ಚೆನ್ನೈ: ಕರ್ನಾಟಕದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಕರ್ನಾಟಕ ಸರ್ಕಾರ ಕಸರತ್ತು ನಡೆಸುತ್ತಿದೆ. ಆದರೆ ಸ್ವಾತಂತ್ರ್ಯ ಪೂರ್ವದ ರಾಜರ ಆಳ್ವಿಕೆಯಲ್ಲಿ ಹೊರಗಿನವರ ದಾಳಿಗಳ ನಂತರ ಮತಾಂತರ ಪ್ರಕ್ರಿಯೆಗಳು ನಡೆದಿದ್ದವು. ಇದಕ್ಕೆ ನಿದರ್ಶನವೆಂಬಂತೆ ಅನೇಕ ಉದಾಹರಣೆಗಳಿವೆ.
18ನೇ ಶತಮಾನದಲ್ಲಿ ತಿರುವಾಂಕೂರು ಸಾಮ್ರಾಜ್ಯದಲ್ಲಿ ಕ್ರೈಸ್ತ ಧರ್ಮಕ್ಕೆ ದೇವಸಹಾಯಂ ಎಂಬವರು ಮತಾಂತರಗೊಂಡಿದ್ದರು. ಅವರನ್ನು ಸಂತ ಎಂದು ವ್ಯಾಟಿಕನ್‌ನಲ್ಲಿ ಪೋಪ್ ಫ್ರಾನ್ಸಿಸ್ ಈಚೆಗೆ ಘೋಷಿಸಿದ್ದಾರೆ. ಮತಾಂತರಗೊಂಡ ನಂತರ ಲಜಾರಸ್ ಆದ ದೇವಸಹಾಯಂ ಸಂತ ಎಂದು ಕರೆಯಲ್ಪಟ್ಟ ಮೊದಲ ಭಾರತೀಯ ವ್ಯಕ್ತಿಯಾಗಿದ್ದಾರೆ. ಇದನ್ನೂ ಓದಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ್ ಜೋಡೋ ಯಾತ್ರೆ: ಕಾಂಗ್ರೆಸ್ ಸಂಕಲ್ಪ
Advertisement
Advertisement
ಈಗಿನ ಕನ್ಯಕುಮಾರಿಯಲ್ಲಿ ಹಿಂದೂ ಮೇಲ್ಜಾತಿ ಕುಟುಂಬದಲ್ಲಿ ನೀಲಕಂದನ್ ಪಿಳ್ಳೈ (ದೇವಸಹಾಯಂ) ಜನಿಸಿದರು. ತಿರುವಾಂಕೂರ್ ಅರಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ನಂತರ 1745 ರಲ್ಲಿ ಅವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡರು. ದೇವಸಹಾಯಂ ಮತ್ತು ಲಜಾರಸ್ ಎಂದು ನಾಮಾಂಕಿತರಾದರು.
Advertisement
ದೇವಸಹಾಯಂ ಅವರು ತಮ್ಮ ಕ್ರಾಂತಿಕಾರಿ ನಿಲುವಿನ ಮೂಲಕ ಜಾತಿ ತಾರತಮ್ಯದ ವಿರುದ್ಧ ಹೋರಾಟಕ್ಕೆ ನಿಂತರು. ಮತಾಂತರಗೊಂಡ ನಂತರ ಸಮಾಜದಿಂದ ಕಿರುಕುಳ ಅನುಭವಿಸಿದರು. ಕೊನೆಗೆ ಅವರನ್ನು ಹತ್ಯೆ ಮಾಡಲಾಯಿತು. ಇದನ್ನೂ ಓದಿ: ತೆಂಗಿನಕಾಯಿ ಪ್ರಸಾದಕ್ಕಾಗಿ ನೂಕು ನುಗ್ಗಲು – 17 ಮಂದಿಗೆ ಗಾಯ
Advertisement
ಸಂತ ಎಂದು ಘೋಷಿಸಿದ್ದೇಕೆ?
ಮಹಿಳೆಯೊಬ್ಬರು ಗರ್ಭ ಧರಿಸಿದ್ದರು. ಆದರೆ ಆಕೆಯ ಗರ್ಭದಲ್ಲಿರುವ ಭ್ರೂಣ ಮೃತಪಟ್ಟಿದ್ದು, ಯಾವುದೇ ಚಲನೆ ಕಾಣುತ್ತಿಲ್ಲ ಎಂದು ಘೋಷಿಸಿದ್ದರು. ಈ ವೇಳೆ ಮಹಿಳೆ ದೇವಸಹಾಯಂ ಅವರನ್ನು ನೆನೆದಾಗ ಆಕೆಯ ಗರ್ಭದಲ್ಲಿದ್ದ ಭ್ರೂಣ ಚಲನೆ ಪಡೆಯಿತು ಎಂದು ನಂಬಲಾಗಿದೆ. ಈ ಹಿನ್ನೆಲೆಯಲ್ಲಿ ದೇವಸಹಾಯಂ ಅವರನ್ನು ಸಂತ ಎಂದು ಘೋಷಿಸಲಾಗಿದೆ.
ಹಿಂದೆ ಸಂತ ದೇವಸಹಾಯಂ ಸಮಾನತೆಗಾಗಿ ದನಿಯೆತ್ತಿದ್ದರು. ಜಾತಿವಾದ ಮತ್ತು ಕೋಮುವಾದದ ವಿರುದ್ಧ ಹೋರಾಡಿದ್ದರು. ಭಾರತದಲ್ಲಿ ಕೋಮುವಾದ ಹೆಚ್ಚುತ್ತಿರುವ ಈ ಹೊತ್ತಿನಲ್ಲಿ ದೇವಸಹಾಯಂ ಅವರ ಸಂತತ್ವವು ಪ್ರೇರಣೆಯಾಗಿದೆ ಎಂದು ನಿವೃತ್ತ ಐಎಎಸ್ ಅಧಿಕಾರಿಯೊಬ್ಬರು, ವ್ಯಾಟಿಕನ್‌ಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.