InternationalLatestLeading NewsMain Post

ಅಫ್ಘಾನಿಸ್ತಾನದ ಮದರಸಾದಲ್ಲಿ ಬಾಂಬ್ ಸ್ಫೋಟ – 19 ಸಾವು, 24 ಮಂದಿಗೆ ಗಾಯ

ಕಾಬೂಲ್: ಅಫ್ಘಾನಿಸ್ತಾನದ (Afghanistan) ಉತ್ತರ ನಗರವಾದ ಐಬಕ್‌ನಲ್ಲಿರುವ (Aybak) ಮದರಸಾದಲ್ಲಿ (Madrasa) ಬುಧವಾರ ಸ್ಫೋಟ (Blast) ಉಂಟಾಗಿದ್ದು, ಘಟನೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ 19 ಜನರು ಸಾವನ್ನಪ್ಪಿದ್ದಾರೆ ಮತ್ತು 24 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ತಾಲಿಬಾನ್ (Taliban) ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಅಲ್ಲಿ ನಾಗರಿಕರನ್ನು ಗುರಿಯಾಗಿಸಿಕೊಂಡು ಸಾಕಷ್ಟು ಬಾರಿ ಸ್ಫೋಟಗಳು ಹಾಗೂ ದಾಳಿಗಳನ್ನು ನಡೆಸಲಾಗಿದೆ.

ಅಫ್ಘಾನಿಸ್ತಾನದ ಮದರಸಾದಲ್ಲಿ ಬಾಂಬ್ ಸ್ಫೋಟ - 19 ಸಾವು, 24 ಮಂದಿಗೆ ಗಾಯ

ನಿನ್ನೆ ರಾಜಧಾನಿ ಕಾಬೂಲ್‌ನ ಉತ್ತರಕ್ಕೆ ಸುಮಾರು 200 ಕಿ.ಮೀ (130 ಮೈಲು) ದೂರದಲ್ಲಿರುವ ಐಬಕ್‌ನಲ್ಲಿರುವ ಮದರಸಾದಲ್ಲಿ ಬಾಂಬ್ ಸ್ಫೋಟಗೊಂಡಿದೆ. ಮೃತರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಯುದ್ಧದಲ್ಲಿ ಐಸಿಸ್ ನಾಯಕ ಖುರಾಶಿ ಸಾವು

ಇಸ್ಲಾಮಿಕ್ ಧಾರ್ಮಿಕ ಶಾಲೆ ಅಲ್ ಜಿಹಾದ್ ಮದರಸಾದಲ್ಲಿ ಸ್ಫೋಟ ಸಂಭವಿಸಿರುವುದಾಗಿ ಅಲ್ಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಅಪಘಾತದಿಂದಾದ ಪ್ರಾಣಹಾನಿಯ ಅಂಕಿಅಂಶವನ್ನು ಸ್ಪಷ್ಟವಾಗಿ ನೀಡಲಾಗಿಲ್ಲ.

ಅಫ್ಘಾನಿಸ್ತಾನದ ಮದರಸಾದಲ್ಲಿ ಬಾಂಬ್ ಸ್ಫೋಟ - 19 ಸಾವು, 24 ಮಂದಿಗೆ ಗಾಯ

ಹೆಚ್ಚಿನ ಸಮಯಗಳಲ್ಲಿ ಅಪಘಾತದ ಅಂಕಿಅಂಶವನ್ನು ತಾಲಿಬಾನ್ ಕಡಿಮೆ ಮಾಡುತ್ತದೆ. ನಿನ್ನೆಯ ಘಟನೆಯಲ್ಲಿ 10 ವಿದ್ಯಾರ್ಥಿಗಳು ಸಾವನ್ನಪ್ಪಿದ್ದು, ಹಲವರಿಗೆ ಗಾಯಗಳಾಗಿವೆ ಎಂದು ತಾಲಿಬಾನ್ ತಿಳಿಸಿದೆ. ಆದರೆ ಆಸ್ಪತ್ರೆಯಲ್ಲಿ 19 ಜನರು ಸಾವನ್ನಪ್ಪಿರುವುದು ದೃಢಪಡಿಸಲಾಗಿದೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಇಂದು ಮೊದಲ ಹಂತದ ಮತದಾನ – ತವರು ರಾಜ್ಯದಲ್ಲಿ ಮೋದಿ, ಶಾ ಜೋಡಿಗೆ ಅಗ್ನಿ ಪರೀಕ್ಷೆ

Live Tv

Leave a Reply

Your email address will not be published. Required fields are marked *

Back to top button