ಬ್ರೆಸಿಲಿಯಾ: ಬ್ರೆಜಿಲ್ (Brazil) ಮೂಲದ 19 ವರ್ಷದ ಮ್ಯಾಥ್ಯೂಸ್ ಪಾವ್ಲಾಕ್ ಭಾನುವಾರ (ಸೆ.01)ರಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಮೂಲತಃ ದಕ್ಷಿಣ ಬ್ರೆಜಿಲ್‌ನ ಸಾಂಟಾ ಕ್ಯಾಟರಿನಾದವರಾದ ಮ್ಯಾಥ್ಯೂಸ್ ಪಾವ್ಲಾಕ್ (Matheus Pavlak) ದೇಹದಾರ್ಢ್ಯದಲ್ಲಿ (Bodybuilder) ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.ಇದನ್ನೂ ಓದಿ: ಸರ್ವಿಸ್ ರಸ್ತೆಯಲ್ಲಿ ಗುಂಡಿ ಗಂಡಾಂತರ: ಹೆದ್ದಾರಿಯಲ್ಲಿ ಕುಸಿದ ಬೃಹತ್ ಸ್ಲಾಬ್‌ಗಳು
ತಮ್ಮ ಹುಟ್ಟೂರಲ್ಲಿ ನಡೆದ ಸ್ಪರ್ಧೆಗಳಲ್ಲಿ 4ನೇ ಮತ್ತು 6ನೇ ಸ್ಥಾನ ಪಡೆದುಕೊಂಡಿದ್ದ ಮ್ಯಾಥ್ಯೂಸ್, 2023ರಲ್ಲಿ 23 ವರ್ಷದೊಳಗಿನ ವಿಭಾಗದ ಸ್ಪರ್ಧೆಯಲ್ಲಿ “ಮಿ. ಬ್ಲೂಮೆನೌ” ಆಗಿದ್ದರು.
ದೇಹದಾರ್ಢ್ಯದಲ್ಲಿ ತೊಡಗಲು ಕೇವಲ 5 ವರ್ಷಗಳಲ್ಲಿ ತಮ್ಮ ದೇಹವನ್ನು ಮಾರ್ಪಡಿಸಿಕೊಂಡಿದ್ದರು. ದೇಹವನ್ನು ಮಾರ್ಪಡಿಸಿಕೊಳ್ಳಲು ಔಷಧಿಗಳ ಬಳಕೆಯು ಹೃದಯಾಘಾತಕ್ಕೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಉಹಾಪೋಹಗಳು ವ್ಯಕ್ತವಾಗಿವೆ.
View this post on Instagram
ಪಾವ್ಲಾಕ್‌ನ ಮಾಜಿ ತರಬೇತುದಾರ ಲ್ಯೂಕಾಸ್ ಚೆಗಟ್ಟಿ (Lucas Chegatti), ಸಾವಿನ ಸುದ್ದಿ ತೀವ್ರ ನೋವನ್ನುಂಟು ಮಾಡಿದೆ. ನಾನು ಮ್ಯಾಥ್ಯೂಸ್‌ನ ಮೊದಲ ತರಬೇತುದಾರನಾಗಿದ್ದೆ. ಅತ್ಯಮೂಲ್ಯ ಗೆಳೆಯನನ್ನು ನಾನು ಇಂದು ಕಳೆದುಕೊಂಡಿದ್ದೇನೆ. ಹೃದಯದ ಭಾರವನ್ನು ಪದಗಳ ಮೂಲಕ ವಿವರಿಸಲು ಸಾಧ್ಯವಿಲ್ಲ ಎಂದು ತಮ್ಮ ಇನ್‌ಸ್ಟಾಗ್ರಾಂ (Instagram) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.ಇದನ್ನೂ ಓದಿ: ಪಶ್ಚಿಮ ಬಂಗಾಳದ ʼಅಪರಾಜಿತ ಬಿಲ್ʼ ಪೋಕ್ಸೊಗಿಂತ ಭಿನ್ನ ಹೇಗೆ?