-3.8 ಕೋಟಿ ಸ್ಕಾಲರ್ ಶಿಪ್ ಪಡೆದಿದ್ದ ವಿದ್ಯಾರ್ಥಿನಿ
ನವದೆಹಲಿ: 19 ವರ್ಷದ ಸಿಬಿಎಸ್‍ಇ ಟಾಪರ್ ಸುದೀಕ್ಷಾ ಭಾಟಿ ಬುಲಂದಶಹರ್ ಬಳಿ ನಡೆದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ದಾದ್ರಿ ಜಿಲ್ಲೆಯ ಗ್ರೇಟರ್ ನೋಯ್ಡಾದ ಸುದೀಕ್ಷಾ 12ನೇ ತರಗತಿಯಲ್ಲಿ ಶೇ.98 ಅಂಕಗಳನ್ನು ಪಡೆದು, ಟಾಪರ್ ಆಗಿ ಹೊರಹೊಮ್ಮಿದ್ದರು.
ಮ್ಯಾಸಚೂಸೆಟ್ಸ್ ಬಾಬ್ಸನ್ ಕಾಲೇಜಿನಲ್ಲಿ ಶಿಕ್ಷಣ ಮುಂದುವರಿಸಲು ಸುದೀಕ್ಷಾ ಬರೋಬ್ಬರಿ 3.8 ಕೋಟಿ ರೂ. ಶಿಷ್ಯವೇತನ ಸಹ ಪಡೆದುಕೊಂಡಿದ್ದರು. ಸುದೀಕ್ಷಾ ಸೋದರ ಮತ್ತು ಪೊಲೀಸರ ಪ್ರಕಾರ ವಿದ್ಯಾರ್ಥಿನಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
Advertisement
Advertisement
ನಾನು ಮತ್ತು ಸುದೀಕ್ಷಾ ನಮ್ಮ ಬೈಕಿನಲ್ಲಿ 30 ಕಿಲೋ ಮೀಟರ್ ಸ್ಪೀಡ್ ನಲ್ಲಿ ಔರಾಂಗಬಾದ್ ನಿಂದ ಹೋಗ್ತಿದ್ದೀವಿ. ಮೊದಲು ಮನೆಗೆ ಅಥವಾ ಮಾವನ ಬಳಿ ಹೋಗೋಣ ಅಂತ ಕೇಳಿದೆ. ಆಗ ಸುದೀಕ್ಷಾ ಮನೆಗೆ ತೆರಳೋಣ ಅಂತ ಹೇಳಿದಳು. ನಮ್ಮ ಮುಂದೆ ಹೋದ ಬುಲೆಟ್ ಬೈಕ್ ಸವಾರ ದಿಢೀರ್ ಅಂತ ಬ್ರೇಕ್ ಹಾಕಿದ. ನಾನು ನಿಧಾನವಾಗಿ ಹೋಗ್ತಿದ್ದರಿಂದ ಬೈಕ್ ನಿಲ್ಲಿಸಿದೆ. ಬೈಕ್ ಬ್ಯಾಲೆನ್ಸ್ ತಪ್ಪಿದ್ದರಿಂದ ಅಕ್ಕ ಕೆಳಗೆ ಬಿದ್ದಿದ್ದಳು ಎಂದು ಸುದೀಕ್ಷಾ ಸೋದರ ನಿಗಮ್ ಭಾಟಿ ಹೇಳಿದ್ದಾನೆ. ಕೂಡಲೇ ಸುದೀಕ್ಷಾರನ್ನ ಆಸ್ಪತ್ರೆಗೆ ಸಾಗಿಸಿದಾಗ ವಿದ್ಯಾರ್ಥಿನಿ ಮೃತಪಟ್ಟಿರೋದನ್ನು ವೈದ್ಯರು ದೃಢಪಡಿಸಿದರು ಎಂದು ಬುಲಂದಶಹರ್ ಪೊಲೀಸರು ಮಾಹಿತಿ ನೀಡಿದ್ದಾರೆ.
Advertisement
Advertisement
ಔರಂಗಾಬಾದ್ ಪೊಲೀಸರಿಂದ ಮಾಹಿತಿ ಸಿಗುತ್ತಿದ್ದಂತೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಸಹ ನಡೆಸಲಾಗಿದೆ. ಹಾಗೆ ಮೃತ ವಿದ್ಯಾರ್ಥಿನಿಯ ಸೋದರನ ಹೇಳಿಕೆ ಸಹ ದಾಖಲಿಸಿಕೊಳ್ಳಲಾಗಿದೆ. ದಿಢೀರ್ ಅಂತ ವಾಹನದ ಬ್ರೇಕ್ ಹಾಕಿದ್ದರಿಂದ ವಿದ್ಯಾರ್ಥಿನಿ ಕೆಳಗೆ ಸಾವನ್ನಪ್ಪಿರೋದ ಪ್ರಾಥಮಿಕ ತನಿಕೆಯಲ್ಲಿ ತಿಳಿದು ಬಂದಿದೆ. ಮರಣೋತ್ತರ ಶವ ಪರೀಕ್ಷೆಯ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ನೀಡಲಾಗಿದೆ ಎಂದು ಬುಲಂದಶಹರ್ ಠಾಣೆಯ ಎಸ್.ಪಿ. ಅತುಲ್ ಕುಮಾರ್ ಶ್ರೀವಾತ್ಸವ್ ಹೇಳಿದ್ದಾರೆ.
ಬುಲಂದಶಹರ್ ನಗರದ ವಿದ್ಯಾ ಜ್ಞಾನ ಶಾಲೆಯಲ್ಲಿ ಸುದೀಕ್ಷಾ 12ನೇ ತರಗತಿಯಲ್ಲಿ ಶೇ.98 ಅಂಕ ಪಡೆಯುವ ಮೂಲಕ ಜಿಲ್ಲೆಯ ಟಾಪರ್ ಆಗಿದ್ದರು. ಸುದೀಕ್ಷಾ ತಂದೆ ಶೇಖರ್ ಭಾಟಿ ಓರ್ವ ರೈತರಾಗಿದ್ದರು. ಸುದೀಕ್ಷಾ ಯುಎಸ್ ಯುನಿವರ್ಸಿಟಿಯಿಂದ ನಾಲ್ಕು ವರ್ಷದ ವ್ಯಾಸಂಗಕ್ಕಾಗಿ 3.8 ಕೋಟಿ ರೂ. ಶಿಷ್ಯವೇತನ ಪಡೆದಿದ್ದರು.