ನಿನ್ನೆ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಮಂಸೋರೆ ಅವರ ’19.20.21’ ಹೆಸರಿನ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಸಮಾಜದ ಮತ್ತೊಂದು ಮುಖವನ್ನು ಅನಾವರಣಗೊಳಿಸಿರುವ ಈ ಟೀಸರ್ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡದಲ್ಲಿ ಮತ್ತೊಂದು ಭರವಸೆಯ ಸಿನಿಮಾ ಎಂದು ಹಲವರು ಹೊಗಳಿದ್ದಾರೆ. ಸಿನಿಮಾಟೋಗ್ರಫಿ, ಮ್ಯೂಸಿಕ್, ಪಾತ್ರಗಳ ಆಯ್ಕೆ ಹಾಗೂ ಚಿತ್ರಕಥೆಯ ತಾಕತ್ತಿನ ಬಗ್ಗೆ ಚರ್ಚೆಗಳು ನಡೆದಿವೆ.
Advertisement
ನಾಗರೀಕ ಸಮಾಜದಲ್ಲಿನ ಅನಾಗರೀಕ ವರ್ತನೆಗೆ ಕನ್ನಡಿ ಹಿಡಿದಂತಿದೆ ಟೀಸರ್. ಶೋಷಿತ ಸಮುದಾಯದ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲು ಹೊರಟಿದ್ದಾರಾ ನಿರ್ದೇಶಕರು ಎನ್ನುವ ಪ್ರಶ್ನೆಯನ್ನೂ ಟೀಸರ್ ಮೂಡಿಸುತ್ತದೆ. ನಿರ್ದೇಶಕ ಮಂಸೋರೆ ಪ್ರತಿಭಾವಂತ ಮತ್ತು ಜೀವಪರ ನಿರ್ದೇಶಕರು. ಹಾಗಾಗಿ ಈವರೆಗೂ ಹೇಳದೇ ಇರುವಂತಹ ಘಟನೆಯನ್ನು ಈ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
Advertisement
Advertisement
75ನೇ ಸ್ವಾತಂತ್ರ ದಿನೋತ್ಸವ ಸಂದರ್ಭದಲ್ಲಿ ಚಿತ್ರದ ಪೋಸ್ಟರ್ ಅನ್ನು ರಿಲೀಸ್ ಮಾಡಿದ್ದರು ನಿರ್ದೇಶಕರು. ವ್ಯಕ್ತಿಯೊಬ್ಬರ ಬಾಯಿಗೆ ಬಟ್ಟೆ ಕಟ್ಟಿ, ಬೆನ್ನಿನಲ್ಲಿ ರಕ್ತ ಸುರಿಯುವಂತಹ ಆ ಪೋಸ್ಟರ್ ಅನೇಕ ವಿಷಯಗಳನ್ನು ಹೇಳುವಂತಿತ್ತು. 2018 ರಿಂದ 2022ರ ತನಕ ಯುಎಪಿಎ ಕಾಯ್ದೆ ಅಡಿಯಲ್ಲಿ ಬಂಧನಕ್ಕೆ ಒಳಗಾದ 4690ಜನರಲ್ಲಿ ಕೇವಲ 149 ಮಂದಿ ಮಾತ್ರ ಅಪರಾಧಿಗಳು ಎಂಬ ಮಾಹಿತಿಯನ್ನೂ ಅವರು ಹಂಚಿಕೊಂಡಿದ್ದರು. ಹೀಗಾಗಿ ಇದೊಂದು ವಿಶೇಷ ಸಿನಿಮಾ ಎನ್ನುವುದು ಖಾತರಿ ಆಗಿತ್ತು. ಇದನ್ನೂ ಓದಿ: ನಾಗತಿಹಳ್ಳಿ ಚಂದ್ರಶೇಖರ್ ಚಿತ್ರಕ್ಕೆ ನಟಿ ಶಾನ್ವಿ ಶ್ರೀವಾಸ್ತವ್ ನಾಯಕಿ
Advertisement
ಸಿನಿಮಾದ ತಾರಾ ಬಳಗವೇ ವಿಶೇಷವಾಗಿದೆ ಖ್ಯಾತ ಗಾಯಕಿ ಎಂ.ಡಿ.ಪಲ್ಲವಿ, ಬಾಲಾಜಿ ಮನೋಹರ್, ಕೃಷ್ಣ ಹೆಬ್ಬಾಳೆ, ಸಂಪತ್ ಮೈತ್ರೇಯಾ, ಶೃಂಗ ಸೇರಿದಂತೆ ಪ್ರತಿಭಾವಂತ ಕಲಾವಿದರ ದಂಡೇ ಈ ಸಿನಿಮಾದಲ್ಲಿದೆ. ನಾತಿಚರಾಮಿ ಸಿನಿಮಾ ನಂತರ ಮತ್ತೆ ಈ ಚಿತ್ರಕ್ಕೆ ಬಿಂದು ಮಾಲಿನ ಸಂಗೀತ ನೀಡಿದ್ದಾರೆ. ನಾತಿಚರಾಮಿ ಚಿತ್ರಕ್ಕಾಗಿ ಬಿಂದು ಮಾಲಿನಿ ರಾಷ್ಟ್ರ ಪ್ರಶಸ್ತಿ ಕೂಡ ಪಡೆದಿದ್ದರು.
ನಿರ್ದೇಶಕರ ಜೊತೆಗೂಡಿ ವೀರೇಂದ್ರ ಮಲ್ಲಣ್ಣ ಚಿತ್ರಕ್ಕೆ ಚಿತ್ರಕಥೆ ಬರೆದಿದ್ದು, ರೋಣದ ಬಕ್ಕೇಶ್ ಅವರ ಹಿನ್ನೆಲೆ ಸಂಗೀತ ವಿದೆ. ಶಿವು ಕುಮಾರ್ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ದೇವರಾಜ್ ಆರ್ ನಿರ್ಮಾಪಕರು. ಈಗಾಗಲೇ ಬಹುತೇಕ ಶೂಟಿಂಗ್ ಕೂಡ ಮುಗಿದಿದ್ದು, ಬಿಡುಗಡೆಗೆ ಸಿದ‍್ಧವಾಗಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k