ರಾಮನಗರ: ನಿರ್ಜನ ಪ್ರದೇಶಗಳಲ್ಲಿ ಹೆಚ್ಚಾಗಿ ಹಾವುಗಳು ಮೊಟ್ಟೆಯಿಟ್ಟು ಮರಿ ಮಾಡುತ್ತವೆ. ಆದ್ರೆ ಜಿಲ್ಲೆಯ ಗಾಂಧಿನಗರದಲ್ಲಿ ಜನ ವಾಸಿಸುವ ಪ್ರದೇಶದಲ್ಲಿ ಬರೋಬ್ಬರಿ 19 ಹಾವಿನ ಮರಿಗಳು ಪತ್ತೆಯಾಗಿದ್ದು ಸ್ಥಳೀಯರು ಅಚ್ಚರಿಪಟ್ಟಿದ್ದಾರೆ.
ಕೊಳಕುಮಂಡಲ ಜಾತಿಗೆ ಸೇರಿದ ಸುಮಾರು 19 ಹಾವಿನ ಮರಿಗಳು ಪತ್ತೆಯಾಗಿದ್ದು, ಅದರಲ್ಲಿ 2 ಹಾವಿನ ಮರಿಗಳು ಸಾವನ್ನಪ್ಪಿದ ಸ್ಥಿತಿಯಲ್ಲಿ ದೊರಕಿದೆ. ಗಾಂಧಿನಗರದ ನಿವಾಸಿ ಗೌತಮ್ ಅವರ ಮನೆಯ ಬಳಿ ಈ ಹಾವಿನ ಮರಿಗಳು ಪತ್ತೆಯಾಗಿವೆ. ಒಮ್ಮೆಲೆ ಇಷ್ಟು ಸಂಖ್ಯೆಯಲ್ಲಿ ಹಾವಿನ ಮರಿಗಳನ್ನು ಕಂಡು ಬಡಾವಣೆ ಮಂದಿ ಹೌಹಾರಿ ಬಳಿಕ ಉರಗ ತಜ್ಞರಿಗೆ ವಿಷಯ ತಿಳಿಸಿದ್ದಾರೆ.
Advertisement
Advertisement
ಸ್ಥಳಕ್ಕೆ ಬಂದು ಉರಗ ತಜ್ಞರು ಹಾವಿನ ಮರಿಗಳನ್ನು ಸೆರೆಹಿಡಿದು ರಕ್ಷಿಸಿದ್ದಾರೆ. ಒಟ್ಟು 19 ಹಾವಿನ ಮರಿಗಳು ಪತ್ತೆಯಾಗಿದ್ದು, ಅವುಗಳಲ್ಲಿ 2 ಮೃತಪಟ್ಟಿದ್ದರೆ 17 ಮರಿಗಳು ಜೀವಂತವಾಗಿವೆ. ಒಂದೇ ಸ್ಥಳದಲ್ಲಿ ಇಷ್ಟೆಲ್ಲ ಹಾವಿನ ಮರಿಗಳು ದೊರಕಿರುವ ವಿಷಯ ತಿಳಿಯುತ್ತಿದ್ದಂತೆ ಇದನ್ನು ನೋಡಲು ಜನರು ಮುಗಿಬಿದ್ದಿದ್ದಾರೆ. ಅಲ್ಲದೆ ಈ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ.