ಬೆಂಗಳೂರು: ರಾಜ್ಯದಲ್ಲಿ ಮೂರನೇ ಅಲೆಯ ನಿರ್ಗಮನದ ಕಾಲದ ಶುರುವಾಗಿದೆ. ಕೋವಿಡ್ ಕೇಸ್ ಗಳ ಸಂಖ್ಯೆಯಲ್ಲಿ ಏರಿಳಿಕೆಯಾಗ್ತಾ ಇದೆ. ಕಡಿಮೆ ಕೇಸ್ ದಾಖಲಾಗ್ತಾ ಇದ್ದು ಕಡಿಮೆ ಕೇಸ್ ಗಳಲ್ಲೂ ಕೂಡ ಏರಿಳಿಕೆ ಆಗ್ತಾ ಇದೆ. ಹೀಗಾಗಿ ರಾಜ್ಯದಲ್ಲಿ ಇಂದು 1,894 ಕೇಸ್ ದಾಖಲಾಗಿವೆ.
ನಿನ್ನೆ 1500ರ ಒಳಗಡೆ ಕೇಸ್ ದಾಖಲಾಗಿತ್ತು. ಆದರೆ ಇಂದು 1,800ರ ಸನಿಹಕ್ಕೆ ಕೇಸ್ ದಾಖಲಾಗಿದ್ದು, ಮೂರನೇ ಅಲೆ ಅಂತ್ಯದ ಮುನ್ಸೂಚನೆ ಸಿಗ್ತಾ ಇದೆ. ರಾಜ್ಯದಲ್ಲಿ ಇಂದು 99,516 ಕೊವಿಡ್ ಟೆಸ್ಟ್ ಮಾಡಿದ್ದು 1,894 ಕೇಸ್ ದಾಖಲಾಗಿ 24 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಪುನೀತ್ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅರ್ಜುನ್ ಸರ್ಜಾ
ರಾಜ್ಯದ ಪಾಸಿಟಿವಿಟಿ ರೇಟ್ 1.94% ಬಂದು ನಿಂತಿದೆ. ನೂರು ಜನರಿಗೆ ಟೆಸ್ಟ್ ಮಾಡುದ್ರೆ ಒಬ್ಬರು ಅಥವಾ ಇಬ್ಬರಿಗೆ ಪಾಸಿಟಿವ್ ಆಗ್ತಿದೆ. ಈಗಾಗಿ ರಾಜ್ಯದ ಜಿಲ್ಲೆಗಳಲ್ಲೂ ಕೇಸ್ ಕಂಟ್ರೋಲ್ ನಲ್ಲಿ ಇದೆ. ಬೆಂಗಳೂರಿನಲ್ಲಿ ಕೂಡ ಕೋವಿಡ್ ನಿಯಂತ್ರಣದಲ್ಲಿ ಇದ್ದು, 835 ಕೇಸ್ ದಾಖಲಾಗಿ 4 ಜನ ಕೊರೊನಾಗೆ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಕೇಸ್ ಇಳಿಕೆಯ ಗ್ರಾಫ್ ಮುಂದುವರಿದಿದ್ದು ರಾಜ್ಯದ ಒಟ್ಟು ಆ್ಯಕ್ಟೀವ್ ಕೇಸ್ ಗಳ ಸಂಖ್ಯೆ 23,284 ಕ್ಕೆ ಏರಿಕೆ ಆಗಿ 5,418 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದನ್ನೂ ಓದಿ: 13 ಅಪ್ರಾಪ್ತರ ಮೇಲೆ ಅತ್ಯಾಚಾರವೆಸಗಿ 8 ವಿದ್ಯಾರ್ಥಿನಿಯನ್ನು ಗರ್ಭಿಣಿ ಮಾಡಿದ್ದ ಶಿಕ್ಷಕನಿಗೆ ಜೀವಾವಧಿ ಶಿಕ್ಷೆ!
ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ, ಬಾಗಲಕೋಟೆ 32, ಬಳ್ಳಾರಿ 56, ಬೆಳಗಾವಿ 87, ಬೆಂಗಳೂರು ಗ್ರಾಮಾಂತರ 12, ಬೆಂಗಳೂರು ನಗರ 835, ಬೀದರ್ 4, ಚಾಮರಾಜನಗರ 16, ಚಿಕ್ಕಬಳ್ಳಾಪುರ 34, ಚಿಕ್ಕಮಗಳೂರು 39, ಚಿತ್ರದುರ್ಗ 35, ದಕ್ಷಿಣ ಕನ್ನಡ 61, ದಾವಣಗೆರೆ 7, ಧಾರವಾಡ 49, ಗದಗ 4, ಹಾಸನ 50, ಹಾವೇರಿ 47, ಕಲಬುರಗಿ 32, ಕೊಡಗು 48, ಕೋಲಾರ 14, ಕೊಪ್ಪಳ 9, ಮಂಡ್ಯ 30, ಮೈಸೂರು 125, ರಾಯಚೂರು 6, ರಾಮನಗರ 21, ಶಿವಮೊಗ್ಗ 50, ತುಮಕೂರು 61, ಉಡುಪಿ 69, ಉತ್ತರ ಕನ್ನಡ 38, ವಿಜಯಪುರ 10 ಹಾಗೂ ಯಾದಗಿರಿಯಲ್ಲಿ 13 ಹೊಸ ಪ್ರಕರಣಗಳು ಪತ್ತೆಯಾಗಿವೆ.