Bengaluru CityCoronaDistrictsKarnatakaLatestLeading NewsMain Post

ರಾಜ್ಯದಲ್ಲಿಂದು 181 ಕೇಸ್, ಓರ್ವ ಕೊರೊನಾದಿಂದ ಸಾವು

ಬೆಂಗಳೂರು: ರಾಜ್ಯದಲ್ಲಿ ನಿನ್ನೆಗಿಂತ ಇಂದು ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 181 ಮಂದಿಯಲ್ಲಿ ಪಾಸಿಟಿವ್ ಇರುವುದು ದೃಢವಾಗಿದೆ.

ರಾಜ್ಯದಲ್ಲಿ ಇಂದು ಓರ್ವ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಇದುವರೆಗೆ 40061 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. 139 ಮಂದಿ ಇಂದು ಕೋವಿಡ್ 19 ನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಕಳೆದ 24 ಗಂಟೆಯಲ್ಲಿ 15,759 ಮಂದಿಯಲ್ಲಿ ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿದೆ. ಈ ಮೂಲಕ ಇಲ್ಲಿಯವರೆಗೆ 65,931,289 ಮಂದಿಯನ್ನು ಕೋವಿಡ್ 19 ಪರೀಕ್ಷೆ ಮಾಡಲಾಗಿದೆ. ಇಂದು ಪಾಸಿಟಿವಿ ರೇಟ್ ಶೇ.1.14 ಇದೆ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೋವಿಡ್ ಕೇಸ್ ಏರಿಕೆಯಾಗುತ್ತಿದ್ದು, ಮತ್ತೆ 150ರ ಗಡಿ ದಾಟಿದೆ. ಬೆಂಗಳೂರು ನಗರ ಮತ್ತು ಬಿಬಿಎಂಪಿ ವ್ಯಾಪ್ತಿ ಸೇರಿ ಇಂದು 162 ಕೊವಿಡ್ ಕೇಸ್ ದಾಖಲಾಗಿದೆ. ಮಹಾದೇವಪುರದಲ್ಲಿ 50 ಮಂದಿಯಲ್ಲಿ ಕೊರೊನಾ ಪಾಸಿಟಿವ್ ದೃಢವಾಗಿದೆ. ಈ ಮೂಲಕ ಮಹಾದೇವಪುರ ಏರಿಯಾ ಬೆಂಗಳೂರಿನಲ್ಲಿ ಕೊರೋನಾ ಹಾಟ್ ಸ್ಪಾಟ್ ಆಗ್ತಾ ಇದೆ. ಮಹಾದೇವಪುರ – 50, ಬೆಂಗಳೂರು ಪೂರ್ವ – 34, ಬೊಮ್ಮನಹಳ್ಳಿ – 15, ಬೆಂಗಳೂರು ದಕ್ಷಿಣ – 14, ಬೆಂಗಳೂರು ಪಶ್ಚಿಮ – 10, ಯಲಹಂಕ – 05, ಆರ್ ಆರ್ ನಗರ – 06 ಹಾಗೂ ದಾಸರಹಳ್ಳಿ – 03 ಪ್ರಕರಣ ಪತ್ತೆಯಾಗಿದೆ.

ಇಂದಿನ ಹೆಲ್ತ್ ಬುಲೆಟಿನ್ ಪ್ರಕಾರ, ಬೆಂಗಳೂರು ನಗರ 149, ದಕ್ಷಿಣ ಕನ್ನಡ 3, ಹಾಸನ 1, ಕಲಬುರಗಿ 1, ಮೈಸೂರು 27 ಉಳಿದ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ಇದೆ.

Leave a Reply

Your email address will not be published.

Back to top button