19 ವರ್ಷದ ಧಾರಾವಾಹಿ ನಟಿಗೆ ತಂದೆಯಿಂದ್ಲೇ ಕೊಲೆ ಬೆದರಿಕೆ

Public TV
1 Min Read
TRUPTI

– ರಕ್ಷಣೆಗಾಗಿ ಪೊಲೀಸರಲ್ಲಿ ಮನವಿ

ಮುಂಬೈ: ಧಾರಾವಾಹಿ ಹಾಗೂ ಸಿನಿಮಾ ನಟಿ ತೃಪ್ತಿ ಶಂಖ್ದಾರ್‍ಗೆ ಆಕೆಯ ತಂದೆಯೇ ಕೊಲೆ ಬೆದರಿಕೆ ಹಾಕಿರುವ ವಿಚಾರವೊಂದು ಬೆಳಕಿಗೆ ಬಂದಿದೆ.

ಈ ಸಂಬಂಧ ಸ್ವತಃ ನಟಿಯೇ ವಿಡಿಯೋ ಮಾಡಿ ತನ್ನ ತಂದೆಯ ವಿರುದ್ಧ ಆರೋಪ ಮಾಡಿದ್ದಾಳೆ. ಅಲ್ಲದೆ ತನಗೆ ರಕ್ಷಣೆ ನೀಡುವಂತೆ ಆಕೆ ವಿಡಿಯೋ ಮೂಲಕ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾಳೆ.

kumkum d

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಹಿಂದಿಯ ‘ಕುಮ್ ಕುಮ್ ಭಾಗ್ಯ’ ಸೀರಿಯಲ್ ನಟಿ, ನನ್ನ ತಂದೆ ರಾಮ್ ರತನ್ ಶಂಖ್ದಾರ್ ಅವರಿಗೆ ಇಷ್ಟ ಬಂದ ಹುಡುಗನ ಜೊತೆ ಮದುವೆಯಾಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇದಕ್ಕೆ ನಾನು ಒಪ್ಪದಿದ್ದಕ್ಕೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕಣ್ಣೀರು ಹಾಕಿದ್ದಾಳೆ. ಈ ಹಿನ್ನೆಲೆಯಲ್ಲಿ ನನಗೆ ರಕ್ಷಣೆ ನೀಡಬೇಕು ಎಂದು ಬರೇಲಿ ಪೊಲೀಸರಲ್ಲಿ ಮನವಿ ಕೂಡ ಮಾಡಿಕೊಂಡಿದ್ದಾಳೆ.

trupti 1

ನನ್ನನ್ನು ತಳ್ಳಿ, ಕೂದಲು ಹಿಡಿದು ಥಳಿಸಿದ್ದಾರೆ. ಅಲ್ಲದೆ ಫಿಲಂ ಇಂಡಸ್ಟ್ರಿಗೆ ಸೇರಿಕೊಳ್ಳಲು ಮುಂಬೈಗೆ ತೆರಳಿದ್ದಾಗ ಕೊಟ್ಟ ಹಣವನ್ನು ವಾಪಸ್ ನೀಡುವಂತೆ ಗದರಿಸುತ್ತಿದ್ದಾರೆ ಅಂತ ಕೂಡ ತೃಪ್ತಿ ವಿಡಿಯೋದಲ್ಲಿ ಹೇಳಿಕೊಳ್ಳುವ ಮೂಲಕ ತಂದೆಯ ವಿರುದ್ಧ ಆರೋಪಗಳ ಸುರಿಮಳೆಗೈದಿದ್ದಾಳೆ. ಈ ವಿಡಿಯೋವನ್ನು ತೃಪ್ತಿ ಮಂಗಳವಾರ ರಾತ್ರಿ ತನ್ನ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾಳೆ. ಸದ್ಯ ತೃಪ್ತಿ ಇನ್ ಸ್ಟಾಗ್ರಾಂ ವಿಡಿಯೋ ಡಿಲೀಟ್ ಮಾಡಿದ್ದಾಳೆ.

kum kum

ಸದ್ಯ ತೃಪ್ತಿಗೆ 19 ವರ್ಷ ವಯಸ್ಸಾಗಿದ್ದು, ತಂದೆಯ ಬೆದರಿಕೆಯಿಂದ ಬೇಸತ್ತು ತನ್ನ ತಾಯಿಯ ಜೊತೆ ಮನೆ ಬಿಟ್ಟು ಬಂದಿದ್ದಾಳೆ. ತಂದೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಘಟನೆ ಬಗ್ಗೆ ಪ್ರತಿಕ್ರಿಯೆಗೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.

ತೃಪ್ತಿ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹಾಗೂ ಹಿಂದಿಯ ‘ಕುಮ್ ಕುಮ್ ಭಾಗ್ಯ’ ಸೀರಿಯಲ್ ನಲ್ಲಿ ನಟಿಸಿದ್ದಾಳೆ. ಇತ್ತ ಈ ಸಂಬಂಧ ನಮಗೆ ಯಾವುದೇ ರೀತಿಯ ಲಿಖಿತ ದೂರು ಬಂದಿಲ್ಲ. ಆದರೆ ಪ್ರಕರಣ ಕುರಿತು ತನಿಖೆ ಮಾಡುತ್ತೇವೆ ಎಂದು ಬರೇಲಿ ಪೊಲೀಸರು ತಿಳಿಸಿದ್ದಾರೆ.

kum kum 1

Share This Article
Leave a Comment

Leave a Reply

Your email address will not be published. Required fields are marked *