ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ತುಂಬಾ ಓಪನ್ ಅಪ್ ಆಗಿ ಮಾತನಾಡುತ್ತಾರೆ ಎನ್ನುವುದು ಗೊತ್ತಿರುವ ವಿಚಾರವಾಗಿದೆ. ಈಗ ಅವರು ತಮ್ಮ ದೇಹ ಸೌಂದರ್ಯದ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ನನಗೊಮ್ಮೆ ಬಾಡಿ ಶೇಮಿಂಗ್ ಆಗಿತ್ತು. ಆಗ ನನಗೆ ಇನ್ನೂ 18 ವರ್ಷವಾಗಿತ್ತು. 18 ವರ್ಷಕ್ಕೆ ಸ್ತನವನ್ನು ಕಸಿ ಮಾಡಿಸಿಕೊಳ್ಳಲು ಒಬ್ಬರು ಸಲಹೆ ನೀಡಿದ್ದರು ಎಂದು ಹೇಳುವ ಮೂಲಕವಾಗಿ ಸುದ್ದಿಯಾಗಿದ್ದಾರೆ.
ದೀಪಿಕಾ ಪಡುಕೋಣೆ ಫಿಲಂಫೇರ್ ಸಂದರ್ಶನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಅವರಿಗೆ ಒಂದು ಪ್ರಶ್ನೆಯನ್ನು ಕೇಳಲಾಗಿತ್ತು. ನಿಮಗೆ ಒಳ್ಳೆಯ ಮತ್ತು ಕೆಟ್ಟ ಸಲಹೆಯನ್ನು ಯಾರಾದರೂ ನೀಡಿದ್ದಾರಾ? ಎಂದು ಕೇಳಲಾಗಿತ್ತು. ಒಳ್ಳೆಯ ಸಲಹೆಯನ್ನು ನನಗೆ ಶಾರೂಖ್ ಖಾನ್ ಕೊಟ್ಟಿದ್ದಾರೆ. 15 ವರ್ಷಗಳ ಹಿಂದೆ ನಾನು ಅವರೊಂದಿಗೆ ಸಿನಿಮಾ ಮಾಡಿದ್ದೆ. ಅವರು ನನಗೆ ಸಾಕಷ್ಟು ಒಳ್ಳೆಯ ಹಾಗೂ ಮೌಲ್ಯಯುತವಾದ ಸಲಹೆ ಕೊಟ್ಟಿದ್ದಾರೆ. ನಿಮಗೆ ಒಳ್ಳೆಯ ಸಮಯ ಬರುತ್ತದೆ, ಸಿನಿಮಾದಲ್ಲಿ ಗುರುತಿಸಿಕೊಳ್ಳುತ್ತೀರಿ, ಒಳ್ಳೆಯ ಕ್ಷಣಗಳನ್ನು ನೀವು ಅನುಭವಿಸುತ್ತೀರಿ ಎಂದು ಹೇಳಿದ್ದರು ಎಂದಿದ್ದಾರೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ
ನನಗೆ ಕೆಟ್ಟ ಸಲಹೆಯನ್ನು ಒಬ್ಬರು ಕೊಟ್ಟಿದ್ದರು. ನಾನು 18 ವರ್ಷವಳಿದ್ದಾಗಲೇ ನನಗೆ ಸ್ತನವನ್ನು ಕಸಿ ಮಾಡಿಸಿಕೊಳ್ಳಲು ಹೇಳಿದ್ದರು. ಆದರೆ ನಾನು ಆ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಹೇಳಿದರು. ದೀಪಿಕಾ ಪಡುಕೋಣೆ ಅವರ ಈ ಉತ್ತರ ಮಾತ್ರ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿರುವುದು ಅಂತೂ ಸತ್ಯ. ಇದನ್ನೂ ಓದಿ: ಮತ್ತೆ ಕಂಗನಾಗೆ ಬಂತು ಕಂಟಕ – ‘ಲಾಕ್‍ಆಪ್’ ವಿರುದ್ಧ ಕಾಪಿರೈಟ್
ಗೆಹ್ರೈಯಾನ್ ಸಿನಿಮಾವನ್ನು ಶಕುನ್ ಬಾತ್ರಾ ನಿರ್ದೇಶಿಸಿದ್ದು, ಈ ಸಿನಿಮಾದಲ್ಲಿ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ನಟಿಸಿದ್ದರು. ಅಲ್ಲೆದೆ ಈ ಸಿನಿಮಾದಲ್ಲಿ ದೀಪಿಕಾ ಭಿನ್ನ ಪಾತ್ರವನ್ನು ನಿರ್ವಹಿಸಿದ್ದು, ಪ್ರೇಕ್ಷಕರು ಯಾವ ರೀತಿ ತನ್ನನ್ನು ಒಪ್ಪಿಕೊಳ್ಳುತ್ತಾರೆ ಎಂಬ ಕುತೂಹಲ ಅವರಲ್ಲಿಯೂ ಇತ್ತು. ಇದೇ ತಿಂಗಳು ಗೆಹ್ರೈಯಾನ್ ಸಿನಿಮಾ ಓಟಿಟಿಯಲ್ಲಿ ರಿಲೀಸ್ ಸಹ ಆಗಿತ್ತು. ಸಿನಿಮಾ ನೋಡಿದ ಪ್ರೇಕ್ಷಕರು, ಸಿನಿಮಾ ತಾರೆಯರು ಮತ್ತು ವಿಮರ್ಶಕರಿಂದ ದೀಪಿಕಾ ಅಭಿನಯಕ್ಕೆ ಮತ್ತು ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ಗೆಹ್ರೈಯಾನ್’ ಸಕ್ಸಸ್ ಸೆಲೆಬ್ರೇಟ್ ಮಾಡಲು ಬೆಂಗಳೂರಿಗೆ ಬರ್ತಿದ್ದಾರೆ ದೀಪಿಕಾ!