ನವದೆಹಲಿ: ಕಳೆದ 20 ವರ್ಷಗಳಲ್ಲಿ 1,888 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿರುವಗಾಲೇ ಸಾವನ್ನಪ್ಪಿದ್ದು, 2020ರಲ್ಲಿ ಅತಿ ಹೆಚ್ಚು ಆರೋಪಿಗಳು ಗುಜರಾತ್‍ನಲ್ಲಿ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ದಾಖಲೆಗಳನ್ನು ಬಿಡುಗಡೆ ಮಾಡಿದೆ.
Advertisement
ಉತ್ತರ ಪ್ರದೇಶದ ಕಾಸ್‍ಗಂಜ್‍ನಲ್ಲಿ ಹಿಂದೂ ಕುಟುಂಬವೊಂದರ ಅಪ್ರಾಪ್ತ ಬಾಲಕಿ ನಾಪತ್ತೆಯಾದ ಪ್ರಕರಣದಲ್ಲಿ ಬಂಧಿತನಾಗಿದ್ದ 22 ವರ್ಷದ ಅಲ್ತಾಫ್ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಬಳಿಕ ಬಿಡುಗಡೆಯಾಗಿರುವ ಈ ದಾಖಲೆ ಸಾಕಷ್ಟು ಮಹತ್ವ ಪಡೆದುಕೊಂಡಿದೆ.
Advertisement
Advertisement
ಕಸ್ಟಡಿಯಲ್ಲಿ ಆರೋಪಿಗಳ ಸಾವಿನ ಸಂಬಂಧ ಪೊಲೀಸ್ ಸಿಬ್ಬಂದಿ ವಿರುದ್ಧ ಈವರೆಗೂ 893 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 358 ಸಿಬ್ಬಂದಿ ವಿರುದ್ಧ ಚಾರ್ಜ್ ಶೀಟ್ ಸಿದ್ದಪಡಿಸಿದೆ. ಆದರೆ ಈ ಅವಧಿಯಲ್ಲಿ ಕೇವಲ 26 ಪೊಲೀಸರಿಗೆ ಶಿಕ್ಷೆಯಾಗಿದೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಹೇಳಿದೆ. 2020ರಲ್ಲಿ 76 ಕಸ್ಟಡಿಯಲ್ ಸಾವುಗಳು ವರದಿಯಾಗಿದ್ದು, ಗುಜರಾತ್ ಅತಿ ಹೆಚ್ಚು ಅಂದರೆ 15 ಸಾವುಗಳನ್ನು ವರದಿಯಾಗಿದೆ. ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಛತ್ತೀಸ್‍ಗಢ, ಹರಿಯಾಣ, ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ತೆಲಂಗಾಣ ಮತ್ತು ಪಶ್ಚಿಮ ಬಂಗಾಳ ಕಸ್ಟಡಿ ಡೆತ್ ಹೆಚ್ಚು ದಾಖಲಾಗಿವೆ. ಇದನ್ನೂ ಓದಿ: ಕೇರಳದಲ್ಲಿ ಭಾರೀ ಮಳೆ – 8 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್
Advertisement
ಕಳೆದ ನಾಲ್ಕು ವರ್ಷಗಳಲ್ಲಿ, ಕಸ್ಟಡಿ ಸಾವುಗಳಿಗೆ ಸಂಬಂಧಿಸಿದಂತೆ 96 ಪೊಲೀಸರನ್ನು ಬಂಧಿಸಲಾಗಿದೆ. ಆದಾಗ್ಯೂ, ಹಿಂದಿನ ವರ್ಷಗಳಲ್ಲಿ ಬಂಧಿತರಾದ ಪೊಲೀಸರ ಸಂಪೂರ್ಣ ಡೇಟಾ ಲಭ್ಯವಿಲ್ಲ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸಲ್ಲಿಸಿದ ದತ್ತಾಂಶವನ್ನು ಆಧರಿಸಿ ಎನ್‍ಸಿಆರ್‍ಬಿ ಈ ಮಾಹಿತಿ ನೀಡಿದೆ. ರಿಮಾಂಡ್‍ನಲ್ಲಿ ಇಲ್ಲದ ವ್ಯಕ್ತಿಗಳು ಮತ್ತು ರಿಮಾಂಡ್‍ನಲ್ಲಿರುವ ವ್ಯಕ್ತಿಗಳು ಎಂದು ಪೊಲೀಸ್ ಕಸ್ಟಡಿ/ಲಾಕಪ್‍ನಲ್ಲಿನ ಸಾವುಗಳನ್ನು ಎರಡು ವರ್ಗಗಳ ಅಡಿಯಲ್ಲಿ ವರ್ಗೀಕರಿಸಿದೆ. ಮೊದಲನೇಯ ವರ್ಗವು ಬಂಧಿಸಲ್ಪಟ್ಟವರನ್ನು ಇನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಾದವರನ್ನು ಒಳಗೊಂಡಿರುತ್ತದೆ ಮತ್ತು ಎರಡನೇಯದು ಪೊಲೀಸ್/ನ್ಯಾಯಾಂಗ ಬಂಧನದಲ್ಲಿರುವವರನ್ನು ಒಳಗೊಂಡಿದೆ.
2001 ರಿಂದ ಇಚೇಗೆ 1,185 ಕಸ್ಟಡಿ ಸಾವುಗಳು ರಿಮಾಂಡ್‍ನಲ್ಲಿಲ್ಲದ ವ್ಯಕ್ತಿಗಳು ವಿಭಾಗದಲ್ಲಿ ಮತ್ತು 703 ರಿಮಾಂಡ್‍ನಲ್ಲಿರುವ ವ್ಯಕ್ತಿಗಳು ವಿಭಾಗದಲ್ಲಿ ವರದಿಯಾಗಿದೆ ಎಂದು ಬ್ಯೂರೋದ ಡೇಟಾ ತೋರಿಸುತ್ತದೆ. ಕಳೆದ ಎರಡು ದಶಕಗಳಲ್ಲಿ ಕಸ್ಟಡಿ ಸಾವುಗಳಿಗೆ ಸಂಬಂಧಿಸಿದಂತೆ ಪೊಲೀಸ್ ಸಿಬ್ಬಂದಿ ವಿರುದ್ಧ ದಾಖಲಾಗಿರುವ 893 ಪ್ರಕರಣಗಳ ಪೈಕಿ 518 ಪ್ರಕರಣಗಳು ರಿಮಾಂಡ್‍ನಲ್ಲಿ ಇಲ್ಲದವರಿಗೆ ಸಂಬಂಧಿಸಿವೆ. ಇದನ್ನೂ ಓದಿ: ಆದಿವಾಸಿಗಳ ದುಸ್ಥಿತಿಗೆ ಕಾಂಗ್ರೆಸ್ ಕಾರಣ: ಮೋದಿ