ಬೆಂಗಳೂರು: ಇಂದು ರಾಜ್ಯದಲ್ಲಿ 1,849 ಮಂದಿಗೆ ಸೋಂಕು ಬಂದಿದ್ದು ಆಸ್ಪ್ರತ್ರೆಯಿಂದ 1,800 ಮಂದಿ ಬಿಡುಗಡೆಯಾಗಿದ್ದಾರೆ. ಇಂದು ಒಟ್ಟು 26 ಮಂದಿ ಮೃತಪಟ್ಟಿದ್ದಾರೆ.
ಒಟ್ಟು ಸೋಂಕಿತರ ಸಂಖ್ಯೆ 8,67,780ಕ್ಕೆ ಏರಿಕೆಯಾಗಿದೆ. ಈ ಪೈಕಿ 8,30,988 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ 25,169 ಸಕ್ರಿಯ ಪ್ರಕರಣಗಳಿವೆ.
ಇಲ್ಲಿಯವರೆಗೆ ಒಟ್ಟು 11,604 ಮಂದಿ ಸೋಂಕಿಗೆ ಮೃತಪಟ್ಟಿದ್ದು, 598 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಒಟ್ಟು 25,101 ಆಂಟಿಜನ್ ಟೆಸ್ಟ್, 93,373 ಆರ್‌ಟಿ ಪಿಸಿಆರ್ ಇತ್ಯಾದಿ ಪರೀಕ್ಷೆ ಮಾಡಿದ್ದು ಒಟ್ಟು 1,18,474 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 98,59,525 ಕೊರೊನಾ ಪರೀಕ್ಷೆಗಳನ್ನು ಮಾಡಲಾಗಿದೆ.
ಬೆಂಗಳೂರು ನಗರದಲ್ಲಿ 1,048 ಮಂದಿಗೆ ಸೋಂಕು ಬಂದಿದ್ದು ಇಂದು 14 ಮಂದಿ ಮೃತಪಟ್ಟಿದ್ದಾರೆ. ತುಮಕೂರು 103, ವಿಜಯಪುರದಲ್ಲಿ 78 ಮಂದಿಗೆ ಬಂದರೆ ದಕ್ಷಿಣ ಕನ್ನಡ, ಹಾಸನ, ಮೈಸೂರಿನಲ್ಲಿ 54 ಮಂದಿಗೆ ಸೋಂಕು ಬಂದಿದೆ.
ಒಟ್ಟು 598 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ ಬೆಂಗಳೂರು ನಗರ 297, ಮೈಸೂರು 31, ದಕ್ಷಿಣ ಕನ್ನಡ 20 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.