ದಿಸ್ಪುರ್: ಅಸ್ಸಾಂನ (Assam) ದಿಮಾ ಹಸಾವೊ ಜಿಲ್ಲೆಯಲ್ಲಿರುವ 300 ಅಡಿ ಆಳದ ರ‍್ಯಾಟ್ ಹೋಲ್ ಮೈನಿಂಗ್ (Rat Hole Mine) ಒಂದರಲ್ಲಿ ನೀರು ತುಂಬಿದ್ದು, ಸುಮಾರು 18 ಕಾರ್ಮಿಕರು ಸಿಲುಕಿದ್ದಾರೆ.
ಕ್ವಾರಿಯಲ್ಲಿ ಸುಮಾರು 100 ಅಡಿ ನೀರು ತುಂಬಿದೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಮತ್ತು ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದ್ದು. ಎರಡು ಪಂಪ್‌ಗಳನ್ನು ಬಳಸಿಕೊಂಡು ನೀರನ್ನು ಖಾಲಿ ಮಾಡುತ್ತಿದ್ದಾರೆ. ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ತಂಡಗಳು ಸ್ಥಳಕ್ಕೆ ಧಾವಿಸಿವೆ.
Advertisement
ಪ್ರಸ್ತುತ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆಯ ನೆರವನ್ನು ಕೋರಲಾಗಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ (Himanta Biswa Sarma) ಹೇಳಿದ್ದಾರೆ.
Advertisement
Advertisement
ರ‍್ಯಾಟ್ ಹೋಲ್ ಗಣಿಗಾರಿಕೆಯು ಅಪಾಯಕಾರಿ ತಂತ್ರವಾಗಿದ್ದು, ಕಿರಿದಾದ ಸುರಂಗಗಳನ್ನು ಕಾರ್ಮಿಕರು ಕೈಯಾರೆ ಅಗೆಯುತ್ತಾರೆ. ಈ ಸುರಂಗಗಳು ಆಳವಾದ ಹೊಂಡಗಳಿಗೆ ಕಾರಣವಾಗುತ್ತವೆ. ಇದರಿಂದ ಕಲ್ಲಿದ್ದಲು ಗಣಿಗಾರಿಕೆ ಮಾಡಲಾಗುತ್ತದೆ. ಗಣಿಗಳಿಂದ ಹೊರಸೂಸುವ ಆಮ್ಲೀಯ ನೀರು ಮತ್ತು ಭಾರೀ ಲೋಹಗಳು ಕೃಷಿ ಮತ್ತು ಮಾನವ ಬಳಕೆಗೆ ಬಳಸುವ ನೀರಿನ ಮೂಲಗಳಿಗೆ ವಿಷಕಾರಿಯಾಗಿವೆ.
Advertisement
2018 ರಲ್ಲಿ ಮೇಘಾಲಯದ ಪೂರ್ವ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಅಕ್ರಮ ಕಲ್ಲಿದ್ದಲು ಗಣಿಗೆ ಹತ್ತಿರದ ನದಿಯಿಂದ ನೀರು ನುಗ್ಗಿತ್ತು. ಸುಮಾರು 15 ಕಾರ್ಮಿಕರು ಸಿಕ್ಕಿಬಿದ್ದಿದ್ದರು. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ 2 ಮೃತದೇಹಗಳನ್ನು ಮಾತ್ರ ತೆಗೆಯುವಲ್ಲಿ ಯಶಸ್ವಿಯಾಗಿತ್ತು.