InternationalLatestMain Post

55 ವರ್ಷದ ವ್ಯಕ್ತಿಯನ್ನು ವರಿಸಿದ 18ರ ಯುವತಿ- ಅಚ್ಚರಿ ಹುಟ್ಟಿಸುತ್ತೆ ಕಾರಣ

ಇಸ್ಲಾಮಾಬಾದ್: ಬಾಲಿವುಡ್ ನಟನ ಹಾಡಿನಿಂದ ಪ್ರೇರೇಪಣೆಗೊಂಡು 18 ವರ್ಷದ ಯುವತಿಯೊಬ್ಬಳು 55 ವರ್ಷದ ವ್ಯಕ್ತಿಯ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ.

ಈ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಬಾಲಿವುಡ್ ನಟ ಬಾಬಿ ಡಿಯೋಲ್ ನಟನೆಯ ಸಿನಿಮಾವೊಂದರ ಹಾಡಿನಿಂದ ಪ್ರೇರಿತರಾಗಿ ಈ ಮದುವೆ ನಡೆದಿದೆ ಎನ್ನಲಾಗಿದೆ.

ಯುವತಿ ಮುಸ್ಕಾನ್‍ಗೆ ಸಂಗೀತ ಅಂದರೆ ಪಂಚಪ್ರಾಣ, ಅಲ್ಲದೆ ಈಕೆ ಹಾಡುಗಾರ್ತಿಯೂ ಆಗಿದ್ದಾಳೆ. ಇತ್ತ ನೆರೆಮನೆಯ ಫಾರೂಕ್‍ಗೆ ಸಂಗೀತ ಕೇಳುವುದೆಂದರೆ ಇಷ್ಟ. ಹೀಗಾಗಿ ಫಾರೂಕ್ ಆಗಾಗ ಮುಸ್ಕಾನ್ ಮನೆಗೆ ಬರುತ್ತಿದ್ದನು. ಹೀಗೆ ಮನೆಗೆ ಬರುತ್ತಿದ್ದ ಫಾರೂಕ್‍ಗೆ ಮುಸ್ಕಾನ್ ಮೇಲೆ ಲವ್ ಆಗುತ್ತೆ. ಈ ವಿಚಾರ ಮುಸ್ಕಾನ್ ಗಮನಕ್ಕೂ ಬರುತ್ತಿದೆ. ಇದನ್ನೂ ಓದಿ: ಕನ್ನಡದ ‘ಹೆಬ್ಬುಲಿ’ ಸಿನಿಮಾದ ನಟಿಯ ಖಾಸಗಿ ವಿಡಿಯೋ ಲೀಕ್ ಬೆದರಿಕೆ, ಬಾಯ್ ಫ್ರೆಂಡ್ ವಿರುದ್ಧವೇ ದೂರು

ತನ್ನ ಮೇಲೆ ಫಾರೂಕ್‍ಗೆ ಪ್ರೀತಿ ಹುಟ್ಟಿದೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಮುಸ್ಕಾನ್ ಕೂಡ ಆತನನ್ನು ಇಷ್ಟಪಡಲು ಆರಂಭಿಸುತ್ತಾಳೆ. ಫಾರೂಕ್‍ಗಾಗಿ ಮುಸ್ಕಾನ್ ಬಾಬಿ ಡಿಯೋಲ್ ನಟನೆಯ ‘ಬಾದಲ್ ನಾ ಮಿಲೋ ಹಮ್ಸೆ ಜ್ಯಾದಾ’ ಹಾಡನ್ನು ಹಾಡುತ್ತಾಳೆ. ಹೀಗೆ ಇಬ್ಬರೂ ಪ್ರೀತಿಯಲ್ಲಿ ಮುಳುಗುತ್ತಾರೆ. ಇಂತಹ ಸಮಯದಲ್ಲಿಯೇ ಮುಸ್ಕಾನ್, ಫಾರೂಕ್‍ಗೆ ಪ್ರಪೋಸ್ ಮಾಡುತ್ತಾಳೆ. ಬಳಿಕ ಇಬ್ಬರ ನಡುವೆ ಲವ್ ಪ್ರಾರಂಭವಾಗುತ್ತಿದೆ.

ಕ್ರಮೇಣ ಆಕೆಯ ಧ್ವನಿ ಮತ್ತು ಹಾಡಿಗೆ ಮನಸೋತಿದ್ದ ಫಾರೂಕ್, ಆಕೆಯ ಮೇಲೆ ಪ್ರೀತಿ ಹುಟ್ಟಲು ಕಾರಣವಾಯಿತು ಎಂದು ಹೇಳಿದ್ದಾನೆ. ಮುಸ್ಕಾನ್ ಕೂಡ ಫಾರೂಕ್ ಮಾತಿನ ಶೈಲಿಯನ್ನು ಇಷ್ಟಪಟ್ಟಿದ್ದಾಳೆ. ಇದರಿಂದ ಪ್ರಭಾವಿತನಾಗಿದ್ದೇನೆ ಎಂದು ಹೇಳಿದ್ದಾಳೆ. ಆದರೆ ಇಬ್ಬರ ಮನೆಯವರು ಫಾರೂಕ್ ಮತ್ತು ಮುಸ್ಕಾನ್ ನಡುವಿನ ಪ್ರೀತಿಯನ್ನು ತಿರಸ್ಕರಿಸ್ರಂತೆ. ಆದರೆ ಈ ಜೋಡಿ ಯಾರಿಗೂ ಭಯ ಬೀಳದೆ ತಮ್ಮ ಸ್ವಂತ ಇಷ್ಟದಂತೆಯೇ ವಿವಾಹವಾಗಿದ್ದಾರೆ. ಇನ್ನೊಂದು ವಿಶೇಷವೆಂದರೆ, ಫಾರೂಕ್ ವಯಸ್ಸು 55 ವರ್ಷವಾಗಿದ್ದರೂ ಅವರಿಗೂ ಇದು ಮೊದಲ ಮದುವೆಯಾಗಿದೆ ಎಂಬುದಾಗಿ ವರದಿಯಾಗಿದೆ.

Live Tv

Leave a Reply

Your email address will not be published.

Back to top button