ಬೆಂಗಳೂರು: ಎರಡನೇ ವರ್ಷದ ಬಿಎಸ್‍ಸಿ ಪರೀಕ್ಷೆ ಅಕ್ಟೋಬರ್ ತಿಂಗಳಲ್ಲಿ ನಡೆದಿದ್ದು, ಜನವರಿಗೆ ಫಲಿತಾಂಶ ಕೂಡ ಬಂದಿದೆ. ಆದರೆ ಬಿಎಂಸಿ ಕಾಲೇಜಿನ 19 ಜನ ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿದೆ. 40 ದಿನವಾದ್ರೂ ರಾಜೀವ್ ಗಾಂಧಿ ವಿವಿ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸಿಲ್ಲ.
ನಮ್ಮ ಒಂದು ವಿಷಯದ ಉತ್ತರ ಪತ್ರಿಕೆ ಮಿಸ್ ಆಗಿದೆ ಎನ್ನುವ ಮಾಹಿತಿ ಬಂದಿದೆ. ಇದಕ್ಕಾಗಿ ನಮ್ಮ ಫಲಿತಾಂಶ ತಡೆ ಹಿಡಿದಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿವಿ ನಿರ್ಲಕ್ಷ್ಯ ಖಂಡಿಸಿ ಇಂದು ಬಿಎಂಸಿ ಮುಂಭಾಗ 19 ಜನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳೇ ಕೇಳಿದಾಗ ‘ಇರಿ ರಿಸಲ್ಟ್ ಕೊಡ್ತೀವಿ’ ಎಂದು ಹಾರಿಕೆಯ ಉತ್ತರ ಕೊಟ್ಟಿದ್ದಾರೆ ಎನ್ನಲಾಗಿದೆ. ಅತ್ತ ಬಿಎಂಸಿ ಆಡಳಿತ ಮಂಡಳಿ ಕೂಡ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ. ಫಲಿತಾಂಶ ಅನೌನ್ಸ್ ಆಗದೇ ಸ್ಕಾಲರ್ ಶಿಪ್‍ಗೆ ಅರ್ಜಿ ಹಾಕುವಂತಿಲ್ಲ. ಬಹುತೇಕ ವಿದ್ಯಾರ್ಥಿಗಳಿಗೆ ಈ ವರ್ಷದ ಖೋಟಾದ ಸ್ಕಾಲರ್‍ಶಿಪ್ ಕೂಡ ಮಿಸ್ ಆಗಿದೆ. ಇದನ್ನು ಖಂಡಿಸಿ ವಿದ್ಯಾರ್ಥಿಗಳು ಬಿಎಂಸಿ ಮುಂಭಾಗ ಪ್ರತಿಭಟನೆ ನಡೆಸಿದರು.