ಚಂಡೀಗಢ: ಪಟಿಯಾಲ ಸೆಂಟ್ರಲ್ ಜೈಲು ಸಂಕೀರ್ಣದಿಂದ 19 ಕೀ ಪ್ಯಾಡ್ ಮೊಬೈಲ್ ಫೋನ್‍ಗಳನ್ನು ಭಾನುವಾರ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪಟಿಯಾಲ ಕೇಂದ್ರ ಕಾರಾಗೃಹದಲ್ಲಿ ಭಾನುವಾರ ನಡೆಸಿದ ವಿಶೇಷ ಶೋಧ ಕಾರ್ಯಾಚರಣೆಯಲ್ಲಿ ಗೋಡೆ ಮತ್ತು ನೆಲವನ್ನು ಕೊರೆದು ಬಚ್ಚಿಟ್ಟಿದ್ದ 19 ಮೊಬೈಲ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೀಗ ಕೇಂದ್ರ ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿಕಾರ್ಯಕ್ಕೆ ಪಂಜಾಬ್ ಜೈಲು ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಟ್ವೀಟ್ ಮಾಡುವ ಮೂಲಕ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಇಲ್ಲ, ಸ್ವಾತಂತ್ರೋತ್ಸವ ಅದ್ದೂರಿಯಾಗಿ ಆಚರಿಸುತ್ತೇವೆ: ಜಮೀರ್ ಅಹ್ಮದ್
Advertisement
ਅੱਜ ਇੱਕ ਸਰਚ ਅਭਿਆਨ ਦੌਰਾਨ ਵਿੱਚ ਪਟਿਆਲਾ ਕੇਂਦਰੀ ਜੇਲ੍ਹ ਵਿੱਚ 19 ਮੋਬਾਈਲ ਬਰਾਮਦ ਹੋਏ ਹਨ, ਜਿਨ੍ਹਾਂ ਨੂੰ ਕੰਧਾਂ ਅਤੇ ਫਰਸ਼ ਵਿੱਚ ਪੁੱਟ ਕੇ ਛੁਪਾਏ ਗਏ ਸਨ।
ਕੇਂਦਰੀ ਜੇਲ੍ਹ ਪਟਿਆਲਾ ਦੇ ਅਧਿਕਾਰੀਆਂ ਅਤੇ ਸਟਾਫ਼ ਵੱਲੋਂ ਵਧੀਆ ਕੰਮ।
ਅਸੀਂ ਆਪਣੀਆਂ ਜੇਲ੍ਹਾਂ ਨੂੰ ਨਸ਼ਾ ਮੁਕਤ ਅਤੇ ਮੋਬਾਈਲ ਮੁਕਤ ਬਣਾਉਣ ਲਈ ਵਚਨਬੱਧ ਹਾਂ। pic.twitter.com/as5zhwn68P
— Harjot Singh Bains (@harjotbains) August 7, 2022
Advertisement
ಹರ್ಜೋತ್ ಸಿಂಗ್ ಬೈನ್ಸ್ ಅವರು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಫೋಟೋದಲ್ಲಿ ಖತರ್ನಾಕ್ ಖದೀಮರು ಫೋನ್‍ಗಳನ್ನು ಬಚ್ಚಿಡಲು ನೆಲದ ಟೈಲ್ಸ್ ಜಾಯಿಂಟ್‍ಗಳು ಮತ್ತು ಗೋಡೆಯ ಕೊರೆದಿರುವುದನ್ನು ಕಾಣಬಹುದಾಗಿದೆ. ಮೊಬೈಲ್ ಫೋನ್ ಇಟ್ಟುಕೊಳ್ಳುವುದು ತಪ್ಪು ಎಂದು ತಿಳಿದಿದ್ದರೂ, ಕೈದಿಗಳು ಸುರಕ್ಷಿತವಾಗಿ ಮೊಬೈಲ್ ಫೋನ್ ಅನ್ನು ಜೈಲಿನೊಳಗೆ ಹೇಗೆ ತಂದರು ಎಂಬುವುದು ಇದೀಗ ಯಕ್ಷ ಪ್ರಶ್ನೆಯಾಗಿದೆ. ಇದನ್ನೂ ಓದಿ: ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು?: ಹೆಚ್‌ಡಿಕೆ ವಾಗ್ದಾಳಿ
Advertisement
Advertisement
ಪಟಿಯಾಲ ಸೆಂಟ್ರಲ್ ಜೈಲಿನಲ್ಲಿ ಮೊಬೈಲ್ ಫೋನ್ ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಮೇ 25 ರಂದು, ಕುಖ್ಯಾತ ಸಿಂಥೆಟಿಕ್ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ದೋಷಿ ಎಂದು ವಜಾಗೊಂಡ ಪಂಜಾಬ್ ಡಿಎಸ್‍ಪಿ ಜಗದೀಶ್ ಸಿಂಗ್ ಭೋಲಾ ಅವರಿಂದ ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿತ್ತು. ಮೇ 31 ರಂದು ಜೈಲು ಅಧಿಕಾರಿಗಳು ಈ ಕೇಂದ್ರ ಕಾರಾಗೃಹದ ಸಂಕೀರ್ಣದಲ್ಲಿ ಹೂತಿಟ್ಟಿದ್ದ ಎಂಟು ಮೊಬೈಲ್ ಫೋನ್‍ಗಳನ್ನು ವಶಪಡಿಸಿಕೊಂಡಿದ್ದರು.