ಜೆರುಸಲೆಂ: ಇಸ್ರೇಲ್‍ನಲ್ಲಿ (Isreal) ಹಮಾಸ್ ಉಗ್ರರು (HamasTerrorist) ನಡೆಸುತ್ತಿರುವ ರಕ್ತಪಾತ ಮುಂದುವರಿದಿದೆ. ಅನೇಕ ಮಂದಿಯನ್ನು ಒತ್ತೆಯಾಳಾಗಿರಿಸಿಕೊಂಡು ಹಮಾಸ್ ಉಗ್ರರು ಬೆದರಿಕೆ ಹಾಕುತ್ತಿದ್ದಾರೆ. ಹೀಗೆ ಉಗ್ರರ ಕೈಗೆ ಸಿಲುಕಿರುವವರಲ್ಲಿ ಅಮೆರಿಕ (America) ಮೂಲದ ಯುವತಿ ಹಾಗೂ ಆಕೆಯ ತಾಯಿ ಕೂಡ ಇದ್ದಾರೆ.
ಚಿಕಾಗೋದ 18 ವರ್ಷದ ನಟಾಲಿ ರಾನನ್ ಗಾಜಾಕ್ಕೆ ಕರೆದೊಯ್ಯಲ್ಪಟ್ಟಿದ್ದಾರೆ. ಈಕೆ ಹಮಾಸ್‍ನಿಂದ ಒತ್ತೆಯಾಳಾಗಿಸಿಕೊಂಡಿರುವ ಯುಸ್ ನಾಗರಿಕರಲ್ಲಿ ಒಬ್ಬರಾಗಿದ್ದಾರೆ. ನಟಾಲಿ ತನ್ನ ತಾಯಿ ಜುಡಿತ್ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಸಂದರ್ಭದಲ್ಲಿ ಇಬ್ಬರನ್ನೂ ಉಗ್ರರು ಅಪಹರಿಸಿದ್ದಾರೆ.
Advertisement
Advertisement
ಇಸ್ರೇಲ್-ಪ್ಯಾಲೆಸ್ತೀನ್ ನಡುವಿನ ಯುದ್ಧದಲ್ಲಿ 60 ಕ್ಕೂ ಹೆಚ್ಚು ಪ್ರಜೆಗಳು ಸಾವನ್ನಪ್ಪಿದ್ದಾರೆ. ಯುದ್ಧದಲ್ಲಿ ಈವರೆಗೆ ಅಮೆರಿಕಾದ 9 ಮಂದಿ ಸಾವಿಗೀಡಾಗಿದ್ದಾರೆ. ಕೆನಡಾ – 1 (ಇಬ್ಬರು ಕಾಣೆ), ಗ್ರೇಟ್ ಬ್ರಿಟನ್ – 10 ಕ್ಕೂ ಹೆಚ್ಚು ಮಂದಿ ಸಾವು ಅಥವಾ ಕಾಣೆಯಾಗಿದ್ದಾರೆ. ಫ್ರಾನ್ಸ್ – 1 ಸಾವು (ಹಲವಾರು ಕಾಣೆ), ಥೈಲ್ಯಾಂಡ್ – 12 ಸಾವು (11 ಕಾಣೆ), ನೇಪಾಳ – 10 ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಯುದ್ಧ ನಾವು ಆರಂಭಿಸಿಲ್ಲ ಆದ್ರೆ ಮುಗಿಸುತ್ತೇವೆ – ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಗುಡುಗು
Advertisement
Advertisement
ಜರ್ಮನಿ – ದೃಢೀಕರಿಸದ/ಕಾಣೆಯಾದ ಸಾವಿನ ಸಂಖ್ಯೆ, ರಷ್ಯಾ – 1, ಕಾಂಬೋಡಿಯಾ – 1, ಚೀನಾ – ಸಾವು/ಹಾನಿಗಳ ಸಂಖ್ಯೆಯನ್ನು ದೃಢೀಕರಿಸಲಾಗಿಲ್ಲ. ಬ್ರೆಜಿಲ್ – 3 ಮಂದಿ ಗಾಯಗೊಂಡಿದ್ದಾರೆ. ಪರಾಗ್ವೆ – 2 ಸಾವು ಅಥವಾ ಕಾಣೆ, ಉಕ್ರೇನ್ – ಇಬ್ಬರು ಮೃತಪಟ್ಟಿದ್ದಾರೆ. ಮೆಕ್ಸಿಕೋದ ಇಬ್ಬರು ಕೈದಿಗಳು, ಐಲೆರ್ಂಡ್‍ನ ಒಬ್ಬರು ಗಾಯಗೊಂಡಿದ್ದಾರೆ. ತಾಂಜಾನಿಯಾದ ಇಬ್ಬರು ಗಾಯಗೊಂಡಿದ್ದಾರೆ.
Web Stories