ನವದೆಹಲಿ: ಕೇಂದ್ರ ಸರ್ಕಾರ ಸಿದ್ಧಪಡಿಸಿರುವ ನೂತನ ಮೋಟಾರು ವಾಹನ ತಿದ್ದುಪಡಿ ಮಸೂದೆಯ ವಿರುದ್ಧ ದೇಶಾದ್ಯಂತ ಸಾರಿಗೆ ಸಂಘಟನೆಗಳು ಆಗಸ್ಟ್ 7 ರಂದು ಮುಷ್ಕರಕ್ಕೆ ಕರೆ ನೀಡಿವೆ. ಈ ಶಾಸನ ಕಾಯ್ದೆಯಾಗಿ ಜಾರಿಯಾದರೆ ಮರಣಶಾಸನ ಎಂದು ಸಂಘಟನೆಗಳು ಆರೋಪಿಸಿವೆ. ಸಂಘಟನೆಗಳ ಆಕ್ರೋಶಕ್ಕೆ ತುತ್ತಾಗಿರುವ ತಿದ್ದುಪಡಿ ಮಸೂದೆಯಲ್ಲಿ ಏನಿದೆ ಎನ್ನುವುದಕ್ಕೆ ಇಲ್ಲಿ 18 ಪ್ರಮುಖ ವಿಚಾರಗಳನ್ನು ನೀಡಲಾಗಿದೆ.
ಮಸೂದೆಯಲ್ಲಿರುವ ಪ್ರಮುಖ ಅಂಶಗಳು:
1. ಚಾಲನಾ ಪರವಾನಿಗೆ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯ.
Advertisement
2. ಹಿಟ್-ಅಂಡ್-ರನ್ ಪ್ರಕರಣಗಳಲ್ಲಿ ಸಾವನ್ನಪ್ಪಿದ ಕುಟುಂಬದವರಿಗೆ ಈಗ ಸರ್ಕಾರದಿಂದ ಸಿಗುವ ಪರಿಹಾರ ಧನದ ಮೊತ್ತ 25 ಸಾವಿರ ರೂ ನೀಡುವ ಬದಲು 2 ಲಕ್ಷ ರೂಪಾಯಿಗೆ ಹೆಚ್ಚಳ.
Advertisement
Advertisement
3. ಅಪ್ರಾಪ್ತರು ವಾಹನ ಚಾಲನೆ ನಡೆಸಿ ಅಪಘಾತ ನಡೆಸಿದರೆ ವಾಹನ ಮಾಲೀಕರು ಅಥವಾ ಪೋಷಕರ ಮೇಲೆ ಕೇಸ್ ದಾಖಲಿಸುವುದು. ಒಂದು ವೇಳೆ ಪೋಷಕರಿಗೆ ತಿಳಿಯದೇ ಕೃತ್ಯ ಎಸಗಿದರೆ ಕೇಸ್ ದಾಖಲಿಸದೇ ಇರುವುದು. ಬಾಲನ್ಯಾಯ ಕಾಯ್ದೆಯ ಅಡಿಯಲ್ಲಿ ಈ ಪ್ರಕರಣಗಳನ್ನು ವಿಚಾರಣೆ ನಡೆಸುವುದು.
Advertisement
4. ಅಪಘಾತಗಳಲ್ಲಿ ಗಾಯಗೊಂಡವರ ರಕ್ಷಣೆಗೆ ಧಾವಿಸುವವರ ಮೇಲೆ ಯಾವುದೇ ಕೇಸುಗಳನ್ನು ದಾಖಲಿಸಬಾರದು, ಪೊಲೀಸರು ಮತ್ತು ಆಸ್ಪತ್ರೆಗಳು ರಕ್ಷಿಸಿದವರ ಮಾಹಿತಿಯನ್ನು ಕೇಳಬಾರದು.
5. ಕುಡಿದು ವಾಹನ ಚಾಲನೆ ಎಸಗಿದರೆ ವಿಧಿಸಲಾಗುತ್ತಿದ್ದ ದಂಡದ ಪ್ರಮಾಣ 10 ಸಾವಿರ ರೂ.ಗೆ ಏರಿಕೆ. ಈಗ 2 ಸಾವಿರ ರೂ. ವಿಧಿಸಲಾಗುತ್ತಿದೆ.
6. ನಿರ್ಲಕ್ಷ್ಯ ವಾಹನ ಚಾಲನೆಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತ 1 ಸಾವಿರ ರೂ. ನಿಂದ 5 ಸಾವಿರ ರೂ.ಗೆ ಏರಿಕೆ.
7. ಚಾಲನಾ ಪರವಾನಿಗೆ ಇಲ್ಲದೆ, ವಾಹನ ಚಲಾಯಿಸಿದರೆ 500 ರೂ. ದಂಡದ ಬದಲು 5 ಸಾವಿರಕ್ಕೆ ಏರಿಕೆ.
8. ಓವರ್ ಸ್ಪೀಡಿಂಗ್ ಗೆ ವಿಧಿಸಲಾಗುತ್ತಿದ್ದ ದಂಡ 400 ರೂ. ಬದಲು 1 ಸಾವಿರ ರೂ, 2 ಸಾವಿರ ರೂ.ಗೆ ಏರಿಕೆ.
9. ಸೀಟ್ ಬೆಲ್ಟ್ ಧರಿಸದೇ ವಾಹನ ಚಲಾಯಿಸಿದರೆ 100 ರೂ. ಇದ್ದ ದಂಡವನ್ನು 1 ಸಾವಿರಕ್ಕೆ ಏರಿಕೆ.
10. ವಾಹನ ಚಾಲನೆ ವೇಳೆ ಮೊಬೈಲ್ ಬಳಸಿ ಸಿಕ್ಕಿಬಿದ್ದಲ್ಲಿ 1 ಸಾವಿರದಿಂದ 5 ಸಾವಿರ ರೂ.ಗೆ ದಂಡ ಏರಿಕೆ.
11. ಅಪಘಾತ ಸಂದರ್ಭಗಳಲ್ಲಿ ಎಲ್ಲಾ ಗಾಯಗೊಂಡ, ಸಾವನ್ನಪ್ಪಿದ ವ್ಯಕ್ತಿಗಳಿಗೆ ಕಡ್ಡಾಯ ವಿಮೆ.
12.ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಅಗತ್ಯಕ್ಕೆ ತಕ್ಕಂತೆ ವಾಹನ ಬದಲಾವಣೆ ಮಾಡಿಕೊಡಲು ಅನುಮತಿ ನೀಡಬೇಕು.
13. ಕಳಪೆ ಕಾಮಗಾರಿ ಹಾಗೂ ರಸ್ತೆಯನ್ನು ಸರಿಯಾಗಿ ನಿರ್ಮಾಣ ಮಾಡದೇ ಸಂಭವಿಸುವ ಅಪಘಾತಗಳಲ್ಲಿ ಕಾಮಗಾರಿ ನಡೆಸಿದ ಕಂಟ್ರಾಕ್ಟರ್, ಎಂಜಿನಿಯರ್ ಹಾಗೂ ಅಧಿಕಾರಿಗಳನ್ನು ಹೊಣೆಯಾಗಿಸುವುದು.
14. ಅಪಘಾತ ಸಂಭವಿಸಿದ 6 ತಿಂಗಳ ಒಳಗಡೆ ಸಂತ್ರಸ್ತರಿಗೆ ವಿಮೆ ಮೊತ್ತ ಪಾವತಿ ಮಾಡುವಂತೆ ಅವಧಿ ನಿಗದಿ.
15. 2016ರ ಮಸೂದೆಯಲ್ಲಿದ್ದ ಮೂರನೇ ವ್ಯಕ್ತಿ ವಿಮಾ ಯೋಜನೆ ರದ್ದು. ಈ ಹಿಂದಿನ ಮಸೂದೆಯಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವ್ಯಕ್ತಿಗೆ 5 ಲಕ್ಷ ರೂ. ಹಾಗೂ ಸಾವನ್ನಪ್ಪಿದ್ದ ವ್ಯಕ್ತಿಗೆ 10 ಲಕ್ಷ ರೂ. ವಿಮೆ ನೀಡಬೇಕಿತ್ತು.
16. ಚಾಲನಾ ಪರವಾನಗಿ ಅವಧಿ ನವೀಕರಣವನ್ನು ಸುಲಭಗೊಳಿಸಲು ಅವಧಿ ಮುಗಿಯುವ ಒಂದು ತಿಂಗಳ ಮೊದಲು ಅಥವಾ ಅವಧಿ ಮುಗಿದ ಒಂದು ವರ್ಷದವರೆಗೆ ನವೀಕರಣಕ್ಕೆ ಅನುಮತಿ.
17. ನಿಗದಿಪಡಿಸಿದ ಮಾನದಂಡದ ಪ್ರಕಾರ ಗುಣಮಟ್ಟದ ಭಾಗಗಳು ಅಥವಾ ಎಂಜಿನ್‍ಗಳು ಇಲ್ಲದೇ ಇದ್ದಲ್ಲಿ ಆ ವಾಹನಗಳನ್ನು ಸರ್ಕಾರ ಹಿಂದಕ್ಕೆ ಪಡೆದುಕೊಳ್ಳಬಹುದು. ಅಷ್ಟೇ ಅಲ್ಲದೇ ಉತ್ಪಾದಕಾ ಕಂಪೆನಿಗಳಿಗೆ 500 ಕೋಟಿ ರೂ. ದಂಡ ವಿಧಿಸಲು ಅವಕಾಶ.
18. ವಾಣಿಜ್ಯ ವಾಹನಗಳ ಗರಿಷ್ಠ ಬಳಕೆ ಅವಧಿ 20 ವರ್ಷಕ್ಕೆ ಸೀಮಿತಗೊಳಿಸಿರುವುದು