ಹುಬ್ಬಳ್ಳಿ: 18 ತಿಂಗಳ ಮಗುವೊಂದು ಆಟವಾಡಲು ಹೋಗಿ ನೀರಿನ ಸಂಪಿನಲ್ಲಿ ಬಿದ್ದು ಸಾವನ್ನಪ್ಪಿರೋ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದ ಘಂಟಿಕೇರಿ ನಿವಾಸಿಗಳಾದ ರಾಘವೇಂದ್ರ ಹಾಗೂ ರೂಪಾ ಕಟ್ಟಿಮನಿ ಎಂಬುವರ ನಿಶಾನ್ ನೀರಿನ ಸಂಪಿಗೆ ಬಿದ್ದು ಮೃತಪಟ್ಟಿದ್ದಾನೆ. ಆ ಮಗು ಸಾವನ್ನಪ್ಪಿದ ದುಃಖದಲ್ಲಿಯೂ ಕೂಡ ನೇತ್ರದಾನ ಮಾಡಿ ತಂದೆ ತಾಯಿಗಳು ಮಾನವೀಯತೆ ಮೆರೆದಿದ್ದಾರೆ.
Advertisement
ಗುರುವಾರ ಸಂಜೆ ನೀರು ಬಂದ ಹಿನ್ನೆಲೆಯಲ್ಲಿ ಮನೆಮಂದಿಯಲ್ಲ ನೀರು ತುಂಬುವ ಕೆಲಸದಲ್ಲಿ ಮಗ್ನರಾಗಿದ್ದರು. ಆ ವೇಳೆ ನಿಶಾನ್ ಆಟವಾಡುತ್ತಾ ಮನೆ ಮುಂದೆ ಇರೋ ನೀರಿನ ಸಂಪಿಗೆ ಬಿದ್ದಿದ್ದಾನೆ.
Advertisement
ಕುಟುಂಬಸ್ಥರು ಎಲ್ಲಾ ಕಡೇ ಹುಡುಕಾಡಿದರೂ ನಿಶಾನ್ ಪತ್ತೆಯಾಗಿರಲಿಲ್ಲ. ಹೀಗಾಗಿ ಅನುಮಾನಗೊಂಡು ಸಂಪ್ ನೋಡಿದಾಗ ಮಗುವನ್ನು ಕಂಡಿದ್ದಾರೆ. ಕೂಡಲೇ ಮಗುವನ್ನು ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರೂ ಅಷ್ಟರಲ್ಲೇ ನಿಶಾನ್ ಪ್ರಾಣ ಪಕ್ಷಿ ಹೋಗಿತ್ತು.