ಕಜಕಿಸ್ತಾನ: ಇಂಧನ ಬೆಲೆ ಏರಿಕೆ ಹಿನ್ನೆಲೆ ಕಜಕಿಸ್ತಾನಲ್ಲಿ ಜನ ನಡೆಸುತ್ತಿರುವ ಪ್ರತಿಭಟನೆಗೆ 18 ಅಧಿಕಾರಿಗಳು ಸಾವನ್ನಪ್ಪಿದ್ದಾರೆ.
ರಸ್ತೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ಈ ವೇಳೆ ಅಧಿಕಾರಿಗಳ ಮೇಲೆಯೇ ಹಲ್ಲೆ ಮಾಡಿದ್ದಾರೆ.
Advertisement
Advertisement
ಈ ಪರಿಣಾಮ ಪ್ರತಿಭಟನೆಯನ್ನು ನಿಯಂತ್ರಿಸಲಾಗದ ಹಿನ್ನೆಲೆಯಲ್ಲಿ ಇಲ್ಲಿನ ಸರ್ಕಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ಪ್ರತಿಭಟನಾಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿ ವಿಫಲವಾಗಿದೆ. ಪರಿಣಾಮ ಗಲಾಟೆ ಉಲ್ಬಣಗೊಂಡಿದ್ದು, ಈ ಘರ್ಷಣೆಯಲ್ಲಿ 18 ಅಧಿಕಾರಿಗಳು ಸಾವನ್ನಪ್ಪಿದ್ದು, 748 ಮಂದಿಗೆ ಗಾಯಗೊಂಡಿದ್ದಾರೆ. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ 2,298 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ‘RRR’ ಸಿನಿಮಾ ಬಿಡುಗಡೆಯಾಗಬಾರದು: ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿನಿ
Advertisement
Advertisement
2021ರಲ್ಲಿ ಎಲ್‍ಪಿಜಿ ಬೆಲೆ 1 ಲೀಟರ್‌ಗೆ 50 ಟೆಂಗೆ (ಅಂದಾಜು 8.53 ರೂಪಾಯಿ) ಇತ್ತು. ಈ ಬೆಲೆಯು ವರ್ಷದ ಕೊನೆಯಲ್ಲಿ 79-80 ಟೆಂಗೆಗೆ (ಅಂದಾಜು 13.64 ರೂಪಾಯಿ) ಏರಿಕೆಯಾಗಿದೆ. ನಂತರ 2022ರ ಆರಂಭದಲ್ಲಿ ಈ ಬೆಲೆ ಏಕಾಏಕಿ 120 ಟೆಂಗೆ (ಅಂದಾಜು 20.47 ರೂಪಾಯಿ)ಗೆ ಏರಿಕೆಯಾಗಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.