ಟೆಲ್ ಅವೀವ್: ಗಾಜಾಪಟ್ಟಿಯ ಅತಿದೊಡ್ಡ ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ (Israel) ಸೇನೆಯು ಬುಧವಾರ ಭೀಕರ ದಾಳಿ ನಡೆಸಿದೆ. ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ (Airstrikes) ಹಮಾಸ್ ಉಗ್ರರ ಟಾಪ್ ಕಮಾಂಡರ್ ಇಬ್ರಾಹಿಂ ಬ್ಯಾರಿ ಹತ್ಯೆಗೀಡಾಗಿದೆ. ಇಸ್ರೇಲ್ ಮೇಲೆ ನಡೆದ ಅಕ್ಟೋಬರ್ 7ರ ಹಮಾಸ್ ದಾಳಿಯಲ್ಲಿ ಈತ ಪ್ರಮುಖ ಮಾರ್ಗದರ್ಶಕನೂ ಆಗಿದ್ದ ಎನ್ನಲಾಗಿದೆ.
ಅಲ್ಲದೇ ಇಸ್ರೇಲ್ ನಡೆಸಿದ ಈ ದಾಳಿಯಲ್ಲಿ ಅಲ್ ಜಜೀರಾ (Al Jazeera) ಕುಟುಂಬದ 19 ಮಂದಿ, ಸುಮಾರು 50 ಮಂದಿ ಪ್ಯಾಲೆಸ್ತೀನಿಯರು ಸಾವನ್ನಪ್ಪಿದ್ದಾರೆ. ಅಲ್ ಜಜೀರಾ ಎಕ್ಸ್ ಖಾತೆಯಲ್ಲಿ ಈ ದಾಳಿಯನ್ನ ಖಂಡಿಸಿದೆ. ಇದನ್ನೂ ಓದಿ: ಮಕ್ಕಳಿಗೆ ಕನ್ನಡ ಭಾಷೆಯಲ್ಲೇ ಪರೀಕ್ಷೆ ಮಾಡುವಂತೆ ಪ್ರಧಾನಿಗೆ ಪತ್ರ ಬರೀತಿನಿ: ಸಿಎಂ
Advertisement
Advertisement
ಜಬಾಲಿಯಾ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ (Israel Attack) ಹತ್ತಾರು ಮಂದಿ ಸಾವನ್ನಪ್ಪಿದ್ದಾರೆ. ಬ್ಯಾರಿಯನ್ನು ತೊಡೆದುಹಾಕಲು ನಿರಾಶ್ರಿತರ ಶಿಬಿರವನ್ನು ಧ್ವಂಸ ಮಾಡಿರುವುದಾಗಿ ಇಸ್ರೇಲ್‌ನ ರಕ್ಷಣಾ ಪಡೆಗಳು ತಿಳಿಸಿವೆ. ಉತ್ತರ ಗಾಜಾದ ಜಬಾಲಿಯಾ ನಿರಾಶ್ರಿತರ ಶಿಬಿರದಲ್ಲಿ ಸ್ವಯಂಸೇವಕರು ಧ್ವಂಸಗೊಂಡ ಕಟ್ಟಡಗಳ ಅವಶೇಷಗಳ ನಡುವೆ ದೇಹಗಳು ಮತ್ತು ಬದುಕುಳಿದವರನ್ನು ಹುಡುಕುತ್ತಿದ್ದಾರೆ. ಕನಿಷ್ಠ 47 ಮೃತ ದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
Advertisement
Advertisement
ಸ್ವಲ್ಪ ಸಮಯದ ಹಿಂದೆ ಐಡಿಎಫ್ ಯುದ್ಧವಿಮಾನಗಳು ಹಮಾಸ್ ಭಯೋತ್ಪಾದಕ ಸಂಘಟನೆಯ ಜಬಾಲಿಯಾ ಬ್ರಿಗೇಡ್‌ನ ಕಮಾಂಡರ್ ಇಬ್ರಾಹಿಂ ಬ್ಯಾರಿಯನ್ನು ಹತ್ಯೆ ಮಾಡಿತು. ಆತ ಅಕ್ಟೋಬರ್ 7ರಂದು ಮಾರಕ ಭಯೋತ್ಪಾದಕ ದಾಳಿಯನ್ನು ನಿರ್ದೇಶಿಸಿದವರಲ್ಲಿ ಒಬ್ಬನಾಗಿದ್ದ ಎಂದು ಇಸ್ರೇಲಿ ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: Operation Leopard: ರಣತಂತ್ರ ರೂಪಿಸಿ ಕೊನೆಗೂ ಬೊಮ್ಮನಹಳ್ಳಿ ಚಿರತೆ ಸೆರೆ
ಹಮಾಸ್ ಭಯೋತ್ಪಾದಕ ಗುಂಪಿನ ಮಿಲಿಟರಿ ವಿಭಾಗವಾಗಿರುವ ಎಝೆಡಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್, ಗಾಜಾವನ್ನು ಇಸ್ರೇಲಿ ಪಡೆಗಳು ಸ್ಮಶಾನವಾಗಿ ಮಾಡುವುದಾಗಿ ಪ್ರತಿಜ್ಞೆ ಮಾಡಿದೆ. ಹಮಾಸ್ ನಡೆಸುತ್ತಿರುವ ಗಜಾನ್ ಆರೋಗ್ಯ ಸಚಿವಾಲಯವು, ಈ ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಸತ್ತು, 150 ಮಂದಿ ಗಾಯಗೊಂಡಿದ್ದಾರೆ ಎಂದಿದೆ. ಇದು ಇಸ್ರೇಲಿನ ಘೋರ ಹತ್ಯಾಕಾಂಡ. ಇನ್ನೂ ಹೆಚ್ಚಿನ ಮಂದಿ ಅವಶೇಷಗಳಡಿಯಲ್ಲಿ ಸಮಾಧಿಯಾಗಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ಇಸ್ರೇಲ್ ಗಾಜಾ ನಿವಾಸಿಗಳಿಗೆ ಪ್ರದೇಶವನ್ನು ತೊರೆಯುವಂತೆ ಎಚ್ಚರಿಕೆ ನೀಡಿದೆ. ಆದ್ರೆ ಕೆಲವು ಕುಟುಂಬಗಳು ಉಳಿದುಕೊಂಡಿವೆ ಎಂದು ಅಂದಾಜಿಸಲಾಗಿದೆ. ಇದನ್ನೂ ಓದಿ: ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ತಲೆ ಎತ್ತಲಿದೆ ಶ್ರೀರಾಮನ ಮೂರ್ತಿ
Web Stories