ಹಾವೇರಿ: ಹಾವೇರಿ ಶಾಸಕ ನೆಹರು ಓಲೇಕಾರರ ಜಮೀನಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿದ್ದ ವೇಳೆ ಯುವಕನೋರ್ವ ಟ್ರ್ಯಾಕ್ಟರ್ ನ ರೋಟರ್ ಯಂತ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ನಡೆದಿದೆ.
ಬ್ಯಾಡಗಿ ತಾಲೂಕಿನ ಕಾಟೇನಹಳ್ಳಿ ಗ್ರಾಮದ ಬಳಿಯ ಜಮೀನಿನಲ್ಲಿ ಈ ದುರ್ಘಟನೆ ನಡೆದಿದೆ. ಮೃತ ಯುವಕನನ್ನ 19 ವರ್ಷ ವಯಸ್ಸಿನ ಕುಮಾರ ಲಕ್ಕುಂಡಿ ಎಂದು ಗರುತಿಸಲಾಗಿದೆ.
Advertisement
ಕುಮಾರ ರಾಣೇಬೆನ್ನೂರು ತಾಲೂಕಿನ ಹೆಡಿಯಾಲ ಗ್ರಾಮದ ನಿವಾಸಿಯಾಗಿದ್ದು, ಕಳೆದ ಕೆಲವು ದಿನಗಳಿಂದ ಮೃತ ಕುಮಾರ ಶಾಸಕ ಓಲೇಕಾರರ ಜಮೀನಿಗೆ ಕೃಷಿ ಕೆಲಸಕ್ಕೆಂದು ಬಂದಿದ್ದ. ಶಾಸಕರ ಜಮೀನಿನಲ್ಲಿ ರೋಟರ್ ಹೊಡೆಯುತ್ತಿದ್ದ ವೇಳೆ ರೋಟರ್ ಯಂತ್ರದ ಮೇಲೆ ಕುಳಿತಿದ್ದ ಕುಮಾರ ಆಯತಪ್ಪಿ ಬಿದ್ದು ಯಂತ್ರದಲ್ಲಿ ಸಿಲುಕಿ ಮೃತಪಟ್ಟಿದ್ದಾನೆ ಎನ್ನಲಾಗಿದೆ.
Advertisement
ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಹಾಗೂ ಶಾಸಕ ನೆಹರು ಓಲೇಕಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.