ನಂತರ ಪಕ್ಕದಲ್ಲೇ ಮಲಗಿದ್ದ ತಾಯಿಗೂ ಚಾಕುವಿನಿಂದ ಚುಚ್ಚಿದ್ದಾನೆ. ತದನಂತರ ಸಹೋದರಿಯ ಕೊಠಡಿಗೆ ತೆರಳಿ ಆಕೆಯ ಕತ್ತನ್ನು ಇರಿದಿದ್ದಾನೆ. ಮಗಳನ್ನು ರಕ್ಷಿಸಲು ಬಂದ ತಾಯಿಗೂ ಮತ್ತೊಮ್ಮೆ ಚಾಕು ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
PUBG ಗೇಮ್ ಎಂದರೇನು?
ಇದು ಆನ್‍ಲೈನ್ ಗೇಮ್ ಆಗಿದ್ದು, ಇದು ಆಟಗಾರರು ಆಟಗಾರನ ವಿರುದ್ಧ ಆಡುವಂತಹ ಗೇಮ್ ಆಗಿದೆ. ಇದರಲ್ಲಿ 100 ಅಥವಾ ಅದಕ್ಕಿಂತ ಹೆಚ್ಚಿನ ಆಟಗಾರರು ಜೀವಂತವಾಗಿ ಉಳಿಯಲು ಹೋರಾಡುತ್ತಾರೆ. ಹೋರಾಟದ ಮಾರ್ಗವು ಪ್ರತಿ ಸುತ್ತಿನಲ್ಲೂ ಬದಲಾಗುತ್ತದೆ. ಇತರ ಆಟಗಾರರನ್ನು ಶಸ್ತ್ರಸ್ತ್ರಗಳ ಮೂಲಕ ಆಡಲಾಗುತ್ತದೆ. ನೀವು ಈ ಆಟದಲ್ಲಿ ಕೊಲ್ಲಲ್ಪಟ್ಟರೆ ಈ ಆಟದಿಂದ ಔಟ್ ಆಗುತ್ತಾನೆ. ಪ್ರತಿ ಹಂತವನ್ನು ಎಷ್ಟು ಅವಧಿಯಲ್ಲಿ ಮುಗಿಸಿದ್ದಾರೋ ಆ ಆ ಅವಧಿಯನ್ನು ಲೆಕ್ಕಹಾಕಿ ಗೇಮ್ ಕರೆನ್ಸಿ ಸಿಗುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv