ಬೆಂಗಳೂರು: ರಾಜ್ಯದಲ್ಲಿ ಕೊರೊನಾದೊಂದಿಗೆ ಓಮಿಕ್ರಾನ್ ಸೋಂಕು ಕೂಡ ತನ್ನ ಕದಂಬ ಬಾಹು ಚಾಚುತ್ತಿದೆ. ಇಂದು ರಾಜ್ಯದಲ್ಲಿ ಒಟ್ಟು 185 ಓಮಿಕ್ರಾನ್ ಕೇಸ್ ಪತ್ತೆಯಾಗಿದೆ.
Advertisement
ಬೆಂಗಳೂರಿನಲ್ಲಿ ಕೊರೊನಾ ಒಂದು ಕಡೆ ಕಾಟ ಕೊಡುತ್ತಿದ್ದರೆ, ಇನ್ನೊಂದೆಡೆ ಇದೀಗ ಓಮಿಕ್ರಾನ್ ಸ್ಫೋಟವಾಗಿದೆ. ಇಂದು ದಾಖಲಾದ 185 ಕೇಸ್‍ನಲ್ಲಿ 143 ಕೇಸ್ ಬೆಂಗಳೂರಿನಲ್ಲಿ ದಾಖಲಾಗಿದೆ. ಉಳಿದ 42 ಕೇಸ್ ರಾಜ್ಯದ ಬೇರೆ ಜಿಲ್ಲೆಗಳಲ್ಲಿ ವರದಿಯಾಗಿದೆ. ಇದೀಗ ರಾಜ್ಯದಲ್ಲಿ ಒಟ್ಟು ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 1,115ಕ್ಕೆ ಏರಿಕೆ ಕಂಡಿದೆ. ಬೆಂಗಳೂರಿನಲ್ಲೇ ಓಮಿಕ್ರಾನ್ ಮಹಾಸ್ಫೋಟ ಆಗ್ತಾ ಇದ್ದು, ನಗರದಲ್ಲಿ ಈವರೆಗೆ ಒಟ್ಟು 1,023 ಓಮಿಕ್ರಾನ್ ಕೇಸ್ ದಾಖಲಾಗಿ ಆತಂಕ ಮೂಡಿಸಿದೆ. ಇದನ್ನೂ ಓದಿ: ಟಾಟಾ ಸಂಸ್ಥೆಗೆ ಏರ್ ಇಂಡಿಯಾ ಅಧಿಕೃತ ಹಸ್ತಾಂತರ
Advertisement
185 new Omicron cases are confirmed in Bengaluru today taking the overall tally in the State to 1,115.#Omicron #COVID19
— Dr Sudhakar K (@mla_sudhakar) January 27, 2022
Advertisement
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಕೂಡ ದಿನೇ ದಿನೇ ಹೆಚ್ಚಳ ಕಾಣುತ್ತಿದೆ. ನಿನ್ನೆ ರಾಜ್ಯದಲ್ಲಿ 48,905 ಕೇಸ್ ದಾಖಲಾಗಿತ್ತು. 39 ಮಂದಿ ಬಲಿ ಆಗಿದ್ದರು, ಬೆಂಗಳೂರಿನಲ್ಲಿ 22,427 ಮಂದಿಗೆ ಸೋಂಕು ತಗುಲಿ 8 ಮಂದಿ ಬಲಿ ಆಗಿದ್ದರು. ರಾಜ್ಯದಲ್ಲಿ ಒಂದು ವಾರದಲ್ಲಿ 201 ಜನ ಕೊರೊನಾಗೆ ಬಲಿಯಾಗಿದ್ದಾರೆ. ಇವರಲ್ಲಿ ಬಹುತೇಕರು ವಯೋವೃದ್ಧರೇ ಆಗಿದ್ದಾರೆ. ಇದನ್ನೂ ಓದಿ: ದೇವರು ನನ್ನ ಬ್ರಾ ಸೈಜ್ ತೆಗೆದುಕೊಳ್ತಿದ್ದಾರೆ- ಶ್ವೇತಾ ತಿವಾರಿ ವಿವಾದಾತ್ಮಕ ಹೇಳಿಕೆ
Advertisement