-ನೆಟ್ಟಿಗರಿಂದ ಮೆಚ್ಚುಗೆ
ಚೆನ್ನೈ: ತಮಿಳುನಾಡಿನ ಕೊಯಮತ್ತೂರಿನ ಯುವತಿಯೊಬ್ಬರು ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ತಯಾರಿಸುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇಶಾನಾ ಮಾರ್ಕೆಟ್ ನಲ್ಲಿ ದೊರೆಯುವ ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದರು. ಇದರಿಂದ ಅವರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು. ಹಾಗಾಗಿ ಸ್ವತಃ ಅವರೇ ಪರಿಸರ ಸ್ನೇಹಿ ಸ್ಯಾನಿಟರಿ ಪ್ಯಾಡ್ ತಯಾರಿಸಲು ನಿರ್ಧರಿಸಿದ್ದರು. ಇಶಾನಾ ತಮಗೆ ಬೇಕಾಗಿರುವ ಸಾಮಾಗ್ರಿಗಳ ಜೊತೆಗೆ ಹೊಲಿಗೆ ಯಂತ್ರ ಹಾಗೂ ಇತರ ಅಗತ್ಯ ಉಪಕರಣಗಳೊಂದಿಗೆ ಕಾಟನ್ ಸ್ಯಾನಿಟರಿ ಪ್ಯಾಡ್ ತಯಾರಿಸುತ್ತಾರೆ ಎಂದು ವೆಬ್‍ಸೈಟ್ ಒಂದರಲ್ಲಿ ಪ್ರಕಟವಾಗಿದೆ. ಇದನ್ನೂ ಓದಿ: ಋತುಚಕ್ರದ ಬಗ್ಗೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸ್ತಿರೋ ಕೊಪ್ಪಳದ ಭಾರತಿ
Advertisement
Advertisement
ಈ ಬಗ್ಗೆ ಮಾತನಾಡಿದ ಇಶಾನಾ, ಸಾಧಾರಣ ಸ್ಯಾನಿಟರಿ ಪ್ಯಾಡ್ ಬಳಸುತ್ತಿದ್ದಾಗ ನನ್ನ ಆರೋಗ್ಯದಲ್ಲಿ ಸಮಸ್ಯೆ ಆಯಿತು. ಈ ರೀತಿ ಬೇರೆಯವರಿಗೆ ಆಗಬಾರದು ಎಂದು ನಾನು ಕಾಟನ್ ಸ್ಯಾನಿಟರಿ ಪ್ಯಾಡ್ ತಯಾರಿಸಲು ನಿರ್ಧರಿಸಿದೆ. ಕಾಟನ್ ಬಟ್ಟೆಯಿಂದ ಸ್ಯಾನಿಟರಿ ಪ್ಯಾಡ್ ಹೇಗೆ ತಯಾರಿಸುತ್ತಾರೆ ಎಂಬುದನ್ನು ಜನರಿಗೆ ತಿಳಿಸಬೇಕು. ಮಾರ್ಕೆಟ್ ನಲ್ಲಿ ಸಿಗುವ ಸ್ಯಾನಿಟರಿ ಪ್ಯಾಡ್‍ನಲ್ಲಿ ಕೆಮಿಕಲ್ ಜೆಲ್ ಉಪಯೋಗಿಸುತ್ತಾರೆ. ಇದು ಮಹಿಳೆಯರಿಗೆ ಅಪಾಯಕಾರಿ ಆಗಬಹುದು ಎಂದು ಪ್ರತಿಕ್ರಿಯಿಸಿದ್ದರು.
Advertisement
Tamil Nadu: Ishana, an 18-yr-old from Coimbatore is producing reusable cotton sanitary napkins. She says, "Chemical gel in ordinary sanitary napkins poses health hazards to women. The sanitary napkin I've developed is made of layers of cotton cloth. It's reusable & eco-friendly". pic.twitter.com/uSY2U7Lqd2
— ANI (@ANI) November 12, 2019
Advertisement
ನಾನು ತಯಾರಿಸಿದ ಸ್ಯಾನಿಟರಿ ಪ್ಯಾಡ್‍ನಲ್ಲಿ ಕಾಟನ್ ಬಟ್ಟೆಯಿಂದ ಪದರಗಳಿವೆ. ಇದು ಮರುಬಳಕೆ ಮಾಡಬಹುದು. ಅಲ್ಲದೆ ಇದು ಪರಿಸರ ಸ್ನೇಹಿ ಕೂಡ ಎಂದು ಇಶಾನಾ ತಿಳಿಸಿದ್ದಾರೆ. ಇಶಾನಾ ಅವರ ಈ ಕೆಲಸಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಲವರು, ‘ವಾವ್’, ‘ಸೂಪರ್’, ‘ಟ್ಯಾಲೆಂಟೆಡ್ ಗರ್ಲ್’, ‘ಒಳ್ಳೆಯ ಕೆಲಸ ಮಾಡಿದ್ದೀರಿ’, ‘ಈ ಯುವತಿಗೆ ನಮ್ಮ ಸಲಾಂ’ ಎಂದು ಕಮೆಂಟ್ ಮಾಡಿ ಶಹಬ್ಬಾಸ್ ಗಿರಿ ನೀಡುತ್ತಿದ್ದಾರೆ.