ಕೊಪ್ಪಳ: ಪಾರ್ಟ್ ಟೈಂ ಜಾಬ್ ಹೆಸರಲ್ಲಿ 18 ಲಕ್ಷ ರೂ.ಯನ್ನು ಗುತ್ತಿಗೆದಾರನೊಬ್ಬ ಕಳೆದುಕೊಂಡಿರುವ ಘಟನೆ ಕೊಪ್ಪಳ ಜಿಲ್ಲೆಯಲ್ಲಿ ನಡೆದಿದೆ.
ವಂಚನೆಗೊಳಗಾದ ವ್ಯಕ್ತಿಯನ್ನು ಕೊಪ್ಪಳದ (Koppal) ಭಾಗ್ಯನಗರದ ಅನಿಕೇತ ದೇವಪುರಕರ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಅಲ್ಲು ಅರ್ಜುನ್‌ಗೆ ಮತ್ತೆ ಸಂಕಷ್ಟ – ಜಾಮೀನು ಪ್ರಶ್ನಿಸಿ ತೆಲಂಗಾಣ ಪೊಲೀಸರು ಸುಪ್ರೀಂ ಮೆಟ್ಟಿಲೇರುವ ಸಾಧ್ಯತೆ
Advertisement
Advertisement
ಸೈಬರ್ ವಂಚಕರು ಪಾರ್ಟ್ ಟೈಂ ಜಾಬ್ ಹೆಸರಲ್ಲಿ ಬಲೆ ಬೀಸಿದ್ದು, ಟೆಲಿಗ್ರಾಂ ಆಪ್ ಮೂಲಕ ಪರಿಚಯಿಸಿಕೊಂಡಿದ್ದಾರೆ. ಬಳಿಕ ಟಾಸ್ಕ್ಗಳನ್ನು ಪೂರ್ಣಗೊಳಿಸಿದರೆ ಪಾರ್ಟ್ ಟೈಂ ಜಾಬ್ ಕೊಡಿಸುವುದಾಗಿ ನಂಬಿಸಿದ್ದಾರೆ. ಇದನ್ನು ನಂಬಿದ ಅನಿಕೇತ, ತನ್ನ ಯೂನಿಯನ್ ಬ್ಯಾಂಕ್ ಖಾತೆಯಿಂದ 2.25 ಲಕ್ಷ ರೂ., ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 12 ಸಾವಿರ ರೂ., ಐಡಿಎಫ್‌ಸಿ ಬ್ಯಾಂಕ್ ಖಾತೆಯಿಂದ 50 ಸಾವಿರ ರೂ., ಎಚ್‌ಡಿಎಫ್‌ಸಿ ಬ್ಯಾಂಕ್ ಖಾತೆಯಿಂದ 9.53 ಲಕ್ಷ ರೂ. ಒಟ್ಟು 12.41 ಲಕ್ಷ ರೂ.ಗಳನ್ನು ವಂಚಕರು ಹೇಳಿದ ಬ್ಯಾಂಕ್ ಖಾತೆಗೆ ಹಾಕಿದ್ದಾರೆ.
Advertisement
ಇಷ್ಟಲ್ಲದೇ, ತಮ್ಮ ತಾಯಿ ಹೆಸರಿನಲ್ಲಿದ್ದ ಎಸ್‌ಬಿಐ ಬ್ಯಾಂಕ್ ಖಾತೆಯಿಂದ 1.80 ಲಕ್ಷ ರೂ., ಸಹೋದರನ ಬ್ಯಾಂಕ್ ಆಫ್ ಇಂಡಿಯಾ ಖಾತೆಯಿಂದ 90 ಸಾವಿರ ರೂ., ಮಾವನ ಐಡಿಬಿಐ ಬ್ಯಾಂಕ್ ಖಾತೆಯಿಂದ 3.30 ಲಕ್ಷ ರೂ. ಹಾಗೂ ಸ್ನೇಹಿತರಿಂದ 1 ಲಕ್ಷ ರೂ. ಪಡೆದು ಅದನ್ನೂ ಹಾಕಿದ್ದಾರೆ. ಒಟ್ಟು 19.41 ಲಕ್ಷ ರೂ.ಗಳನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ.
Advertisement
ಮೂರು ದಿನದ ಬಳಿಕ ವಂಚನೆ ಆಗಿರುವುದು ಗೊತ್ತಾಗಿದೆ. ವಂಚಕರು 1.18 ಲಕ್ಷ ರೂ. ಮರಳಿ ಖಾತೆಗೆ ಹಾಕಿದ್ದಾರೆ. ಬಾಕಿ ಹಣ ನೀಡದೇ ಯಾಮಾರಿಸಿದ್ದಾರೆ. ಬಳಿಕ ಎಚ್ಚೆತ್ತು ಕೊಪ್ಪಳ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಇದನ್ನೂ ಓದಿ: ಅಭಿವ್ಯಕ್ತಿ ಸ್ವಾತಂತ್ರ‍್ಯ ಮೊಟಕುಗೊಳಿಸಲು ಕಾಂಗ್ರೆಸ್ ಸಂವಿಧಾನ ತಿದ್ದುಪಡಿ – ಅಮಿತ್ ಶಾ ವಾಗ್ದಾಳಿ