ಮಂಗಳೂರು: ಆಸ್ತಿ ವಿಚಾರಕ್ಕೆ ನಡೆಯುತ್ತಿದ್ದ ಗಲಾಟೆಯಲ್ಲಿ ಅಡ್ಡ ಬಂದು ತಂದೆಯಿಂದಲೇ ಮಗಳು ಹತ್ಯೆಯಾಗಿರುವ ದಾರುಣ ಘಟನೆ ಮಂಗಳೂರಿನ (Mangaluru) ಗಡಿಭಾಗ ಕೇರಳದ ಮಂಜೇಶ್ವರದಲ್ಲಿ ನಡೆದಿದೆ.
ಕುಂಜತ್ತೂರು ತೂಮಿನಾಡು ನಿವಾಸಿ ಜುಮೈಲಾ (18) ಕೊಲೆಯಾದ ಹುಡುಗಿ. ತಂದೆ ಉಮ್ಮಾರ್ ಫಾರೂಕ್ ಹಾಗೂ ಚಿಕ್ಕಪ್ಪನ ಗಲಾಟೆ ಬಿಡಿಸಲು ಹೋದ ಮಗಳು ಕತ್ತಿಯೇಟಿಗೆ ಬಲಿಯಾಗಿದ್ದಾಳೆ. ಇದನ್ನೂ ಓದಿ: ಉದ್ಯಮಿಯನ್ನು ಹೆಲ್ಮೆಟ್‌ನಿಂದಲೇ ಹೊಡೆದು ಕೊಂದ ಮೂವರು ಡೆಲಿವರಿ ಬಾಯ್ಸ್
ಉಮ್ಮಾರ್ ಫಾರೂಕ್ ಪತ್ನಿಯ ಸಹೋದರಿ ಜೊತೆ ಆಸ್ತಿಗೆ ಸಂಬಂಧಿಸಿದ ವಿವಾದ ಇತ್ತು. ವಿವಾದ ಬಗೆಹರಿಸಲು ಬಂದ ಪತ್ನಿ ಸಹೋದರಿ ಪತಿ ಶೇಕುಂಞ ಜೊತೆಗೆ ಉಮ್ಮಾರ್ ಫಾರೂಕ್ ಗಲಾಟೆ ಮಾಡಿಕೊಂಡಿದ್ದಾರೆ. ಉಮ್ಮರ್ ಫಾರೂಕ್, ಶೇಕುಂಞಗೆ ಕತ್ತಿಯಿಂದ ಹಲ್ಲೆಗೆ ಮುಂದಾದಾಗ ತಡೆಯಲು ಬಂದ ಮಗಳು ಜುಮೈಲಾಗೆ ಏಟು ಬಿದ್ದಿದೆ.
ಕತ್ತಿಯೇಟಿಗೆ ಒಳಗಾದ ಜುಮೈಲಾ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾಳೆ. ಆರೋಪಿ ಉಮ್ಮಾರ್ ಫಾರೂಕ್‌ನನ್ನು ಮಂಜೇಶ್ವರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಉ.ಕನ್ನಡ ಸಿದ್ದಾಪುರದಲ್ಲಿ ಕೊಲೆ ಕೇಸ್ – ಜ್ಯೋತಿಷಿ ಕಮಲಾಕರ್ ಭಟ್ ಸೇರಿ 7 ಮಂದಿ ಪೊಲೀಸರ ವಶಕ್ಕೆ

