– ಟ್ರಂಪ್ ಆಹ್ವಾನಿಸಿದರೂ ಅಮೆರಿಕಕ್ಕೆ ತೆರಳಲಿಲ್ಲ
– ಭಾರತದಲ್ಲೇ ರಿಸರ್ಚ್ ಮಾಡ್ತೇನೆ ಎಂದ ಗೋಪಾಲ್
ಪಾಟ್ನಾ: ಬಿಹಾರದ ಬಾಗಲ್‍ಪುರದ ಧ್ರುವಗಂಜ್ ಗ್ರಾಮದ 19 ವರ್ಷದ ಯುವಕ ಮೂರು ಬಾರಿ ನಾಸಾ ಆಫರ್ ತಿರಸ್ಕರಿಸಿದ್ದಾರೆ. ಅಲ್ಲದೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಆಹ್ವಾನಿಸಿದರೂ ಭಾರತದಲ್ಲೇ ರಿಸರ್ಚ್ ಮಾಡುತ್ತೇನೆ ಎಂದು ಹೇಳುವ ಮೂಲಕ ಯುವಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾರೆ.
19 ವರ್ಷದ ಯುವಕ ಗೋಪಾಲ್ ಪ್ರತಿ ವರ್ಷ ದೇಶದ 100 ಮಕ್ಕಳಿಗೆ ಸಹಾಯ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ. 2019ರಲ್ಲಿ ಗೋಪಾಲ್ ಈ ಕೆಲಸ ಶುರು ಮಾಡಿದ್ದು, ಈಗ 8 ಮಕ್ಕಳ ಆವಿಷ್ಕಾರಕ್ಕಾಗಿ ತಾತ್ಕಾಲಿಕ ಪೇಟೆಂಟ್ ಕೂಡ ಪಡೆದಿದ್ದಾರೆ. ಸದ್ಯ ಗೋಪಾಲ್ ಈ ಡೆಹ್ರಾಡೂನ್ ಸರ್ಕಾರಿ ಗ್ರಾಫಿಕ್ ಏರಾ ಇನ್‍ಸ್ಟಿಟ್ಯೂಟ್‍ನ ಲ್ಯಾಬ್‍ನಲ್ಲಿ ಟೆಸ್ಟಿಂಗ್ ಮಾಡುತ್ತಿದ್ದಾರೆ. ಅಲ್ಲದೆ ಜಾರ್ಖಂಡ್‍ನಲ್ಲಿ ಲ್ಯಾಬ್ ತೆರೆದು ಅಲ್ಲಿ ರಿಸರ್ಚ್ ಮಾಡಲಿದ್ದಾರೆ.
Advertisement
Advertisement
ಗೋಪಾಲ್ ತುಳಸಿಪುರದ ಮಾಡೆಲ್ ಹೈಸ್ಕೂಲ್‍ನಲ್ಲಿ 12ನೇ ತರಗತಿವರೆಗೂ ವಿದ್ಯಾಭ್ಯಾಸ ಮಾಡಿದ್ದಾರೆ. 2013-14ರಲ್ಲಿ ಬಯೋಸೆಲ್ ಆವಿಷ್ಕಾರಕ್ಕಾಗಿ ಗೋಪಾಲ್ ಅವರು ಇನ್‍ಸ್ಪೈಯರ್ಡ್ ಅವಾರ್ಡ್ ಕೂಡ ಪಡೆದಿದ್ದಾರೆ. ಪ್ರಶಸ್ತಿ ಪಡೆಯುವಾಗ ಅವರು ಹತ್ತನೇ ತರಗತಿಯಲ್ಲಿ ಓದುತ್ತಿದ್ದರು. 2008ರಲ್ಲಿ ಗೋಪಾಲ್ ಅವರ ಗ್ರಾಮದಲ್ಲಿ ಪ್ರವಾಹ ಬಂದಿದ್ದು, ಈ ವೇಳೆ ಸಾಕಷ್ಟು ಹಾನಿಯಾಗಿತ್ತು.
Advertisement
ಪ್ರವಾಹ ಬಂದ ಸಂದರ್ಭದಲ್ಲಿ ಗೋಪಾಲ್ ಅವರ ತಂದೆ ಪ್ರೇಮ್‍ರಂಜನ್ ಕುಮಾರ್ ಅವರು ತಮ್ಮ ಮಗನಿಗೆ 10ನೇ ತರಗತಿ ನಂತರ ಮುಂದೆ ಓದಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಆದರೆ ಗೋಪಾಲ್ ತಮ್ಮ ಛಲವನ್ನು ಬಿಟ್ಟು ಕೊಡಲಿಲ್ಲ. ಸ್ಕಾಲರ್‍ಶಿಪ್ ಪಡೆಯಲು ಏನಾದರೂ ಮಾಡಬೇಕು ಎಂದು ಗೋಪಾಲ್ ಯೋಚಿಸುತ್ತಿದ್ದರು.
Advertisement
2017, ಅಗಸ್ಟ್ 31ರಂದು ಗೋಪಾಲ್ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ್ದರು. ಆಗ ಮೋದಿ ಅವರು ಗೋಪಾಲ್‍ರನ್ನು ಅಹಮದಾಬಾದ್‍ನ ಎನ್‍ಐಎಫ್‍ಗೆ ಕಳುಹಿಸಿಕೊಟ್ಟರು. ಈ ವೇಳೆ ಗೋಪಾಲ್ 6 ಆವಿಷ್ಕಾರವನ್ನು ಮಾಡಿದ್ದರು. ಈಗ ಗೋಪಾಲ್ ಅವರ ಹೆಸರು ವಿಶ್ವದ 30 ಸ್ಟಾರ್ಟಪ್ ವಿಜ್ಞಾನಿಗಳ ಪಟ್ಟಿಯಲ್ಲಿದೆ. ಏಪ್ರಿಲ್‍ನಲ್ಲಿ ಅಬುಧಾಬಿಯಲ್ಲಿ ನಡೆಯುವ ವಿಶ್ವದ ಅತಿ ದೊಡ್ಡ ಸೈನ್ಸ್ ಫೇರ್ ನಡೆಯಲಿದೆ. ಇದರಲ್ಲಿ 6 ಸಾವಿರ ವಿಜ್ಞಾನಿಗಳು ಭಾಗವಹಿಸುತ್ತಿದ್ದು, ಗೋಪಾಲ್ ಚೀಫ್ ಸ್ಪೀಕರ್ ಆಗಿ ಭಾಗವಹಿಸಲಿದ್ದಾರೆ.