ನವದೆಹಲಿ: ದೇಶದಲ್ಲಿ ಕಳೆದ 19 ದಿನಗಳಿಂದ ಪೆಟ್ರೋಲ್ ಹಾಗೂ ಡೀಸೆಲ್ ನಿರಂತರ ಏರಿಕೆ ಕಾಣುತ್ತಿದೆ. ಇಂದು ಕೂಡ ಇಂಧನ ಬೆಲೆ ಹೆಚ್ಚಳವಾಗಿದೆ.
ಇಂದು ಪ್ರತಿ ಲೀಟರ್ ಪೆಟ್ರೋಲ್‍ಗೆ 16 ಪೈಸೆ ಹಾಗೂ ಡೀಸೆಲ್‍ಗೆ 14 ಪೈಸೆ ಏರಿಕೆಯಾಗಿದೆ. ದೆಹಲಿಯಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್‍ಗೆ 79.92 ರೂ. ಇದ್ದರೆ, ಡೀಸೆಲ್ 80.02 ರೂ. ಇದೆ. ಹೀಗಾಗಿ ದೆಹಲಿಯಲ್ಲಿ ಎರಡನೇ ದಿನವೂ ಪೆಟ್ರೋಲ್‍ಗಿಂತ ಡೀಸೆಲ್ ದರವೇ ಹೆಚ್ಚಾಗಿದೆ. ಇದನ್ನೂ ಓದಿ: ದೇಶದಲ್ಲಿ ಇದೇ ಮೊದಲ ಬಾರಿಗೆ ಪೆಟ್ರೋಲ್‍ಗಿಂತ ದುಬಾರಿಯಾದ ಡೀಸೆಲ್
Advertisement
Diesel price crosses Rs 80 mark in Delhi, currently at Rs 80.02/litre (increase by Rs 0.14). Petrol price in the national capital at Rs 79.92/litre (increase by Rs 0.16). pic.twitter.com/rvFpSx0tti
— ANI (@ANI) June 25, 2020
Advertisement
ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ ದರ 82.35 ರೂ. ಹಾಗೂ ಡೀಸೆಲ್ ಬೆಲೆ 75.96 ರೂ. ಇದೆ. ಮುಂಬೈನಲ್ಲಿ ಪೆಟ್ರೋಲ್ 86.54 ರೂ. ಹಾಗೂ ಡೀಸೆಲ್ 77.76 ರೂ.ಗೆ ಮಾರಾಟವಾಗುತ್ತಿದೆ.