ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿನದಿಂದ ದಿನ್ಕಕೆ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಕೆಲವು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಕೆಲವು ಆಸ್ಪತ್ರೆಗಳು ರೋಗಿಗಳಿಗೆ ಬೆಡ್ ನೀಡಲು ನಿರಾಕರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ದಕ್ಷಿಣ ವಲಯದ 19 ಆಸ್ಪತ್ರೆಗಳ ಪರವಾನಗಿಯನ್ನು ಬಿಬಿಎಂಪಿ ಇಂದು ರದ್ದು ಮಾಡಿದೆ.
Advertisement
ಕೊರೊನಾ ರೋಗಿಗಳಿಗೆ ಶೇ.50ರಷ್ಟು ಬೆಡ್ ಕಾಯ್ದಿರಿಸಲು ವಿಫಲವಾಗಿದ್ದಕ್ಕೆ ಬಿಬಿಎಂಪಿ ಈ ನಿರ್ಧಾರ ತೆಗೆದುಕೊಂಡಿದೆ. ಈ ಸಂಬಂಧ ದಕ್ಷಿಣ ವಲಯದ ಆರೋಗ್ಯಾಧಿಕಾರಿ ಡಾ. ಶಿವಕುಮಾರ್, 2005ರ ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ಆಸ್ಪತ್ರೆಗಳ ವಿರುದ್ಧ ದೂರುಗಳನ್ನು ಸಲ್ಲಿಸಿದ್ದಾರೆ. ಸದ್ಯ ಪರವಾನಗಿ ಅಮಾನತುಗೊಳಿಸುವ ಬಗ್ಗೆ ಆಸ್ಪತ್ರೆಗಳ ಮುಂದೆ ಬ್ಯಾನರ್ ಹಾಕಲಾಗಿದೆ ಎಂದು ಅವರು ತಿಳಿಸಿದರು.
Advertisement
Advertisement
ಈ ಸಂಬಂಧ ಬಿಬಿಎಂ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಮಾತನಾಡಿ, ಆಸ್ಪತ್ರೆಗಳ ಸಿಇಓ ಹಾಗೂ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ. ಆದರೆ ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದು, ರೋಗಿಗಳು ಚಿಕಿತ್ಸೆ ಪಡೆದುಕೊಳ್ಳಬಹುದು ಎಂದು ಹೇಳಿದ್ದಾರೆ.
Advertisement
ಪರವಾನಗಿ ರದ್ದಾದ ಆಸ್ಪತ್ರೆಗಳು ಯಾವುವು?
ಅನುಗ್ರಹ ವಿಠಲ ಆಸ್ಪತ್ರೆ, ವಿನಾಯಕ ಆಸ್ಪತ್ರೆ, ಪ್ರಶಾಂತ್ ಆಸ್ಪತ್ರೆ, ರಾಧಾಕೃಷ್ಣ ಆಸ್ಪತ್ರೆ(ಬಸವನಗುಡಿ), ಗುರುಶ್ರೀ ಆಸ್ಪತ್ರೆ, ಕಾಲಭೈರವೇಶ್ವರ ಆಸ್ಪತ್ರೆ, ಪದ್ಮಶ್ರೀ ಆಸ್ಪತ್ರೆ, ಮಾರುತಿ ಆಸ್ಪತ್ರೆ(ವಿಜಯನಗರ), ಪ್ರೋಮ್ಡ್ ಆಸ್ಪತ್ರೆ, ಎನ್ ಯು ಆಸ್ಪತ್ರೆ, ದೀಪಕ್ ಆಸ್ಪತ್ರೆ, ಸೇವಾಕ್ಷೇತ್ರ ಆಸ್ಪತ್ರೆ, ಉದ್ಭವ ಆಸ್ಪತ್ರೆ(ಪದ್ಮನಾಭ ನಗರ), ಗಂಗೋತ್ರಿ ಆಸ್ಪತ್ರೆ, ಅಕುರಾ ಆಸ್ಪತ್ರೆ ಹಾಗೂ ಕಾರಂತ್ ಆಸ್ಪತ್ರೆ(ಬಿಟಿಎಂ ಲೇ ಔಟ್), ಎಚ್‍ಸಿಗಿ ಕ್ಯಾನ್ಸರ್ ಆಸ್ಪತ್ರೆ, ಟ್ರಿನಿಟಿ ಆಸ್ಪತ್ರೆ ಹಾಗೂ ಮೈಯಾ ಆಸ್ಪತ್ರೆ(ಚಿಕ್ಕಪೆಟೆ).