ಬಂಡುಕೋರರ ಜೊತೆ ಗುಂಡಿನ ದಾಳಿ; 18 ಪಾಕ್‌ ಸೈನಿಕರು ಸಾವು – 23 ಉಗ್ರರ ಹತ್ಯೆ

Public TV
1 Min Read
Pakistans civil and military security forces

ಇಸ್ಲಾಮಾಬಾದ್‌: ಬಲೂಚಿಸ್ತಾನದ ವಾಯುವ್ಯ ಪ್ರದೇಶದಲ್ಲಿ ಪ್ರತ್ಯೇಕತಾವಾದಿ ದಂಗೆಕೋರರೊಂದಿಗಿನ ಘರ್ಷಣೆಯಲ್ಲಿ ಪಾಕಿಸ್ತಾನದ 18 ಸೈನಿಕರು ಸಾವಿಗೀಡಾಗಿದ್ದಾರೆ. ಇದೇ ವೇಳೆ, 23 ಬಂಡುಕೋರರು ಹತರಾಗಿದ್ದಾರೆ.

ಅಫ್ಘಾನಿಸ್ತಾನದ ಗಡಿಯಲ್ಲಿರುವ ಕಲಾತ್‌ನಲ್ಲಿ ಪ್ರಮುಖ ಹೆದ್ದಾರಿಯಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿದ ದಂಗೆಕೋರರ ವಿರುದ್ಧದ ಗುಂಡಿನ ದಾಳಿಯಲ್ಲಿ ಸೈನಿಕರು ಪಾಕ್‌ ಸೈನಿಕರು ಮೃತಪಟ್ಟಿದ್ದಾರೆ ಎಂದು ಸೇನೆ ತಿಳಿಸಿದೆ.

ಶನಿವಾರ ಬೆಳಿಗ್ಗೆ ರಾತ್ರಿಯಿಡೀ ನಡೆದ ಹೋರಾಟದ ನಂತರ ಭದ್ರತಾ ಪಡೆಗಳು ರಸ್ತೆ ತಡೆಯನ್ನು ತೆರವುಗೊಳಿಸುವಲ್ಲಿ ಯಶಸ್ವಿಯಾಗಿವೆ.

2024ರ ಡಿಸೆಂಬರ್‌ನಲ್ಲಿ ಭದ್ರತಾ ಪಡೆಗಳು 925 ದಂಗೆಕೋರರನ್ನು ಕೊಂದಿವೆ. ಇದು ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ದಾಖಲೆಯ ಗರಿಷ್ಠ ಮಟ್ಟದ್ದಾಗಿದೆ. ಆದರೆ ಕಳೆದ ವರ್ಷ ಇಂತಹ ಕಾರ್ಯಾಚರಣೆಗಳಲ್ಲಿ 383 ಸೈನಿಕರು ಸಾವನ್ನಪ್ಪಿದ್ದರು.

ಬಂಡುಕೋರರ ದಾಳಿಗಳನ್ನು ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಬಲೂಚಿಸ್ತಾನದ ಪ್ರಾಂತೀಯ ನಾಯಕರು ಖಂಡಿಸಿದ್ದಾರೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದ್ದಕ್ಕೆ ಸೇನೆಯನ್ನು ಶ್ಲಾಘಿಸಿದ್ದಾರೆ.

Share This Article