ಬೆಂಗಳೂರು: ರಾಜ್ಯ ಲೋಕಾಯುಕ್ತ (Karnataka Lokayukta) ಸಂಸ್ಥೆಯಲ್ಲಿ ಸಾವಿರಾರು ಕೇಸ್‌ಗಳು ಬಾಕಿ ಉಳಿದಿರುವುದು ಕಂಡುಬಂದಿದೆ. ಸುಮಾರು 18 ಸಾವಿರಕ್ಕೂ ಹೆಚ್ಚು ಕೇಸ್‌ಗಳು (Lokayukta Case File) ವಿಚಾರಣೆ ಆಗದೇ, ಕಡತಗಳು ಮೂಲೆ ಸೇರಿವೆ.
ಕಳೆದ ಜುಲೈ ತಿಂಗಳ ಅಂತ್ಯದ ವರೆಗೆ 18 ಸಾವಿರ ಕೇಸ್‌ಗಳು ಲೋಕಾಯುಕ್ತದದಲ್ಲಿ ಬಾಕಿಯಿವೆ ಎಂದು ಕೇಸ್ ಡಿಟೇಲ್ಸ್‌ನಲ್ಲಿ ತಿಳಿದುಬಂದಿದೆ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆಯೇ ಕೊಟ್ಟಿರುವ ಕೇಸ್ ಡಿಟೇಲ್ಸ್ ಪ್ರತಿ ʻಪಬ್ಲಿಕ್ ಟಿವಿʼಗೆ ಲಭ್ಯವಾಗಿದೆ. ಇದನ್ನೂ ಓದಿ: ಕಲಬುರಗಿಯಲ್ಲಿ ನಾಟಕ ಕಂಪನಿಯನ್ನು ತಂದು ನಾಟಕ ತೋರಿಸಿ ಹೋಗಿದ್ದಾರೆ: ಛಲವಾದಿ ಲೇವಡಿ
ಎಸಿಬಿ ರದ್ದಾದ ಬಳಿಕ ಎಲ್ಲಾ ಕೇಸ್‌ಗಳು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲಾಗಿತ್ತು. ಹಾಗಾಗಿ ಎಸಿಬಿ + ಲೋಕಾಯುಕ್ತದಲ್ಲಿ ದಾಖಲಾದ ಕೇಸ್‌ಗಳ ಪೈಕಿ ಸುಮಾರು 18 ಸಾವಿರ ಕೇಸ್‌ಗಳು ವಿಚಾರಣೆಯಾಗದೇ ಬಾಕಿ ಉಳಿದಿದೆ. ದೂರು ದಾಖಲಾಗಿದ್ದರೂ ಕೆಲವು ಕಾರಣಗಳಿಂದ ವಿಚಾರಣೆ ಬಾಕಿ ಉಳಿದಿದೆ ಅಂತ ಲೋಕಾಯುಕ್ತ ಅಧಿಕಾರಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹಿಜ್ಬುಲ್ಲಾ ಮೇಲೆ ಫಿಲ್ಮಿ ಸ್ಟೈಲ್ ದಾಳಿ – ಒಂದೇ ಸಮಯದಲ್ಲಿ 2 ಸಾವಿರ+ ಪೇಜರ್‌ಗಳು ಸ್ಫೋಟಗೊಂಡಿದ್ದು ಹೇಗೆ?
ಲೋಕಾಯುಕ್ತರ ಮುಂದೆ ಎಷ್ಟು ಕೇಸ್ ಬಾಕಿ!?
ಮಾನ್ಯ ಲೋಕಾಯುಕ್ತರು- 5495 ಕೇಸ್ ಬಾಕಿ.
ಉಪ ಲೋಕಾಯುಕ್ತ 1- 7028 ಕೇಸ್ ಬಾಕಿ.
ಉಪ ಲೋಕಾಯುಕ್ತ 2- 6363 ಕೇಸ್ ಬಾಕಿ.
ಒಟ್ಟು – 18,886 ಕೇಸ್ ಬಾಕಿ