19 ಮಂದಿ ಪೌರ ಕಾರ್ಮಿಕರಿಗೆ ಕೊರೊನಾ- ಬೆಂಗ್ಳೂರು ಒನ್ ಅಧಿಕಾರಿಗೂ ಸೋಂಕು

Public TV
1 Min Read
BNG 8

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕೊರೊನಾ ಅಟ್ಟಹಾಸ ಮಿತಿ ಮೀರುತ್ತಿದೆ. ಸಾರಿಗೆ ಸಿಬ್ಬಂದಿ, ಪೊಲೀಸರು, ಡಾಕ್ಟರ್ಸ್, ನರ್ಸ್ ಆಯ್ತು ಇದೀಗ ಬಿಬಿಎಂಪಿಗೂ ಕೊರೊನಾ ಸೋಂಕು ವಕ್ಕರಿಸಿದೆ.

ಬೆಂಗಳೂರಲ್ಲಿ 19 ಜನ ಪೌರ ಕಾರ್ಮಿಕರಿಗೆ ಸೋಂಕು ತಗುಲಿದೆ. ನ್ಯಾಷನಲ್ ಕಾಲೇಜ್ ಗ್ರೌಂಡ್‍ನಲ್ಲಿ ಕೆಲಸ ಮಾಡುತ್ತಿದ್ದ 19 ಜನ ಪೌರಕಾರ್ಮಿಕರಲ್ಲಿ 7 ಜನ ಪಾದರಾಯನಪುರ ನಿವಾಸಿಗಳು ಅಂತ ಹೇಳಲಾಗ್ತಿದೆ.

CORONA VIRUS 4

ಸೋಂಕಿತ ಪಾದರಾಯನಪುರದ ನಿವಾಸಿಗಳನ್ನ ಹಜ್ ಭವನಕ್ಕೆ ಶಿಷ್ಟ್ ಮಾಡಲಾಗಿದೆ. ಉಳಿದ 12 ಜನರ ನಿವಾಸಗಳ ಪತ್ತೆಗೆ ಆರೋಗ್ಯ ಇಲಾಖೆ ಮುಂದಾಗಿದೆ. ಅಷ್ಟೇ ಅಲ್ಲ ಬಸವನಗುಡಿಯ ಬೆಂಗಳೂರು ಒನ್‍ನಲ್ಲಿ ಕೆಲಸ ಮಾಡ್ತಿದ್ದ ಅಧಿಕಾರಿ ಬಿಬಿಎಂಪಿಯ ರೆವಿನ್ಯೂ ಇನ್ಸ್ ಪೆಕ್ಟರ್‍ಗೆ ಕೊರೋನಾ ಪಾಸಿಟಿವ್ ಬಂದಿದೆ. ಬೆಂಗಳೂರು ಒನ್‍ಗೆ ಭೇಟಿ ಕೊಟ್ಟವರಿಗೆ ಢವ ಢವ ಶುರುವಾಗಿದೆ.

vlcsnap 2020 06 27 07h13m36s177

ನಿನ್ನೆ ಬಿಡಿಗಡೆ ಮಾಡಿದ ಹೆಲ್ತ್ ಬುಲೆಟಿನಲ್ಲಿ 445 ಮಂದಿಗೆ ಸೋಂಕು ದೃಢವಾಗಿದ್ದು, 10 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಎಂದಿನಂತೆ ಬೆಂಗಳೂರಿನಲ್ಲಿ ಅತಿ ಹೆಚ್ಚು 144 ಮಂದಿಗೆ ಸೋಂಕು ಬಂದಿದೆ. ರಾಜ್ಯದಲ್ಲಿ ಒಟ್ಟು 11,005ಕ್ಕೆ ಸೋಂಕಿತರ ಸಂಖ್ಯೆ ಏರಿಕೆಯಾಗಿದೆ. 246 ಮಂದಿ ಬಿಡುಗಡೆಯಾಗಿದ್ದಾರೆ. 445 ಮಂದಿಯಲ್ಲಿ 65 ಅಂತರಾಜ್ಯ ಪ್ರಯಾಣಿಕರಿದ್ದರೆ, 21 ಮಂದಿ ಅಂತರಾಷ್ಟ್ರೀಯ ಪ್ರಯಾಣಿಕರಿದ್ದಾರೆ. ಐಸಿಯುನಲ್ಲಿರುವ ರೋಗಿಗಳ ಸಂಖ್ಯೆ 178ಕ್ಕೆ ಏರಿಕೆಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *