ವಿಜಯಪುರ: ಕೇವಲ 18 ಗಂಟೆಯಲ್ಲಿ ವಿಜಾಪುರ ಮತ್ತು ಸೋಲಾಪುರ ನಡುವೆ ಬರೋಬ್ಬರಿ 25.54 ಕಿಲೋಮೀಟರ್ ಸಿಂಗಲ್ ರಸ್ತೆ ನಿರ್ಮಿಸಿ ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಲಿರುವುದನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿನಂದಿಸಿ ಟ್ವೀಟ್ ಮಾಡಿದ್ದಾರೆ.
वर्तमान में सोलापुर-विजापुर राजमार्ग के 110 किमी का कार्य प्रगति पर है जो अक्टूबर 2021 तक पूरा हो जाएगा। pic.twitter.com/VrI5J6ZkOS
— Nitin Gadkari (@nitin_gadkari) February 26, 2021
Advertisement
ವಿಜಯಪುರ ಮತ್ತು ಸೋಲಾಪುರ ನಡುವೆ ಬರೋಬ್ಬರಿ 25.54 ಕಿಲೋಮೀಟರ್ ಸಿಂಗಲ್ ರಸ್ತೆಯನ್ನು 18 ಗಂಟೆಗಳಲ್ಲಿ ನಿರ್ಮಿಸಲಾಗಿದೆ. ವಿಜಯಪುರ ಹಾಗೂ ಸೋಲಾಪುರ ನಡುವೆ 110 ಕಿಮೀ ಉದ್ದದ 4 ಪಥಗಳ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಅತ್ಯಾಧುನಿಕ ಉಪಕರಣಗಳ ಮೂಲಕ ಕೇವಲ 18 ಗಂಟೆಯಲ್ಲೇ 25.54 ಕಿಲೋಮೀಟರ್ ಉದ್ದದ ಒಂದು ಪಥದ ರಸ್ತೆಯನ್ನು ನಿರ್ಮಾಣ ಮಾಡಲಾಗಿದೆ ಎಂದಿದ್ದಾರೆ.
Advertisement
राष्ट्रीय राजमार्ग प्राधिकरण (@NHAI_Official) ने हाल ही में सोलापुर-विजापुर राजमार्ग पर 4-लेनिंग कार्य के अंतर्गत 25.54 किलोमीटर के सिंगल लेन डांबरीकरण कार्य को 18 घंटे में पूरा किया है, जिसे ‘लिम्का बुक ऑफ रेकॉर्ड्स’ में दर्ज किया जाएगा। pic.twitter.com/tP6ACFGblP
— Nitin Gadkari (@nitin_gadkari) February 26, 2021
Advertisement
ಇದಕ್ಕಾಗಿ ಗುತ್ತಿಗೆದಾರ ಕಂಪನಿಯ 500 ಉದ್ಯೋಗಿಗಳು ಶ್ರಮಿಸಿದ್ದಾರೆ. ಆ ನೌಕರರು ಸೇರಿದಂತೆ ಯೋಜನಾ ನಿರ್ದೇಶಕರು, ಅಧಿಕಾರಿಗಳು, ಗುತ್ತಿಗೆದಾರ ಕಂಪನಿ ಪ್ರತಿನಿಧಿಗಳು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ಅಧಿಕಾರಿಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಟ್ವೀಟ್ ಮಾಡಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Advertisement
ठेकेदार कंपनी के 500 कर्मचारियों ने इसके लिए मेहनत की है। मैं उन कर्मचारियों सहित राष्ट्रीय राजमार्ग प्राधिकरण के परियोजना निदेशक, अधिकारी, ठेकेदार कंपनी के प्रतिनिधि और परियोजना अधिकारियों का अभिनंदन करता हूं। pic.twitter.com/KNbDWsoCnq
— Nitin Gadkari (@nitin_gadkari) February 26, 2021
ಪ್ರಸ್ತುತ ಸೋಲಾಪುರ-ವಿಜಯಪುರ ಹೆದ್ದಾರಿಯ 110 ಕಿ.ಮೀ ಪ್ರಗತಿಯಲ್ಲಿದೆ. ಇದು ಅಕ್ಟೋಬರ್ 2021ರೊಳಗೆ ಪೂರ್ಣಗೊಳ್ಳಲಿದೆ. 18 ಗಂಟೆಗಳಲ್ಲಿ ಬರೋಬ್ಬರಿ 25.54 ಕಿಲೋಮೀಟರ್ ಸಿಂಗಲ್ ರಸ್ತೆ ನಿರ್ಮಾಣ ಮಾಡಿರುವುದು ಇದು ಲಿಮ್ಕಾ ದಾಖಲೆಗೆ ಸೇರ್ಪಡೆಯಾಗಲಿದೆ. ಇನ್ನು ಕಾರ್ಮಿಕರ ಈ ಸಾಧನೆಯನ್ನ ಕೇಂದ್ರ ಸಚಿವ ನಿತಿನ್ ಗಡ್ಕರಿ ಅಭಿನಂದಿಸಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.